ಶ್ರಾವಣ ಮಾಸದಲ್ಲಿ ಶಿವ ಕೃಪೆಗೆ ಪಾತ್ರರಾಗಲು ಯಾವ ರಾಶಿಯ ಜನರು ಯಾವ ಶಿವಮಂತ್ರ ಪಠಿಸಬೇಕು?

ಇಂದಿನಿಂದ ಶ್ರಾವಣ ಮಾಸ ಆರಂಭ.  ಹಾಗಾದರೆ ಬನ್ನಿ ಯಾವ ಯಾವ ರಾಶಿಯ ಜನರು ಶ್ರಾವಣ ಮಾಸದಲ್ಲಿ ಯಾವ ಶಿವ ಮಂತ್ರ ಪಠಿಸಿ ಶಿವಕೃಪೆಗೆ ಪಾತ್ರರಾಗಬೇಕು ಎಂಬುದನ್ನು ಇಂದು ತಿಳಿಯೋಣ.  

Last Updated : Jul 6, 2020, 01:28 PM IST
ಶ್ರಾವಣ ಮಾಸದಲ್ಲಿ ಶಿವ ಕೃಪೆಗೆ ಪಾತ್ರರಾಗಲು ಯಾವ ರಾಶಿಯ ಜನರು ಯಾವ ಶಿವಮಂತ್ರ ಪಠಿಸಬೇಕು? title=

ನವದೆಹಲಿ: ದೇವಾಧಿದೇವ ಶಿವನನ್ನು ಭೋಲಾ ಭಂಡಾರಿ ಎಂದು ಕರೆಯಲಾಗುತ್ತದೆ. ಹೀಗಾಗಿ ಶಿವನನ್ನು ಯಾರು ಯಾವ ಭಾವದಿಂದ ಪೂಜಿಸುತ್ತಾರೋ ಅವರಿಗೆ ಅದೇ ಭಾವದಲ್ಲಿ ಪ್ರತಿಫಲ ಕೂಡ ಸಿಗುತ್ತದೆ. ಹಾಗೂ ಶಿವ ತನ್ನ ಭಕ್ತಾದಿಗಳ ರಕ್ಷಣೆಗೆ ಧಾವಿಸುತ್ತಾನೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ದೇವಾದಿದೇವ ಶಿವನ ಪ್ರೀತಿಯ ಮಾಸವಾಗಿರುವ ಶ್ರಾವಣ ಮಾಸ ಇಂದಿನಿಂದ ಆರಂಭವಾಗಿದೆ. ಶಿವನ ಈ ಪಾವನ ಮಾಸದ ಆರಂಭ ಕೂಡ ಅವರ ಪ್ರಿಯ ದಿನವಾದ ಸೋಮವಾರದಿಂದ ಆರಂಭಗೊಂಡಿದೆ. ಶಿವಶಂಕರನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ಶ್ರಾವಣ ಮಾಸದಲ್ಲಿ ವಿಭಿನ್ನ ವಿಧ ವಿಧಾನಗಳಿಂದ ಪೂಜಾರಾಧನೆ ನಡೆಸಲಾಗುತ್ತದೆ. ಆದರೆ, ಶ್ರಾವಣ ಮಾಸದಲ್ಲಿ ನಾವು ನಮ್ಮ ರಾಶಿಗೆ ಅನುಗುಣವಾಗಿ ಪೂಜೆ ಸಲ್ಲಿಸಲು ಬಯಸುತಿದ್ದರೆ, ನಾವು ಯಾವ ಮಂತ್ರಗಳನ್ನು ಪಠಿಸಿದರೆ ಉತ್ತಮ ಎಂಬುದು ಬಹುತೇಕ ಭಕ್ತಾದಿಗಳ ಪ್ರಶ್ನೆಯಾಗಿರುತ್ತದೆ. ರಾಶಿಗಳಿಗೆ ಅನುಗುಣವಾಗಿ ನಾವು ಶಿವನನ್ನು ಪೂಜಿಸಿದರೆ, ದೇವಾದಿದೇವ ತನ್ನ ಭಕ್ತಾದಿಗಳ ಮನೋಕಾಮನೆಯನ್ನು ಪೂರ್ಣಗೊಳಿಸುತ್ತಾನೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗಾದರೆ ಬನ್ನಿ ಯಾವ ರಾಶಿಯ ಜನರು ಯಾವ ಶಿವಮಂತ್ರ ಪಠಿಸಿ ಶಿವನ ಕೃಪೆಗೆ ಪಾತ್ರರಾಗಬೇಕು ಎಂಬುದನು ತಿಳಿಯೋಣ 
 
1. ಮೇಷ: ಓಂ ನಮಃ ಶಿವಾಯ್ ಮಂತ್ರ ಜಪಿಸಿ, ಶಿವನಿಗೆ ಬಿಲ್ವಪತ್ರೆ ಅರ್ಪಿಸಿ.

2. ವೃಷಭ: ವೃಷಭ ರಾಶಿಯ ಜನರು ಶಿವ ಕೃಪೆಗೆ ಪಾತ್ರರಾಗಲು ದ್ವಾದಶ ಜ್ಯೋತಿರ್ಲಿಂಗ ಮಂತ್ರಗಳನ್ನು ಉಚ್ಚರಿಸಬೇಕು.
ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮಲೇಶ್ವರಮ್ || ೧ ||

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್ |
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ || ೨ ||

ವಾರಾಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ |
ಹಿಮಾಲಯೇ ತು ಕೇದಾರಂ ಘುಶ್ಮೇಶಂ ಚ ಶಿವಾಲಯೇ || ೩ ||

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ || ೪ ||

|| ಇತಿ ದ್ವಾದಶಜ್ಯೋತಿರ್ಲಿಂಗಸ್ಮರಣಂ ಸಂಪೂರ್ಣಮ್ || 

3. ಮಿಥುನ್: ಮಿಥುನ ರಾಶಿ ಜಾತಕ ಹೊಂದಿದವರು ಶಿವ ಕೃಪೆಗೆ ಪಾತ್ರರಾಗಲು 'ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಾಲಂ ಕೃಪಾಲಂ ಓಂ ನಮಃ' ಮಂತ್ರವನ್ನು ಪಠಿಸಿ ಶಿವ ಕೃಪೆಗೆ ಪಾತ್ರರಾಗಬಹುದು.

4. ಕರ್ಕ: ಶ್ರಾವಣ ಮಾಸದಲ್ಲಿ ಶಿವನ ಆಶೀರ್ವಾದ ಪಡೆಯಲು ಕರ್ಕ ರಾಶಿಯ ಜಾತಕದವರು 'ಓಂ ಚಂದ್ರಮೌಳೆಶ್ವರಾಯನಮಃ' ಮಂತ್ರವನ್ನು ಜಪಿಸಬೇಕು.

5. ಸಿಂಹ: ಸಿಂಹ ರಾಶಿಯ ಜಾತಕ ಹೊಂದಿದವರು  'ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಾಲಂ ಕೃಪಾಲಂ ಓಂ ನಮಃ' ಮಂತ್ರವನ್ನು ಪಠಿಸಿ ಶಿವ ಕೃಪೆಗೆ ಪಾತ್ರರಾಗಬಹುದು.

6. ಕನ್ಯಾ: ಬಮ್ ಬಮ್ ಭೋಲೆ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಕನ್ಯಾ ರಾಶಿಯ ಜಾತಕ ಹೊಂದಿದವರು 'ಓಂ ನಮಃ ಶಿವಾಯ ಕಾಲಂ ಓಂ ನಮಃ' ಮಂತ್ರ ಪಠಿಸಬೇಕು.

7. ವೃಶ್ಚಿಕ: ವೃಶ್ಚಿಕ ರಾಶಿಯ ಜಾತಕ ಹೊಂದಿದವರು ಶಿವಕೃಪೆಗೆ ಪಾತ್ರರಾಗಲು ಶ್ರಾವಣ ಮಾಸದಲ್ಲಿ 'ಓಂ ಹೋಮ್ ಓಂ ಜೂ ಸಃ' ಮಂತ್ರವನ್ನು ವಿಶೇಷವಾಗಿ ಪಠಿಸಿ.

8.ತುಲಾ: ತುಲಾ ರಾಶಿಯ ಜಾತಕ ಹೊಂದಿದವರು ಶ್ರಾವಣದಲ್ಲಿ ಶಿವ ಕೃಪೆಗೆ ಪಾತ್ರರಾಗಲು 'ಉಂ ಶಂ ಭಾವೋದ್ಭವಾಯ ಶಂ ಉಂ ನಮಃ' ಮಂತ್ರವನ್ನು ಪಠಿಸಬೇಕು.

9. ಧನು: ಶಿವ ಕೃಪೆಗೆ ಪಾತ್ರರಾಗಿ ಎಲ್ಲ ಸಂಕಷ್ಟಗಳಿಂದ ಮುಕ್ತರಾಗಲು ಧನು ರಾಶಿ ಜಾತಕ ಹೊಂದಿದವರು ' ಓಂ ನಮೋ ಶಿವಾಯ ಗುರು ದೇವಾಯನಮಃ' ,ಮಂತ್ರ ಜಪಿಸಬೇಕು.

10. ಮಕರ: ಶಿವ ಶಂಕರನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಮಕರ ರಾಶಿಯ ಜಾತಕ ಹೊಂದಿದವರು 'ಓಂ ಹೋಮ್ ಓಂ ಜೂ ಸಃ' ಮಂತ್ರವನ್ನು ವಿಶೇಷವಾಗಿ ಪಠಿಸಿ.

11. ಕುಂಭ: ಕುಂಭ ರಾಶಿಯ ಜಾತಕ ಹೊಂದಿದವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರಾವಣಮಾಸದಲ್ಲಿ 'ಓಂ ಹೋಮ್ ಓಂ ಜೂ ಸಃ' ಮಂತ್ರ ಪಠಿಸಿ ಶಿವನನ್ನು ಪೂಜಿಸಿ.

12. ಮೀನ: ಶ್ರಾವಣ ಮಾಸದಲ್ಲಿ ಶಿವನ ಕೃಪೆಗೆ ಪಾತ್ರರಾಗಲು ಮೀನ ರಾಶಿಯ ಜಾತಕ ಹೊಂದಿದವರು 'ಓಂ ನಮೋ ಶಿವಾಯ ಗುರು ದೇವಾಯ ನಮಃ' ಮಂತ್ರವನ್ನು ಪಠಿಸಬೇಕು.

Trending News