ಗ್ರಾಮೀಣ ಸೊಗಡಿನ ಕಾರಹುಣ್ಣಿಮೆ ಬಲು ಜೋರು

Written by - Zee Kannada News Desk | Last Updated : Jun 16, 2022, 12:17 AM IST
  • ಎತ್ತುಗಳನ್ನು ದೇವರ ಭಾವದಲ್ಲಿ ನೋಡುವ ರೈತರು ಅವುಗಳ ಮೈಮೇಲೆ ಬಣ್ಣದ ಚಿತ್ರಗಳನ್ನು ಬಿಡಿಸಿ ಅವುಗಳಿಗೆ ಪೂಜೆ ಸಲ್ಲಿಸಿದರು.
  • ಎತ್ತಿನ ದಂಡೆಗೂ ಅಲಂಕರಿಸಿ ನಂತರ ಮನೆಯಲ್ಲಿ ಕರಿಗಡುಬು ಹೋಳಿಗೆ ಸೇರಿ ಅನೇಕ ಸಿಹಿ ಪದಾರ್ಥಗಳನ್ನು ಮಾಡಿ ಅದರ ಸವಿಯನ್ನ ಸವೆದರು.
ಗ್ರಾಮೀಣ ಸೊಗಡಿನ ಕಾರಹುಣ್ಣಿಮೆ ಬಲು ಜೋರು title=

ಉತ್ತರ ಕರ್ನಾಟಕ ಭಾಗದಲ್ಲಿ ಕಾರಹುಣ್ಣಿಮೆ ಸಂಭ್ರಮ ಬಲು ಜೋರಾಗಿ ಇರುತ್ತೆ, ರೈತರ ಜೀವನಾಧಾರವಾದ ಎತ್ತುಗಳ ಮೈ ತೊಳೆದು ಅವುಗಳನ್ನು ಅಲಂಕಾರಗೊಳಿಸಿ ಪೂಜೆ ಸಲ್ಲಿಸುವ ಮೂಲಕ ಸುಗ್ಗಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಇದನ್ನೂ ಓದಿ: ‘ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ’

ಯಾದಗಿರಿ ಜಿಲ್ಲೆಯ್ಯಾದಂತಹ ಹಲವು ಗ್ರಾಮಗಳಲ್ಲಿ ಕಾರಹುಣ್ಣಿಮೆ ಸಂಭ್ರಮ ಬಲು ವಿಶೇಷವಾಗಿದೆ. ಸಗರ ಗ್ರಾಮದಲ್ಲಿ ಅದ್ದೂರಿಯಾಗಿ ಊರಿನ ಜಾತ್ರೆಯಂತೆ ಆಚರಿಸುವದು ಬಲು ವಿಶೇಷ ಪ್ರತಿ ವರ್ಷದಂತೆ ರೈತರ ಹಬ್ಬ ಎಂದೇ ಕರೆಯಲ್ಪಡುವ ಕಾರ ಹುಣ್ಣಿಮೆಯನ್ನು ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ರೈತರು ಅದ್ದೂರಿಯಾಗಿ ಆಚರಿಸಿದರು. ಎತ್ತುಗಳನ್ನು ದೇವರ ಭಾವದಲ್ಲಿ ನೋಡುವ ರೈತರು ಅವುಗಳ ಮೈಮೇಲೆ ಬಣ್ಣದ ಚಿತ್ರಗಳನ್ನು ಬಿಡಿಸಿ ಅವುಗಳಿಗೆ ಪೂಜೆ ಸಲ್ಲಿಸಿದರು. ಎತ್ತಿನ ದಂಡೆಗೂ ಅಲಂಕರಿಸಿ ನಂತರ ಮನೆಯಲ್ಲಿ ಕರಿಗಡುಬು ಹೋಳಿಗೆ ಸೇರಿ ಅನೇಕ ಸಿಹಿ ಪದಾರ್ಥಗಳನ್ನು ಮಾಡಿ ಅದರ ಸವಿಯನ್ನ ಸವೆದರು.

ಇದನ್ನೂ ಓದಿ : Railway Recruitment 2022 : ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ : 5636 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಪ್ರತಿ ವರ್ಷ ಗ್ರಾಮದ ಅಗಸಿ ಬಸವಣ್ಣ ಎದುರುಗಡೆ ಸಗರ ಗ್ರಾಮ ಸೇರಿ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನ ಸೇರಿ ಎತ್ತುಗಳ ಓಟದ ಸ್ಪರ್ಧೆ ಏರ್ಪಡಿಸುವ ಮೂಲಕ ಗ್ರಾಮದ ನಂದಿ ಬಂಡಿಯನ್ನು ಮುಟ್ಟುವ ಮೂಲಕ ಕರಿ ಹರಿಯುವ ಸಂಪ್ರದಾಯ ನೆರವೇರಿಸಿಕೊಂಡು ಬಂದಿದ್ದಾರೆ.ಎತ್ತುಗಳನ್ನು ಬಸವಣ್ಣ ದೇವರು ಅಂತಾ ನಂಬಿಕೆ ಹೊಂದಿರುವ ಇಲ್ಲಿಯ ರೈತರು, ಹಬ್ಬದ ಪ್ರಯುಕ್ತ ಕರಿ ಮತ್ತು ಬಿಳಿ ಎತ್ತುಗಳ ಓಟದ ಸ್ಪರ್ಧೆ ಏರ್ಪಡಿಸಿ ಓಟದಲ್ಲಿ ಗೆದ್ದ ಎತ್ತಿನ ಮಾರ್ಗಸೂಚನೆಯಂತೆ ಮುಂಗಾರು ಮತ್ತು ಹಿಂಗಾರು ಬೆಳೆ ಬಿತ್ತನೆ ಮಾಡುತ್ತಾರೆ.

ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಮೊದಲು ಬರುವ ಕಾರಹುಣ್ಣಿಮೆ ಹಬ್ಬವನ್ನು ಬಲು ವಿಶಿಷ್ಟವಾಗಿ ಆಚರಿಸುವ ಮೂಲಕ ಹಿಂದಿನ ಕಾಲದ ಸಂಪ್ರದಾಯ ಗ್ರಾಮದಲ್ಲಿ ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News