ನವದೆಹಲಿ: ಪ್ರಸಕ್ತ ವರ್ಷದ ಶರದ್ ಅಥವಾ ಶಾರದಿಯಾ ನವರಾತ್ರಿ(Navratri Festival 2021) ಆರಂಭಕ್ಕೆ ಕೇವಲ 8 ದಿನಗಳು ಬಾಕಿ ಉಳಿದಿವೆ. ಶರದ್ ಅಂತ್ಯದ ನಂತರ ಮೊದಲ ನವರಾತ್ರಿ ಅಕ್ಟೋಬರ್ 7 ರಂದು ನಡೆಯಲಿದೆ. ಇದರೊಂದಿಗೆ ದುರ್ಗಾ ಪೂಜೆಯ ಆಚರಣೆಗಳು ದೇಶ-ವಿದೇಶದಲ್ಲಿ ಆರಂಭವಾಗುತ್ತವೆ.
ಈ ಬಾರಿ ತೃತೀಯ ಮತ್ತು ಚತುರ್ಥಿ ಒಂದೇ ದಿನ
ಜ್ಯೋತಿಷಿಗಳ ಪ್ರಕಾರ, ಈ ಬಾರಿ ತೃತೀಯ ಮತ್ತು ಚತುರ್ಥಿ ತಿಥಿಗಳು ಒಟ್ಟಿಗೆ ಬೀಳುತ್ತಿವೆ. ಈ ಕಾರಣದಿಂದಾಗಿ ಈ ಬಾರಿ ಶರದ್ ನವರಾತ್ರಿ(Shardiya Navratri 2021) ಕೇವಲ 8 ದಿನಗಳು ಮಾತ್ರ ನಡೆಯಲಿದೆ. ಮೊದಲ ನವರಾತ್ರಿ ಅಕ್ಟೋಬರ್ 7 ರಂದು ಮತ್ತು ವಿಜಯದಶಮಿ ಹಬ್ಬವನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಮನೆಯಲ್ಲಿಯೂ ಈ ರೀತಿಯ ಮನಿಪ್ಲಾಂಟ್ ಇದೆಯಾ? ಈ ವಿಷಯಗಳ ಬಗ್ಗೆ ಇರಲಿ ಎಚ್ಚರ..! ಇಲ್ಲವಾದರೆ ನಷ್ಟ ಖಂಡಿತಾ
ಅಕ್ಟೋಬರ್ 7 ರಂದು ಘಟಸ್ಥಾಪನೆಯ ಮುಹೂರ್ತ
ನವರಾತ್ರಿಯ ಮೊದಲ ದಿನದಂದು ಶುಭ ಸಮಯದಲ್ಲಿ ಘಟಸ್ಥಾಪನ(Ghatasthapana or Kalash Sthapana) ಮಾಡುವ ಸಂಪ್ರದಾಯವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ಘಟಸ್ಥಾಪನದ ಶುಭ ಸಮಯವು ಅಕ್ಟೋಬರ್ 7 ರಂದು ಬೆಳಿಗ್ಗೆ 06:17 ರಿಂದ 10:11 ರವರೆಗೆ ಇರುತ್ತದೆ. ಅದೇ ಸಮಯದಲ್ಲಿ ಅಭಿಜಿತ್ ಮುಹೂರ್ತವು 11:46 ರಿಂದ 12:32 ರವರೆಗೆ ಇರುತ್ತದೆ. ಈ 9 ದಿನಗಳಲ್ಲಿ ಉಪವಾಸ ಆಚರಿಸುವವರಿಗೆ ಪಾರಣೆಯ ಮುಹೂರ್ತ ಅಕ್ಟೋಬರ್ 15ರ ಸಂಜೆ 06:22 ರ ನಂತರ ಇರುತ್ತದೆ.
ಶರದ್ ನವರಾತ್ರಿಯ ಪ್ರಮುಖ ದಿನಗಳು (Shardiya Navratri 2021 Date)
ಮೊದಲ ದಿನ ಅಕ್ಟೋಬರ್ 7: ಶಕ್ತಿದೇವಿ ಶೈಲಪುತ್ರಿಯನ್ನು ಪೂಜಿಸುವ ದಿನ
2ನೇ ದಿನ ಅಕ್ಟೋಬರ್ 8 : ತಾಯಿ ಬ್ರಹ್ಮಚಾರಿಣಿ ಪೂಜಿಸುವ ದಿನ
3ನೇ ದಿನ ಅಕ್ಟೋಬರ್ 9: ತಾಯಿ ಚಂದ್ರಘಂಟ(ಪಾರ್ವತಿ) ಮತ್ತು ತಾಯಿ ಕುಷ್ಮಾಂಡ ದೇವಿಯನ್ನು ಪೂಜಿಸುವ ದಿನ
4ನೇ ದಿನ ಅಕ್ಟೋಬರ್ 10: ತಾಯಿ ಸ್ಕಂದಮಾತೆಯ ಆರಾಧಿಸುವ ದಿನ
5ನೇ ದಿನ ಅಕ್ಟೋಬರ್ 11 : ತಾಯಿ ಕಾತ್ಯಾಯಿನಿಯನ್ನು ಪೂಜಿಸುವ ದಿನ
6ನೇ ದಿನ ಅಕ್ಟೋಬರ್ 12: ತಾಯಿ ಕಾಳರಾತ್ರಿಯನ್ನು ಆರಾಧಿಸುವ ದಿನ
7ನೇ ದಿನ ಅಕ್ಟೋಬರ್ 13: ತಾಯಿ ಮಹಾಗೌರಿಯನ್ನು ಪೂಜಿಸುವ ದಿನ
8ನೇ ದಿನ ಅಕ್ಟೋಬರ್ 14: ತಾಯಿ ಸಿದ್ದಿದಾತ್ರಿಯನ್ನು ಪೂಜಿಸುವ ದಿನ
15 ಅಕ್ಟೋಬರ್: ವಿಜಯದಶಮಿ (ದಸರಾ) ಹಬ್ಬವನ್ನು ಆಚರಿಸುವ ದಿನ
ಇದನ್ನೂ ಓದಿ: Astrology: ತುಂಬಾ ಬುದ್ಧಿವಂತರಂತೆ ಈ 5 ರಾಶಿಯ ಜನ, ಈ ಪಟ್ಟಿಯಲ್ಲಿ ನಿಮ್ಮ ಹೆಸರೂ ಇದೆಯೇ; ಪರಿಶೀಲಿಸಿ
ಚಿತ್ರ ನಕ್ಷತ್ರದಲ್ಲಿ ನವರಾತ್ರಿ ಆರಂಭವಾಗುತ್ತಿದೆ
ಧಾರ್ಮಿಕ ವಿದ್ವಾಂಸರ ಪ್ರಕಾರ, ಈ ಬಾರಿ ಎರಡು ದಿನಾಂಕಗಳು ಒಂದೇ ದಿನ ಬೀಳುತ್ತಿವೆ. ಈ ಬಾರಿ ಅಕ್ಟೋಬರ್ 9 ರಂದು ತೃತೀಯಾ ಬೆಳಿಗ್ಗೆ 7.48 ರವರೆಗೆ ಇರುತ್ತದೆ. ಅದರ ನಂತರ ಚತುರ್ಥಿ ಆರಂಭವಾಗುತ್ತದೆ. ಈ ಚತುರ್ಥಿಯು ಅಕ್ಟೋಬರ್ 10ರ ಬೆಳಿಗ್ಗೆ 5 ಗಂಟೆಯವರೆಗೆ ಇರುತ್ತದೆ. ಜ್ಯೋತಿಷಿಗಳ ಪ್ರಕಾರ, ಈ ಬಾರಿ ನವರಾತ್ರಿ(Navratri) ಚಿತ್ರ ನಕ್ಷತ್ರದಲ್ಲಿ ಆರಂಭವಾಗುತ್ತಿದೆ. ಈ ಕಾರಣದಿಂದ ತಾಯಿ ದುರ್ಗಾದೇವಿಯನ್ನು ಸ್ತುತಿಸುವವರು ಹೆಚ್ಚು ಪ್ರಯೋಜನ ಪಡೆಯುತ್ತಾರಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.