ಹಾಲಿವುಡ್ ನಲ್ಲಿನ ನಟನಾ ಅನುಭವ ಭಾರತದಲ್ಲಿ ಕೆಲಸದ ಅನುಭವವಾಗಿ ಪರಿವರ್ತನೆಯಾಗುವುದಿಲ್ಲ- ನಟಿ ನಿಮ್ರಾತ್ ಕೌರ್

     

Last Updated : Jan 23, 2018, 07:02 PM IST
ಹಾಲಿವುಡ್ ನಲ್ಲಿನ ನಟನಾ ಅನುಭವ ಭಾರತದಲ್ಲಿ ಕೆಲಸದ ಅನುಭವವಾಗಿ ಪರಿವರ್ತನೆಯಾಗುವುದಿಲ್ಲ- ನಟಿ ನಿಮ್ರಾತ್ ಕೌರ್   title=

ನವದೆಹಲಿ: ಹಾಲಿವುಡ್ ನಲ್ಲಿ ನಟಿಸುವುದನ್ನು ಸಾಮಾನ್ಯವಾಗಿ ನಟನಾ ವೃತ್ತಿಯಲ್ಲಿ ಅವಕಾಶವನ್ನು ಹೆಚ್ಚಿಸುತ್ತದೆ ಎನ್ನುವ ಮನೋಭಾವ ಇದೆ.ಆದರೆ ನಿಮ್ರತ್ ಕೌರ್ ಅವರ  ಪ್ರಕಾರ ವಿದೇಶದಲ್ಲಿನ ಕಾರ್ಯನಿರ್ವಹಣೆಯು ಭಾರತದಲ್ಲಿ ಕೆಲಸದ ಅನುಭವವಾಗಿ ಪರಿಗಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಾದಲ್ಲಿ  "ಹೋಮ್ಲ್ಯಾಂಡ್" ಮತ್ತು "ವೇಯ್ವರ್ಡ್ ಪೈನ್ಸ್" ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರೂ, ಕೂಡಾ  ಭಾರತದಲ್ಲಿ ಕೆಲಸ ಮಾಡಬೇಕಾದಾಗ ಇಲ್ಲಿ ನಟಿಸಿರುವ  ಚಲನಚಿತ್ರಗಳ ಕುರಿತು ಹೆಚ್ಚು ಮಾನ್ಯತೆ ನೀಡುತ್ತಾರೆ ಎಂದು ನಿಮ್ರತ್ ಕೌರ್ ಅಭಿಪ್ರಾಯಪಟ್ಟಿದ್ದಾರೆ. 

"ನಾನು ವಿದೇಶದಲ್ಲಿ ಕೆಲಸ ಮಾಡಿದ್ದೇನೆ ಆದರೆ ಅದು  ನಿಜವಾಗಿಯೂ ಇಲ್ಲಿ ಕೆಲಸದ ಅನುಭವವಾಗಿ ಪರಿವರ್ತನೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ, ಹಾಗಾಗಿ ನಾನು ಕೇವಲ ಎರಡು ಚಿತ್ರಗಳಲ್ಲಿ ಅಷ್ಟೇ ನಟಿಸಿದ್ದೇನೆ ಎಂದು ನಿಮ್ರಾತ್ ಕೌರ್ ತಿಳಿಸಿದ್ದಾರೆ.

with PTI inputs 

Trending News