ಉತ್ತರದ ಕೈರಾನಾಕ್ಕೂ ದಕ್ಷಿಣದ ಧಾರವಾಡಕ್ಕೂ ಇದೆ ಸಂಗೀತದ ನಂಟು!

    

Last Updated : May 31, 2018, 12:19 PM IST
ಉತ್ತರದ ಕೈರಾನಾಕ್ಕೂ ದಕ್ಷಿಣದ ಧಾರವಾಡಕ್ಕೂ ಇದೆ ಸಂಗೀತದ ನಂಟು! title=

ಈಗ ಉತ್ತರ ಪ್ರದೇಶದ ಕೈರಾನಾ ರಾಜಕೀಯ ಕಾರಣಕ್ಕಾಗಿ ಬಹಳ ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಲೋಕಸಭಾ ಉಪಚುನಾವಣೆ,ಈ ಚುನಾವಣೆಯ ಫಲಿತಾಂಶ ದೂರಗಾಮಿ ಪರಿಣಾಮ ಹೊಂದಿರುವ ಕಾರಣದಿಂದಾಗಿ ಈ ಕ್ಷೇತ್ರಕ್ಕೆ ಈಗ ಭಾರಿ ಡಿಮ್ಯಾಂಡು ಬಂದಿದೆ. ಆದರೆ ನಾವು ಈಗ ಇಲ್ಲಿ ಹೇಳ ಹೊರಟಿರುವ ಸಂಗತಿ ಅದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಅದು ಕರ್ನಾಟಕದ ಧಾರವಾಡ ಮತ್ತು ಉತ್ತರ ಪ್ರದೇಶದ ಕೈರಾನಾಗಿರುವ ನಂಟಿನ ಕೂರಿತಾದದ್ದು.

ಹೌದು, ಎರಡು ಕ್ಷೇತ್ರಗಳ ನಡುವಿನ ಬಂಧಕ್ಕೆ ಶತಮಾನದ ಇತಿಹಾಸವಿದೆ. ಆ ಸಂಬಂಧವು ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ಮೂಲಕ ಬೆಳೆದುಬಂದಿರುವುಂತದ್ದು,ಇದಕ್ಕೆ ಕಾರಣ ಕೈರಾನಾದವರಾದ ಅಬ್ದುಲ್ ಕರಿಂ ಖಾನ್. ಮೂಲತಃ ಹಿಂದೂಸ್ತಾನಿ ಸಂಗಿತದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ಅವರು ಮುಂದೆ ತಮ್ಮದೇ ಆದ ಸಂಗೀತ ಶೈಲಿಯನ್ನು ಅಳವಡಿಸಿಕೊಂಡರು.ಅದರ ಭಾಗವಾಗಿ ಕಿರಾನಾ ಗರಾಣಾ ಎನ್ನುವ ವಿಶಿಷ್ಟ ಶೈಲಿಯನ್ನು  ಹುಟ್ಟು ಹಾಕಿದರು. ಈ ಶೈಲಿ ಈಗ ಹೆಚ್ಚಾಗಿ ಧಾರವಾಡದ್ದೆ ಎನ್ನುವ ಪ್ರತೀತಿಯನ್ನು  ಪಡೆದಿದೆ. ಇದಕ್ಕೆ ಕಾರಣ  ಧಾರವಾಡದ ಸುತ್ತಲಿನ ಪ್ರದೇಶದವರೆ ಹೆಚ್ಚಾಗಿ ಕಿರಾನಾ ಗರಾಣಾ ಸಂಗಿತದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದಾರೆ. ಅವರಲ್ಲಿ ಪ್ರಮುಖವಾದವರು ಪದ್ಮವಿಭೂಷಣ ಗಂಗೂಬಾಯಿ ಹಾನಗಲ್,ಭಾರತ ರತ್ನ  ಭೀಮಸೇನ್ ಜೋಷಿ,ಸವಾಯಿ ಗಂಧರ್ವ, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರ್,ರಾಜಶೇಖರ್ ಮನ್ಸೂರ್, ಪಂಡಿತ್ ವೆಂಕಟೇಶ್ ಕುಮಾರ್.

ಧಾರವಾಡಕ್ಕೆ ಕಿರಾನಾ ಘರಾಣಾ ನಂಟು ಬೆಳೆದದ್ದು ಹೀಗೆ! 

ಅಬ್ದುಲ್ ಕರಿಂ ಖಾನ್ ಆಗಿನ ದಿನಗಳಲ್ಲಿ ಸಂಗೀತ ಕಛೇರಿ ನೀಡಲು ಮೈಸೂರಿಗೆ ತೆರಳಿದ್ದರು. ಆ ಸಂದರ್ಭದಲ್ಲಿ  ಅವರು ಕರ್ನಾಟಕ ಸಂಗೀತದ ಪ್ರಭಾವಕ್ಕೆ ಒಳಗಾದರು. ನಂತರದ ದಿನಗಳಲ್ಲಿ ಮೈಸೂರಿಗೆ ಸಂಗೀತ ಕಛೇರಿ ನಡೆಸಲು ಬರುತ್ತಿದ್ದ ಅವರು ಆಗ ಧಾರವಾಡದಲ್ಲಿರುವ ತಮ್ಮ ಸಹೋದರನ ಮನೆಯಲ್ಲಿ  ಉಳಿದುಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಕುಂದುಗೊಳದವರಾದ ಸವಾಯಿ ಗಂಧರ್ವ ರವರಿಗೆ ಕಿರಾನಾ ಘರಾನಾ ಶೈಲಿಯನ್ನು ಪರಿಚಯಿಸಿದರು. ಆ ಮೂಲಕ ಧಾರವಾಡದ ಭಾಗದಲ್ಲಿ ಹಿಂದೂಸ್ತಾನಿ ಸಂಗೀತದ  ಪ್ರಭಾವ ಬೀರಲು ಕಾರಣಕರ್ತರಾದರು. ಆದ್ದರಿಂದಲೆ ಈಗ ಕಿರಾಣಾ ಘರಾಣಾ ಸಂಗೀತ ಪರಂಪರೆಯು ಈ ಭಾಗಕ್ಕೆ ಹೆಚ್ಚು ತಳುಕು ಹಾಕಿಕೊಂಡಿರುವುದನ್ನು ನಾವು ಕಾಣಬಹುದು.  

 

 

 

Trending News