ಬೆಂಗಳೂರು: ಕರ್ನಾಟಕದ ಹಿರಿಯ ನಟ ಹಾಗೂ ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದಿದ್ದು ಅದರಲ್ಲಿ ಅಭಿಷೇಕ್ ಗೆ ಸಂಬಂಧಿಸಿದಂತೆ ಸುದ್ದಿ ಹಾಗೂ ಫೋಟೋಗಳು ಇತ್ತೀಚಿಗೆ ಕಾಣಿಸಿಕೊಳ್ಳುತ್ತಿವೆ. ಆದರೆ ಇದು ನಕಲಿ ಟ್ವಿಟ್ಟರ್ ಖಾತೆ ಇದನ್ನು ನಿರ್ಲಕ್ಷಿಸಿ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಹೊರ ದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಅಭಿಷೇಕ್ ಚಿತ್ರರಂಗಕ್ಕೆ ಬರುವ ಬಗ್ಗೆ ಈ ಹಿಂದೆ ಸುಮಲತಾ ಅಂಬರೀಶ್ ಖುದ್ದಾಗಿ ತಿಳಿಸಿದ್ದರು. ಆದರೆ ಬೆಳ್ಳಿ ಪರದೆಯ ಮೇಲೆ ಅಭಿ ಯಾವಾಗ ಕಾಣಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಸುಮಲತಾ ತಿಳಿಸಿರಲಿಲ್ಲ.