ವಿಕ್ರಾಂತ್ ರೋಣ ದೃಶ್ಯ ಚಮತ್ಕಾರಕ್ಕಿತ್ತು 800 ಕ್ಕೂ ಅಧಿಕ ವಿಎಫ್‌ಎಕ್ಸ್ ಕಲಾವಿದರ ಟೀಮ್...!

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು, ಇದೆ ವೇಳೆ ಚಿತ್ರದ ಕುರಿತಾಗಿ ಅನೇಕ ಅಚ್ಚರಿಯ ಸಂಗತಿಗಳು ಹೊರ ಬರುತ್ತಿವೆ.ಹೌದು, ಈಗ ಬಂದಿರುವ ಮಾಹಿತಿ ಪ್ರಕಾರ ವಿಕ್ರಾಂತ್ ರೋಣದ ವೈಭವನ್ನು ಸೃಷ್ಟಿಸಲು 800 ಕ್ಕೂ ಹೆಚ್ಚು VFX ಕಲಾವಿದರ ತಂಡ ಇದಕ್ಕಾಗಿ ಕಾರ್ಯ ನಿರ್ವಹಿಸಿದೆ ಎನ್ನಲಾಗಿದೆ.

Written by - Zee Kannada News Desk | Last Updated : Jul 27, 2022, 04:24 PM IST
  • ಜಾಕ್ ಮಂಜುನಾಥ್ ಅವರ ನಿರ್ಮಾಣದ ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡಿದ್ದಾರೆ.
  • ಇದನ್ನು ಉತ್ತರ ಭಾರತದಲ್ಲಿ ಪಿವಿಆರ್ ಪಿಕ್ಚರ್ಸ್ ವಿತರಿಸಲಿದೆ.
ವಿಕ್ರಾಂತ್ ರೋಣ ದೃಶ್ಯ ಚಮತ್ಕಾರಕ್ಕಿತ್ತು 800 ಕ್ಕೂ ಅಧಿಕ ವಿಎಫ್‌ಎಕ್ಸ್ ಕಲಾವಿದರ ಟೀಮ್...! title=

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದು, ಇದೆ ವೇಳೆ ಚಿತ್ರದ ಕುರಿತಾಗಿ ಅನೇಕ ಅಚ್ಚರಿಯ ಸಂಗತಿಗಳು ಹೊರ ಬರುತ್ತಿವೆ.ಹೌದು, ಈಗ ಬಂದಿರುವ ಮಾಹಿತಿ ಪ್ರಕಾರ ವಿಕ್ರಾಂತ್ ರೋಣದ ವೈಭವನ್ನು ಸೃಷ್ಟಿಸಲು 800 ಕ್ಕೂ ಹೆಚ್ಚು VFX ಕಲಾವಿದರ ತಂಡ ಇದಕ್ಕಾಗಿ ಕಾರ್ಯ ನಿರ್ವಹಿಸಿದೆ ಎನ್ನಲಾಗಿದೆ.

ವಿಕ್ರಾಂತ್ ರೋಣ ಭಾರತೀಯ ಚಿತ್ರರಂಗದ ಅತಿದೊಡ್ಡ 3D ಅನುಭವ ಎಂದು ಹೇಳಲಾಗುತ್ತದೆ.ಈ ಕುರಿತಾಗಿ ಮಾತನಾಡಿದ ನಟ ಕಿಚ್ಚ ಸುದೀಪ್, “ವಿಎಫ್‌ಎಕ್ಸ್ ಬಳಕೆ ಅದ್ಭುತವಾಗಿದೆ. ಇದು ನನಗೆ ಹೆಚ್ಚು ಕಲಿಕೆಯ ಅನುಭವವಾಗಿತ್ತು.ದೃಶ್ಯಗಳು ತುಂಬಾ ಆಕರ್ಷಕವಾಗಿವೆ ಮತ್ತು ಚಿತ್ರವನ್ನು ಅಭಿಮಾನಿಗಳು ನೋಡಿ ಆನಂದಿಸುತ್ತಾರೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಮಂತಾ - ನಾಗ ಚೈತನ್ಯ ವಿಚ್ಛೇದನಕ್ಕೆ ಅಮೀರ್ ಖಾನ್ ಕಾರಣವೇ!?

ಈ ಕುರಿತು ಮಾತನಾಡಿದ ನಿರ್ದೇಶಕ ಅನುಪ್ ಭಂಡಾರಿ, “ಚಿತ್ರದ ಪ್ರಮಾಣವು ತುಂಬಾ ದೊಡ್ಡದಾಗಿದೆ, ಮತ್ತು ಚಿತ್ರದಲ್ಲಿ ಸಾಕಷ್ಟು ಶಾಟ್‌ಗಳು 3D ಗೆ ಹೇಳಿ ಮಾಡಿಸಿದವು. ಇದನ್ನು ಜನರು ನಿಜವಾಗಿಯೂ ಆನಂದಿಸುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದರು.

ಕಿಚ್ಚ ಸುದೀಪ್ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ವಿಕ್ರಾಂತ್ ರೋಣ ಕೂಡ ಒಂದು. ಚಿತ್ರವು ಒಂದು ರೀತಿಯ ಥ್ರಿಲ್ಲಿಂಗ್ ಅನುಭವ ಎಂದು ಹೇಳಬಹುದು, ಕೇವಲ ದೃಶ್ಯವೈಭವಷ್ಟೇ ಅಲ್ಲದೆ ಸಂಗೀತ, ಕಥೆಯಿಂದಲೂ ಕೂಡ ಶ್ರೀಮಂತಿಕೆಯನ್ನು ಹೊಂದಿದೆ, ವಿಕ್ರಾಂತ್ ರೋಣ ಚಿತ್ರವು ಜುಲೈ 28 ರಂದು ವಿಶ್ವಾದ್ಯಂತ 3D ನಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'Vikrant Rona' ಬಿಡುಗಡೆಗೆ ವಿಶ್ವಾದ್ಯಂತ ಕೌಂಟ್ ಡೌನ್ ಶುರು..!

ಇದನ್ನು ಉತ್ತರ ಭಾರತದಲ್ಲಿ ಸಲ್ಮಾನ್ ಖಾನ್ ಫಿಲ್ಮ್ಸ್, ಜೀ ಸ್ಟುಡಿಯೋಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತವೆ. ಜಾಕ್ ಮಂಜುನಾಥ್ ಅವರ ನಿರ್ಮಾಣದ ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡಿದ್ದಾರೆ.ಇದನ್ನು ಉತ್ತರ ಭಾರತದಲ್ಲಿ ಪಿವಿಆರ್ ಪಿಕ್ಚರ್ಸ್ ವಿತರಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News