ನವದೆಹಲಿ: ಈ ಬಾರಿಯ ದೀಪಾವಳಿ (Diwali) ಹಬ್ಬಕ್ಕೂ 7 ದಿನಗಳ ಮುಂಚಿತವಾಗಿ ಒಂದು ಅದ್ಭುತ ಶುಭ ಸಂಯೋಗ ಹಾಗೂ ಮಹೂರ್ತ ನಿರ್ಮಾಣಗೊಳ್ಳಲಿದೆ. ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರವನ್ನು ಅತ್ಯಂತ ಶುಭ ಹಾಗೂ ಪುಣ್ಯದಾಯಕ ನಕ್ಷತ್ರ ಎಂದು ಪರಿಗಣಿಸಲಾಗುತ್ತದೆ. ಈ ಬಾರಿ ದೀಪಾವಳಿಗೂ ಒಂದು ವಾರ ಮುನ್ನ ಅಂದರೆ ನವೆಂಬರ್ 7ರಂದು ಶನಿವಾರ ಪುಷ್ಯ ನಕ್ಷತ್ರದ ಭೋಗ ದಿನವಿಡೀ ಇರಲಿದೆ. ಈ ದಿನ ಪುಷ್ಯ ನಕ್ಷತ್ರದ ಗೌರವ ನವೆಂಬರ್ 7ರ ಬೆಳಗ್ಗೆ ಸೂರ್ಯೋದಯದಿಂದ ರಾತ್ರಿ 4.59ರವರೆಗೆ ಇರಲಿದೆ.
ಜ್ಯೋತಿಶ್ಯಾಚಾರ್ಯರ ಪ್ರಕಾರ ಪುಷ್ಯ ನಕ್ಷತ್ರದ ಶುಭ ಕಾಲ ಖರೀದಿ-ಮಾರಾಟ, ಉದ್ಯೋಗ ಹಾಗೂ ವ್ಯಾಪಾರದ ಆರಂಭಕ್ಕಾಗಿ ತುಂಬಾ ಶುಭ ಎಂದು ಹೇಳಿದ್ದಾರೆ. ಈ ನಕ್ಷತ್ರಕ್ಕೆ ಅಶುಭ ಕಾಲವನ್ನು ಶುಭಕಾಲವನ್ನಾಗಿ ಪರಿವರ್ತಿಸುವ ಶಕ್ತಿ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- Vastu Shastra: ಮನೆಯಲ್ಲಿ ಧನವೃಷ್ಟಿ ತರುತ್ತವೆ ಈ ಸಸ್ಯಗಳು, ನೀವು ನಿಮ್ಮ ಮನೆಯಲ್ಲಿ ನೆಟ್ಟು ಧನವಂತರಾಗಿ
ಶನಿ ದೇವ ಈ ನಕ್ಷತ್ರಕ್ಕೆ ಸ್ವಾಮಿ ಹಾಗೂ ಈ ನಕ್ಷತ್ರ ಶನಿವಾರ ಇಡಿ ದಿನ ತನ್ನ ಪ್ರಭಾವ ಬೀರಲಿದೆ. ಇಂತಹುದರಲ್ಲಿ ಈ ನಕ್ಷತ್ರದ ವ್ಯಾಪಾರಿ ಮಹತ್ವ ಹೆಚ್ಚಾಗುತ್ತದೆ. ಈ ಬಾರಿ ಗ್ರಹಗಳ ಸ್ಥಿತಿ ಕೂಡ ತುಂಬಾ ಉತ್ತಮವಾಗಿದೆ. ಶನಿಗ್ರಹ ಮಕರ ರಾಶಿಯ ತನ್ನ ಸ್ವಸ್ಥಾನದಲ್ಲಿಯೇ ಇರಲಿದ್ದಾರೆ. ಗುರು ಕೂಡ ಸ್ವಗೃಹಿಯಾಗಿದ್ದಾನೆ. ಬುಧ ಹಾಗೂ ಶುಕ್ರ ರಾಶಿ ಪರಿವರ್ತನೆ ರಾಜಯೋಗದಲ್ಲಿದೆ. ಬುಧಾದಿತ್ಯ ರಾಜಯೋಗದ ಜೊತೆಗೆ ಚಂದ್ರ ಕೂಡ ಸ್ವಗೃಹ ಸ್ಥಿತಿಯಲ್ಲಿ ಇರಲಿದ್ದಾನೆ. ಹೀಗಾಗಿ ಈ ಸಮಯ ತುಂಬಾ ಶ್ರೇಷ್ಠ ಹಾಗೂ ಶುಭ ಫಲಗಳನ್ನು ನೀಡಲಿದೆ.
ಇದನ್ನು ಓದಿ- ಸುಖ-ಸಮೃದ್ಧಿಯ ಜೀವನ ನಿಮ್ಮದಾಗಬೇಕೆ? ನಿಮ್ಮ ಗೋಡೆಗಳ ಬಣ್ಣವನ್ನು ವಾಸ್ತು ಪ್ರಕಾರ ಆರಿಸಿ
'ತಿಷ್ಯ' ಹಾಗೂ 'ಅಮರೇಜ್ಯ' ಎಂಬ ಹೆಸರುಗಳಿಂದಲೂ ಸಂಬೋಧಿಸಲಾಗುವ ಈ ನಕ್ಷತ್ರದ ಉಪಸ್ಥಿತಿ ಕರ್ಕ ರಾಶಿಯ 3-20 ಅಂಶದಿಂದ 16-40 ಅಂಶದವರೆಗಿದೆ. 'ಅಮರೇಜ್ಯ' ಎಂದರೆ ದೇವತೆಗಳಿಂದ ಪೂಜಿಸಲ್ಪಡುವ ಎಂದರ್ಥ. ಶನಿ ಈ ನಕ್ಷತ್ರದ ಸ್ವಾಮಿ ಗ್ರಹ. ಇದೆ ಕಾರಣದಿಂದ ವಿವಾಹವನ್ನು ಹೊರತುಪಡಿಸಿ ಎಲ್ಲ ಶುಭ ಹಾಗೂ ಮಂಗಳಕಾರಕ ಕಾರ್ಯಗಳ ಆರಂಭ ಶುಭ ಫಲ ಪ್ರದಾನ ಮಾಡುತ್ತವೆ.
ಇದನ್ನು ಓದಿ- ಮನೆಯಲ್ಲಿರುವ ಮೆಟ್ಟಿಲುಗಳಿಂದಾಗುವ ವಾಸ್ತುದೋಷ ನಿಮ್ಮ ಮನೆಯಲ್ಲಿದೆಯೇ? ಈ ನಿಯಮಗಳನ್ನು ಪಾಲಿಸಿ
ಶನಿದೇವ ಯಾವುದೇ ಓರ್ವ ವ್ಯಕ್ತಿಯ ಕರ್ಮದ ಫಲ ನೀಡುವ ಗ್ರಹ. ಹೀಗಾಗಿ ಶುಭ ಕಾರ್ಯಗಳ ಆರಂಭ ಈ ಸಮಯದಲ್ಲಿ ಮಾಡುವುದರಿಂದ ಶನಿದೆವನ ವಿಶೇಷ ಕೃಪಾ ಕಟಾಕ್ಷ ಲಭಿಸುತ್ತದೆ. ಈ ದಿನ ವಿಶೇಷವಾಗಿ ಖರೀದಿ, ಹೂಡಿಕೆ ಹಾಗೂ ದೊಡ್ಡ ಉದ್ಯೋಗದ ಆರಂಭ ಅಥವಾ ವ್ಯಾಪಾರಿ ಲೇವಾದೇವಿ ಅತ್ಯಂತ ಉತ್ತಮ ಎಂದು ಹೇಳಲಾಗಿದೆ.