ರಾಜಯೋಗ ‘B.A ಗಂಡು’ ಹಾಡಿಗೆ ಅಭಿಷೇಕ್ ಅಂಬರೀಶ್ ಸಾಥ್

Rajayoga Kannada Movie: ನಿನ್ನೆಯ ಬಗ್ಗೆ, ನಾಳೆಯ ಕುರಿತು ಯೋಚಿಸದೆ, ಪ್ರೆಸೆಂಟ್ ಲೈಫ್ ಮೇಲೆ ಗಮನ ಹರಿಸಿದರೆ ನಮ್ಮ ಜೀವನ ಚೆನ್ನಾಗಿರುತ್ತದೆ ಎಂದು ಹೇಳುವ ಕಥೆಯಿದಾಗಿದ್ದು, 3 ಹಂತಗಳಲ್ಲಿ 45 ದಿನಗಳವರೆಗೆ  ಚಿತ್ರೀಕರಿಸಲಾಗಿದೆ.

Written by - YASHODHA POOJARI | Edited by - Puttaraj K Alur | Last Updated : Oct 16, 2023, 10:48 PM IST
  • ರಾಜಯೋಗದ ‘ನಗಬ್ಯಾಡ್ವೇ ನನ್ನಕಂಡು, ನಾನೂ B.A ಮಾಡಿದ ಗಂಡು’ ಹಾಡು ಬಿಡುಗಡೆ
  • ಇಡೀ ಚಿತ್ರತಂಡಕ್ಕೆ ಸಾಥ್ ನೀಡಿ ಶುಭ ಹಾರೈಸಿದ ನಟ ಅಭಿಷೇಕ್ ಅಂಬರೀಶ್
  • 3 ಹಂತಗಳಲ್ಲಿ 45 ದಿನಗಳವರೆಗೆ ಚಿತ್ರೀಕರಿಸಿರುವ ‘ರಾಜಯೋಗ’ ಸಿನಿಮಾ
ರಾಜಯೋಗ ‘B.A ಗಂಡು’ ಹಾಡಿಗೆ ಅಭಿಷೇಕ್ ಅಂಬರೀಶ್ ಸಾಥ್  title=
'B.A ಮಾಡಿದ ಗಂಡು’ ಹಾಡು ಬಿಡುಗಡೆ

ಬೆಂಗಳೂರು: ಪೋಷಕ ನಟರಾಗಿದ್ದ ಧರ್ಮಣ್ಣ ಕಡೂರು ಮೊದಲ ಬಾರಿಗೆ  ನಾಯಕನಾಗಿ ನಟಿಸಿರುವ ಚಿತ್ರ ರಾಜಯೋಗ. ಲಿಂಗರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ  ರಿಲೀಸಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ  ವೀಕ್ಷಣೆಯಾಗುತ್ತಿದೆ. 

ಇದರ ಬೆನ್ನಲ್ಲೇ ಈಗ ‘ನಗಬ್ಯಾಡ್ವೇ ನನ್ನಕಂಡು, ನಾನೂ B.A ಮಾಡಿದ ಗಂಡು’ ಎಂಬ ಹಾಡು  ಬಿಡುಗಡೆಯಾಗಿದೆ. ನಟ ಅಭಿಷೇಕ್ ಅಂಬರೀಶ್ ಅವರು ಈ ಹಾಡನ್ನು ರಿಲೀಸ್ ಮಾಡಿ ಮಾತನಾಡುತ್ತಾ, ‘ರಾಜಯೋಗ ಚಿತ್ರದ ಮೊದಲ ಹಾಡನ್ನು ನೋಡಿದೆ. ನನ್ನ ಕಡೆಯಿಂದ ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆ. ಇದರಲ್ಲಿ ನಾಯಕ ಧರ್ಮಣ್ಣ, ನಾಯಕಿ ನಿರೀಕ್ಷಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ‌. ಸಂಗೀತ ನಿರ್ದೇಶಕ ಅಕ್ಷಯ್ ರಿಶಭ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ವಿಶೇಷವಾಗಿ ನವಜೊಡಿಗಳು ಈ ಹಾಡನ್ನು ತುಂಬಾ ಇಷ್ಟಪಡುತ್ತಾರೆ ಎಂದು ಭಾವಿಸುತ್ತೇನೆ. ಎಲ್ಲರೂ ಸಿನಿಮಾನ ನೋಡಿ’ ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಬಿಕಿನಿಯಲ್ಲಿ ಬುಟ್ಟ ಬೊಮ್ಮ.. ಪೂಜಾ ಹೆಗ್ಡೆ ಹಾಟ್‌ ಲುಕ್‌ಗೆ ಫ್ಯಾನ್ಸ್‌ ಫಿದಾ!

ಲಿಂಗರಾಜ ಉಚ್ಚಂಗಿದುರ್ಗ ಅವರು ಕಥೆ-ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಶ್ರೀರಾಮರತ್ನ ಪ್ರೊಡಕ್ಷನ್ಸ್ ಮೂಲಕ  ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ನೀರಜ್ ಗೌಡ ಅಲ್ಲದೆ ಧರ್ಮಣ್ಣ ಸಹೋದರ ಹೊನ್ನಪ್ಪ ಕಡೂರು ಸೇರಿ ನಿರ್ಮಾಣ ಮಾಡಿದ್ದಾರೆ. ನಿನ್ನೆಯ ಬಗ್ಗೆ, ನಾಳೆಯ ಕುರಿತು ಯೋಚಿಸದೆ, ಪ್ರೆಸೆಂಟ್ ಲೈಫ್ ಮೇಲೆ ಗಮನ ಹರಿಸಿದರೆ ನಮ್ಮ ಜೀವನ ಚೆನ್ನಾಗಿರುತ್ತದೆ ಎಂದು ಹೇಳುವ ಕಥೆಯಿದಾಗಿದ್ದು, 3 ಹಂತಗಳಲ್ಲಿ 45 ದಿನಗಳವರೆಗೆ  ಚಿತ್ರೀಕರಿಸಲಾಗಿದೆ.

ಅಕ್ಷಯ್ ರಿಶಭ್ ಅವರ ಸಂಗೀತ, ವಿಷ್ಣುಪ್ರಸಾದ್ ಅವರ ಕ್ಯಾಮೆರಾ,  ಬಿ.ಎಸ್.ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ, ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವುತಾರ್, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಚಿತ್ರದ ಪ್ರಮುಖ ಪಾತ್ರ ವರ್ಗದಲ್ಲಿದ್ದಾರೆ.

ಇದನ್ನೂ ಓದಿ: Janhvi Kapoor: ಮೈಚಳಿ ಬಿಡಿಸುವಂತಿದೆ ಶ್ರೀದೇವಿ ಪುತ್ರಿಯ ಹಾಟ್‌ ಲುಕ್‌...ಪೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News