Ambareesh's Birthday: ಅಪ್ಪನ ಹುಟ್ಟುಹಬ್ಬಕ್ಕೆ ಅಭಿಷೇಕ್ ನಟನೆಯ ಬ್ಯಾಡ್ ಮ್ಯಾನರ್ಸ್ ಚಿತ್ರತಂಡದಿಂದ ಬಿಗ್ ಗಿಫ್ಟ್...!

Bad Manners: ಬ್ಯಾಡ್ ಮ್ಯಾನರ್ಸ್'.. ಇದು ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ನಟನೆಯ ಬಹುನಿರೀಕ್ಷೆಯ ಸಿನಿಮಾ. ಈ ಸಿನಿಮಾದ ಬಗ್ಗೆ ನಿರೀಕ್ಷೆಯಂತೂ ಸಿಕ್ಕಾಪಟ್ಟೆ ದುಪ್ಪಟ್ಟಾಗಿದೆ.ಸೂರಿ ನಿರ್ದೇಶನದಲ್ಲಿ ‘ಬ್ಯಾಡ್​ ಮ್ಯಾನರ್ಸ್​’ ಚಿತ್ರ ಸಿದ್ಧವಾಗಿದೆ.

Written by - Zee Kannada News Desk | Last Updated : May 29, 2023, 10:33 AM IST
  • ಅಭಿಷೇಕ್ ಅಂಬರೀಷ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಬ್ಯಾಡ್ ಮ್ಯಾನರ್ಸ್'..
  • ಸೂರಿ ನಿರ್ದೇಶನದಲ್ಲಿ ‘ಬ್ಯಾಡ್​ ಮ್ಯಾನರ್ಸ್​’ ಚಿತ್ರ
  • ಬ್ಯಾಡ್ ಮ್ಯಾನರ್ಸ್ ಚಿತ್ರತಂಡ ಒಂದುವರೆ ನಿಮಿಷ ಟೀಸರ್ ರಿಲೀಸ್
Ambareesh's Birthday: ಅಪ್ಪನ ಹುಟ್ಟುಹಬ್ಬಕ್ಕೆ ಅಭಿಷೇಕ್ ನಟನೆಯ ಬ್ಯಾಡ್ ಮ್ಯಾನರ್ಸ್ ಚಿತ್ರತಂಡದಿಂದ ಬಿಗ್ ಗಿಫ್ಟ್...! title=

ಬೆಂಗಳೂರು: 'ಬ್ಯಾಡ್ ಮ್ಯಾನರ್ಸ್'.. ಇದು ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ನಟನೆಯ ಬಹುನಿರೀಕ್ಷೆಯ ಸಿನಿಮಾ. ಈ ಸಿನಿಮಾದ ಬಗ್ಗೆ ನಿರೀಕ್ಷೆಯಂತೂ ಸಿಕ್ಕಾಪಟ್ಟೆ ದುಪ್ಪಟ್ಟಾಗಿದೆ. ಸೂರಿ ನಿರ್ದೇಶನದಲ್ಲಿ ‘ಬ್ಯಾಡ್​ ಮ್ಯಾನರ್ಸ್​’ ಚಿತ್ರ ಸಿದ್ಧವಾಗಿದೆ.

ಅಭಿಷೇಕ್​ ಅಂಬರೀಷ್​ ಬರ್ತ್​ಡೇ ಪ್ರಯುಕ್ತ ಈ ಸಿನಿಮಾದ ಟೀಸರ್​ ರಿಲೀಸ್​ ಆಗಿತ್ತು . ದೊಡ್ಡ ಮಟ್ಟದಲ್ಲಿ ಸುದ್ದಿ ಕೂಡ ಆಗಿತ್ತು. ಇವತ್ತೂ ಅಂಬರೀಷ್ ಅವರ ಹುಟ್ಟುಹಬ್ಬದ ಹಿನ್ನಲೆ ಬ್ಯಾಡ್ ಮ್ಯಾನರ್ಸ್ ಚಿತ್ರತಂಡ ಒಂದುವರೆ ನಿಮಿಷ ಟೀಸರ್ ರಿಲೀಸ್ ಮಾಡಿದೆ.ಇದು ಚಿತ್ರದ ಬಗ್ಗೆ ಇದ್ದ  ನಿರೀಕ್ಷೆಯನ್ನ ಇನ್ನೂ ಹೆಚ್ಚಿಸಿದೆ. ಅರೇ ಯಾವಾಗಪ್ಪ ಸಿನಿಮಾ ರಿಲೀಸ್ ಅನ್ನೋರಿಗೆ ಕೂಡ ಬ್ರೇಕಿಂಗ್ ನ್ಯೂಸ್ ಕೊಡ್ತೀವಿ.

ಇದನ್ನೂ ಓದಿ:Shobitha Shivanna: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿಟ್ಲರ್ ಕಲ್ಯಾಣ ನಟಿ ಮಿಲ್ಕಿ ಬ್ಯೂಟಿ!

ಹೌದು,

ಜೂನ್ ತಿಂಗಳಲ್ಲೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.ಅಭಿಷೇಕ್​ ಅಂಬರೀಷ್​ ನಟಿಸುತ್ತಿರುವ ‘ಬ್ಯಾಡ್​ ಮ್ಯಾನರ್ಸ್​’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿಯಾಗಲು ಅನೇಕ ಕಾರಣಗಳಿವೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ‘ದುನಿಯಾ’ ಸೂರಿ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ .

ಚಿತ್ರದ ಶೀರ್ಷಿಕೆ ಕೂಡ ಗಮನ ಸೆಳೆಯುತ್ತಿದೆ. ರಗಡ್​ ಸಿನಿಮಾಗಳನ್ನು ಮಾಡುವಲ್ಲಿ ಸೂರಿ ಫೇಮಸ್​. ಅಭಿಷೇಕ್​ ಅವರನ್ನು ಆ ರೀತಿ ನೋಡಲು ಫ್ಯಾನ್ಸ್​ ಬಯಸುತ್ತಾರೆ.ಬ್ಯಾಡ್​ ಮ್ಯಾನರ್ಸ್​’ ಚಿತ್ರದಲ್ಲಿ ಅಭಿಷೇಕ್ ಅವರು ಭರ್ಜರಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂಬುದಕ್ಕೆ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಇನ್ನು, ಖಡಕ್​ ಡೈಲಾಗ್​ಗಳನ್ನೂ ಅವರು ಹೊಡೆದಿದ್ದಾರೆ.

ಇದನ್ನೂ ಓದಿ:Dare Devil Mustafa : ‘ಡೇರ್ ಡೆವಿಲ್ ಮುಸ್ತಾಫಾ’...ಎರಡನೇ ವಾರ ಸಕ್ಸಸ್ ಫುಲ್ ಪ್ರದರ್ಶನ!

ಜೂನ್ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗಲಿದ್ದು ಡೇಟ್ ಮಾತ್ರ ಚಿತ್ರತಂಡ ಅನೌನ್ಸ್ ಮಾಡಬೇಕಿದೆ. ಸೋ ಬೆಳ್ಳಿ ತೆರೆ ಮೇಲೆ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News