ಅತ್ಯಂತ ಪ್ರಭಾವಶಾಲಿ ಈ ವರ್ಷದ ಕೊನೆಯ ಸೂರ್ಯ ಗ್ರಹಣ

ವರ್ಷದ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 26 ರಂದು ನಡೆಯಲಿದೆ. ಈ ಗ್ರಹಣವು ಜ್ಯೋತಿಷ್ಯ ದೃಷ್ಟಿಯಿಂದ ಅತ್ಯಂತ ವಿಶೇಷವೆಂದು ನಂಬಲಾಗಿದೆ. ಇದು ಎಲ್ಲ ರಾಶಿಗಳ ಮೇಲೆಪರಿಣಾಮ ಬೀರುತ್ತದೆ.

Written by - Nitin Tabib | Last Updated : Dec 24, 2019, 02:25 PM IST
ಅತ್ಯಂತ ಪ್ರಭಾವಶಾಲಿ ಈ ವರ್ಷದ ಕೊನೆಯ ಸೂರ್ಯ ಗ್ರಹಣ title=

ನವದೆಹಲಿ: ವರ್ಷದ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 26 ರಂದು ನಡೆಯಲಿದೆ. ಈ ಗ್ರಹಣವು ಜ್ಯೋತಿಷ್ಯ ದೃಷ್ಟಿಯಿಂದ ಅತ್ಯಂತ ವಿಶೇಷವೆಂದು ನಂಬಲಾಗಿದೆ. ಇದು ಎಲ್ಲ ರಾಶಿಗಳ ಮೇಲೆಪರಿಣಾಮ ಬೀರುತ್ತದೆ. ಈ ಗ್ರಹಣವನ್ನು 1962ರ ಗ್ರಹಣದ ಜೊತೆ ಹೋಲಿಕೆ ಮಾಡಿ ವಿಶ್ಲೇಷಿಸಲಾಗುತ್ತಿದೆ.

ಸೂರ್ಯಗ್ರಹಣ ದಿನದಂದು ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ರಾಹು, ಕೇತು, ಸೂರ್ಯ ಮತ್ತು ಚಂದ್ರರನ್ನು ತಮ್ಮ ಅವರು ಶತ್ರುಗಳೆಂದು ಪರಿಗಣಿಸುತ್ತಾರೆ. ಆದ್ದರಿಂದ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಸೂರ್ಯ ಮತ್ತು ಚಂದ್ರರನ್ನು ಸ್ಮರಿಸಲಾಗುತ್ತದೆ. ಪುರಾಣದ ಪ್ರಕಾರ, ಗ್ರಹಣ ಆರಂಭವಾದ ಬಳಿಕ ಜನರು ಆಹಾರವನ್ನು ಸೇವನೆ ಮಾಡುವುದಿಲ್ಲ ಹಾಗೂ ಯಾವುದೇ ವಸ್ತುಗಳ ಖರೀದಿ ಮಾಡುವುದಿಲ್ಲ.

ಭಾರತೀಯ ಕಾಲಮಾನದ ಪ್ರಕಾರ, ಭಾಗಶಃ ಸೂರ್ಯಗ್ರಹಣವು ಡಿಸೆಂಬರ್ 26, ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಆರಂಭಗೊಳ್ಳುತ್ತಿದ್ದರೆ, ಪೂರ್ಣ ಸೂರ್ಯಗ್ರಹಣ ಬೆಳಗ್ಗೆ 9.06 ಕ್ಕೆ ಆರಂಭಗೊಳ್ಳಲಿದೆ.   ಭಾಗಶಃ ಸೂರ್ಯಗ್ರಹಣ ಮಧ್ಯಾಹ್ನ 12.29 ಕ್ಕೆ ಮುಕ್ತಾಯವಾಗಲಿದ್ದರೆ, ಪೂರ್ಣ ಸೂರ್ಯಗ್ರಹಣ ಮಧ್ಯಾಹ್ನ 1.36 ಕ್ಕೆ ಕೊನೆಗೊಳ್ಳಲಿದೆ.

1962ರ ಸೂರ್ಯಗ್ರಹಣದ ಜೊತೆಗೆ ಹೋಲಿಕೆ
1962 ರಲ್ಲಿ ಇಂತಹ ಸೂರ್ಯಗ್ರಹಣ ಸಂಭವಿಸಿತ್ತು ಎಂದು ಜ್ಯೋತಿಷಿಗಳು ಹೇಳುತ್ತಾರೆ, ಅಂದು ಏಳು ಗ್ರಹಗಳು ಒಟ್ಟಿಗೆ ಬಂದಿದ್ದವು. ಡಿಸೆಂಬರ್ 26 ರಂದು ಸಂಭವಿಸಲಿರುವ ಈ ಸೂರ್ಯಗ್ರಹನದಲ್ಲಿ ಒಟ್ಟು 6 ಗ್ರಹಗಳು ಒಟ್ಟಿಗೆ ಬರುತ್ತಿವೆ. ಈ ಗ್ರಹಣವ ಧನು ರಾಶಿ ಮತ್ತು ಮೂಲಾ ನಕ್ಷತ್ರದಲ್ಲಿ ಸಂಭವಿಸಲಿದೆ. ಇಂತಹ ಸೂರ್ಯಗ್ರಹಣದ ಪ್ರಭಾವ ಯಾವುದೇ ಸಾಮಾನ್ಯ ಸೂರ್ಯಗ್ರಹಣಕ್ಕಿಂತ ಹೆಚ್ಚಾಗಿರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಗ್ರಹಣದ ವೇಳೆ ಸೂರ್ಯ, ಚಂದ್ರ, ಶನಿ, ಬುಧ, ಗುರು ಹಾಗೂ ಕೇತು ಗ್ರಹಗಳು ಧನು ರಾಶಿಯಲ್ಲಿ ಒಟ್ಟಿಗೆ ಬರಲಿವೆ.

Trending News