Bad Manners Movie: ಬ್ಯಾಡ್‌ಮ್ಯಾನರ್ಸ್ ಸಿನಿಮಾದ ಯಂಗ್​ ರೆಬೆಲ್​ ಸ್ಟಾರ್ ಪೊಲೀಸ್ ಲುಕ್ ಗೆ ಫ್ಯಾನ್ಸ್‌ ಫುಲ್‌ ಖುಷ್...!

Abhishek Ambareesh New Look: ಡೈರೆಕ್ಟರ್ ಸೂರಿ ನಿರ್ದೇಶನ  ಹಾಗೂ ಅಭಿಷೇಕ್ ಅಂಬರೀಶ್ ನಟನೆಯ  ಬ್ಯಾಡ್‌ಮ್ಯಾನರ್ಸ್  ಸಿನಿಮಾ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಖಡಕ್‌ ಪೊಲೀಸ್ ಆಫೀಸರ್ ಅಧಿಕಾರಿಯಾಗಿ ವೀಕ್ಷಕರ ಮುಂದೆ ಬರಲಿದ್ದಾರೆ.

Written by - Zee Kannada News Desk | Last Updated : May 18, 2023, 05:37 PM IST
  • ಬ್ಯಾಡ್‌ಮ್ಯಾನರ್ಸ್ ಸಿನಿಮಾದ ಯಂಗ್​ ರೆಬೆಲ್​ ಸ್ಟಾರ್​ ಲುಕ್ ರಿವೀಲ್
  • ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್‌ಮ್ಯಾನರ್ಸ್ ಸಿನಿಮಾ
  • ಬಾರಿ ಸದ್ದು ಮಾಡುತ್ತಿರುವ ಡೈರೆಕ್ಟರ್ ಸೂರಿ ನಿರ್ದೇಶನದ ಈ ಚಿತ್ರ
Bad Manners Movie: ಬ್ಯಾಡ್‌ಮ್ಯಾನರ್ಸ್ ಸಿನಿಮಾದ ಯಂಗ್​ ರೆಬೆಲ್​ ಸ್ಟಾರ್ ಪೊಲೀಸ್ ಲುಕ್ ಗೆ ಫ್ಯಾನ್ಸ್‌ ಫುಲ್‌ ಖುಷ್...!  title=

ಬೆಂಗಳೂರು: ಅಭಿಷೇಕ್ ಅಂಬರೀಶ್ ಸದ್ಯ ಬ್ಯಾಡ್‌ಮ್ಯಾನರ್ಸ್ ಸಿನಿಮಾದಲ್ಲಿ ಬ್ಯೂಸಿ ನಡುವೆ ಇತ್ತ ಮುಂದಿನ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅದರ ನಡುವೆ ತಾಯಿ ಸುಮಲತಾ  ಅಂಬರೀಶ್ ರಾಜಕೀಯ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದ್ದರು. ಈಗಾಗಲೇ ಇವರ ಬ್ಯಾಡ್‌ಮ್ಯಾನರ್ಸ್ ಚಿತ್ರದ  ಟೀಸರ್ ಕೂಡ ಬಿಡುಗಡೆಯಾಗಿ ಬಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: National Crush: ರಶ್ಮಿಕಾ ಮಂದಣ್ಣನನ್ನು ಬದಿಗೊತ್ತಿ ನ್ಯಾಷನಲ್​ ಕ್ರಶ್​ ಪಟ್ಟ ಪಡೆದ ಟಾಲಿವುಡ್‌ ಬೆಡಗಿ ..!

ಬ್ಯಾಡ್‌ಮ್ಯಾನರ್ಸ್ ಟೀಸರ್ ಪ್ರೇಕ್ಷಕರಲ್ಲಿ ಸಿನಿಮಾದ ಮೇಲಿನ ನೀರಿಕ್ಷೆ ಹೆಚ್ಚಿಸಿದೆ. ಸದ್ಯ ಈ ಸಿನಿಮಾದ ಹಾಡೊಂಡು ಬಾರಿ ಸದ್ದು ಮಾಡುತ್ತಿದೆ. ಹಿರಿಯ ಹಾಸ್ಯ ನಟ ಉಮೇಶ್ ಧ್ವನಿಯಲ್ಲಿ ಮೂಡಿದ ಒಂದು ಎಣ್ಣೆ ಹಾಡು ಬಾರಿ ಕಿಕ್‌ ಕೊಡುತ್ತಿದೆ. ಡೈರೆಕ್ಟರ್ ಸೂರಿ ನಿರ್ದೇಶನದ ಈ ಸಿನಿಮಾವನ್ನು ತಮ್ಮದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 

ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಖಡಕ್‌ ಪೊಲೀಸ್ ಆಫೀಸರ್ ಅಧಿಕಾರಿಯಾಗಿ, ವೀಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ವೈರಲ್‌ ಆಗಿರುವ ಯಂಗ್​ ರೆಬೆಲ್ ಸ್ಟಾರ್‌ ಲುಕ್‌ ಗೆ ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ.  

ಇದನ್ನೂ ಓದಿ: Matte Maduve Film: ಖಾಸಗಿ ಜೀವನ ಸುದ್ದಿಗೆ ಆಹಾರವಾಗಿದ್ದು ಬೇಸರ ತರಿಸಿದೆ - ಪವಿತ್ರಾ ಲೋಕೆಶ್

ಸದ್ಯ ಬ್ಯಾಡ್‌ಮ್ಯಾನರ್ಸ್ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ  ಸುದ್ದಿ ಸದ್ಯಕ್ಕೆ ಹರಿದಾಡುತ್ತಿದೆ. ಆದರೆ ಅಧಿಕೃತವಾಗಿ ಸಿನಿಮಾ ತಂಡ ಎಲ್ಲೂ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. 

ಈ ಸಿನಿಮಾದ ಕೆಲವು  ಪೋಷ್ಟರ್‌ಗಳು ಸಿನಿಮಾ ಮೇಲಿನ ನೀರಿಕ್ಷೆ ಹೆಚ್ಚಿಸಿದೆ. ಅದರ ನಡುವೆ ಅಭಿಷೇಕ್ ಅಂಬರೀಶ್ ರವರ ಸದ್ಯದಲ್ಲೇ ಮದುವೆ ಇರುವುದರಿಂದ, ಇತ್ತ ಮದುವೆ ಆಮಂತ್ರಣ ನೀಡಿ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸುತ್ತಿದ್ದಾರೆ. ಸದ್ಯ ಯಂಗ್​ ರೆಬೆಲ್ ಸ್ಟಾರ್‌ ಸಿನಿಮಾ ಹಾಗೂ ವಯಕ್ತಿಕ ಜೀವನ ಎರಡನ್ನೂ ನಿಭಾಯಿಸುವುದರಲ್ಲಿ ಬ್ಯೂಸಿಯಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News