12th Fail Actor: ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿ 12th ಫೇಲ್ ವಿಕ್ರಾಂತ್!

Vikranth Massey: ಬಾಲಿವುಡ್‌ನ ನಟ ವಿಕ್ರಾಂತ್ ಮಾಸ್ಸೆ ತಮ್ಮ 12th ಫೇಲ್‌ ಸಿನಿಮಾದ ಸಕ್ಸಸ್‌ ಬಳಿಕ, ಮತ್ತೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಕ್ರಾಂತ್ ಹಾಗೂ ಶೀತಲ್‌ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Feb 9, 2024, 10:58 AM IST
  • ನಟ ವಿಕ್ರಾಂತ್‌ ಫೆಬ್ರವರಿ 2022 ರಲ್ಲಿ, ಅವರ ದೀರ್ಘಕಾಲದ ಸ್ನೇಹಿತೆ ಶೀತಲ್ ಠಾಕೂರ್ ಆತ್ಮೀಯ ಸಮಾರಂಭದಲ್ಲಿ ವಿವಾಹ ಮಾಡಿಕೊಂಡರು.
  • ನಟ ವಿಕ್ರಾಂತ್‌ ಹಾಗೂ ಶೀತಲ್ ಠಾಕೂರ್ , ಎರಡು ವರ್ಷಗಳ ವೈವಾಹಿಕ ಆನಂದದ ನಂತರ, ದಂಪತಿಗಳು ಈಗ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.
  • ವಿಕ್ರಾಂತ್ ಮತ್ತು ಶೀತಲ್ ಮೊದಲ ಬಾರಿಗೆ ಅಲ್ಟ್ ಬಾಲಾಜಿಯ ‘ಬ್ರೋಕನ್ ಬಟ್ ಬ್ಯೂಟಿಫುಲ್’ ವೆಬ್ ಸಿರೀಸ್‌ನ ಶೂಟಿಂಗ್‌ ಸೆಟ್‌ನಲ್ಲಿ ಭೇಟಿಯಾದರು.
12th Fail Actor: ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿ 12th ಫೇಲ್ ವಿಕ್ರಾಂತ್! title=

12th Fail Actor Vikranth Massey: ಬಾಲಿವುಡ್‌ ನಟ ವಿಕ್ರಾಂತ್ ಮಾಸ್ಸೆ ಅಭಿನಯದ 12th ಫೇಲ್‌ ಸಿನಿಮಾ ಕೆಲವು ತಿಂಗಳ ಹಿಂದಷ್ಟೇ ತೆರೆ ಕಂಡು ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತು. ಸದ್ಯ ಈ ಚಿತ್ರದ ಬಗ್ಗೆ ಇವತ್ತಿಗೂ ಸಹ ಜನರು ಮಾತಾಡುತ್ತಿದ್ದು, ಈ ಸಿನಿಮಾದಿಂದಾಗಿ ನಟ ವಿಕ್ರಾಂತ್ ತುಂಬಾನೇ ಜನಪ್ರಿಯತೆಯನ್ನು ಗಳಿಸಿದರು. ನಟ ವಿಕ್ರಾಂತ್‌ ಫೆಬ್ರವರಿ 2022 ರಲ್ಲಿ, ಅವರ ದೀರ್ಘಕಾಲದ ಸ್ನೇಹಿತೆ ಶೀತಲ್ ಠಾಕೂರ್ ಆತ್ಮೀಯ ಸಮಾರಂಭದಲ್ಲಿ ವಿವಾಹ ಮಾಡಿಕೊಂಡರು. ಇದೀಗ ಈ ನಟ ಗಂಡು ಮಗುವಿಗೆ ತಂದೆಯಾಗಿದ್ದಾರೆ. 

ನಟ ವಿಕ್ರಾಂತ್‌ ಹಾಗೂ ಶೀತಲ್ ಠಾಕೂರ್ , ಎರಡು ವರ್ಷಗಳ ವೈವಾಹಿಕ ಆನಂದದ ನಂತರ, ದಂಪತಿಗಳು ಈಗ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಈ ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್ ಫೆಬ್ರವರಿ 7 ಬುಧವಾರದಂದು ಈ ಸಿಹಿಸುದ್ದಿಯನ್ನು ಘೋಷಿಸಿದ್ದಾರೆ. ಆ ಪೋಸ್ಟ್‌ನಲ್ಲಿ ಈ ಜೋಡಿ ಗಂಡುಪೋಷಕರಾಗಿರುವುದು ತುಂಬಾನೇ ಸಂತೋಷ ತಂದಿದೆ ಎಂದು ಬರೆದಿದ್ದಾರೆ. ಇದಕ್ಕೆ ಈ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಸೋಭಿತಾ ಧೂಲಿಪಾಲ, ರಾಶಿ ಖನ್ನಾ, ಸುಹೇಲ್ ನಯ್ಯರ್, ಅಂಶುಮಾನ್ ಝಾ ಮತ್ತು ಮನೀಷ್ ಮಲ್ಹೋತ್ರಾ ಸೇರಿದಂತೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು ದಂಪತಿಗಳನ್ನು ಅಭಿನಂದಿಸಿ, ಶುಭಾಶಯಗಳನ್ನು ತಿಳಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Vikrant Massey (@vikrantmassey)

ಇದನ್ನೂ ಓದಿ: Pushpa 2: ಪುಷ್ಪ ಪಾರ್ಟ್‌-2 ಅಪ್‌ಡೇಟ್‌ ರವೀಲ್:‌ ಏನಂದ್ರು ಡೈರೆಕ್ಟರ್‌ ಸುಕುಮಾರ್!

 ವಿಕ್ರಾಂತ್ ಮತ್ತು ಶೀತಲ್ ಮೊದಲ ಬಾರಿಗೆ ಅಲ್ಟ್ ಬಾಲಾಜಿಯ ‘ಬ್ರೋಕನ್ ಬಟ್ ಬ್ಯೂಟಿಫುಲ್’ ವೆಬ್ ಸಿರೀಸ್‌ನ  ಶೂಟಿಂಗ್‌ ಸೆಟ್‌ನಲ್ಲಿ ಭೇಟಿಯಾದರು. ಇದು ಮುಂದೆ ಅವರಿಬ್ಬರ ನಡುವೆ ಪ್ರಣಯ ಸಂಬಂಧವನ್ನು ಹುಟ್ಟುಹಾಕಿದ್ದು, ಬಳಿಕ ಈ ಜೋಡಿಯ ನಿಶ್ಚಿತಾರ್ಥವು ನವೆಂಬರ್ 2019 ರಲ್ಲಿ ನಡೆಯಿತು. ಆದರೆ ಈ ದಂಪತಿಗಳು ತಮ್ಮ ವೈಯಕ್ತಿಕ ಜೀವನದ ಬಗ್ಗೆ ತುಂಬಾನೇ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಾರೆ. ಈ ಹಿಂದೆ ಸಂದರ್ಶನದಲ್ಲಿ ವೈವಾಹಿಕ ಜೀವನದ ಕುರಿತು ಮಾತಾಡುತ್ತಾ ‘12th ಫೇಲ್’ ಚಿತ್ರದ ನಟ ವಿಕ್ರಾಂತ್ ಅವರು ಶೀತಲ್ ಅವರೊಂದಿಗಿನ ತನ್ನ ಸಂಬಂಧದ ಬಗ್ಗೆ ಹೇಳಿದರು. 

ನಟ ವಿಕ್ರಾಂತ್‌ ಪತ್ನಿ ಶೀತಲ್ ಅವರ ಜೀವನದಲ್ಲಿ ಬಂದ ನಂತರದಲ್ಲಿ ಆದಂತಹ ಧನಾತ್ಮಕ ಬದಲಾವಣೆಗಳ ಬಗ್ಗೆ ಹೇಳುತ್ತಾ ತುಂಬಾನೇ ಖುಷಿ ಪಟ್ಟರು. ಗೌಪ್ಯತೆಯ ಕಡೆಗೆ ದಂಪತಿಗಳ ಒಲವಿನ ಹೊರತಾಗಿಯೂ, ವಿಕ್ರಾಂತ್ ತನ್ನ ಆತ್ಮೀಯ ಸ್ನೇಹಿತೆಯನ್ನು ಮದುವೆಯಾಗಿದ್ದಕ್ಕಾಗಿ ತುಂಬಾನೇ ಕೃತಜ್ಞತೆಯನ್ನು ವ್ಯಕ್ತಪಡಿಸಿ ಮತ್ತು ಅವರ ಹೊಸ ಮನೆ ಸೇರಿದಂತೆ ಹೊಸ ಸಂತೋಷದ ವಿಚಾರಗಳನ್ನು ಸಹ ಹಂಚಿಕೊಂಡರು. ನಟ ವಿಕ್ರಾಂತ್‌ ‘12th ಫೇಲ್’ ಚಿತ್ರದಲ್ಲಿನ ಅಭಿನಯವು ತುಂಬಾನೇ ಮೆಚ್ಚುಗೆಯನ್ನು ಗಳಿಸಿತು, ವಿಶೇಷವಾಗಿ ಅದರ ಓಟಿಟಿ ಬಿಡುಗಡೆಯ ನಂತರ ಆ ಚಿತ್ರಕ್ಕೆ ಅಭಿಮಾನಿಗಳಿಂದ ತುಂಬಾನೇ ಮೆಚ್ಚುಗೆ ಸಿಕ್ಕಿತು.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News