Ganesh Chaturthi 2020: ಗಣಪತಿ ಪೂಜೆಯಲ್ಲಿ ಈ 7 ವಿಷಯಗಳ ಬಗ್ಗೆ ಇರಲಿ ಎಚ್ಚರ

ಗಣೇಶ ಚತುರ್ಥಿಯ ದಿನದಂದು ಗಣಪತಿ ಬಪ್ಪನ ಆಶೀರ್ವಾದ ಪಡೆಯಲು ಖಂಡಿತವಾಗಿಯೂ ಅವನ ಪೂಜೆಯಲ್ಲಿ ಅಕ್ಷತೆ ಅರ್ಪಿಸಿ. ಆದರೆ ಅಕ್ಷಗಳನ್ನು ಮುರಿಯದಂತೆ ಎಚ್ಚರಿಕೆ ವಹಿಸಿ. ‘ಇದಮ್ ಅಕ್ಷತ ಗಣ ಗಣಪತಾಯ ನಮಃ’ ಎಂಬ ಮಂತ್ರವನ್ನು ಉಚ್ಚರಿಸುತ್ತಾ ಅಕ್ಷತೆಯನ್ನು ಅರ್ಪಿಸಿ.  

Last Updated : Aug 19, 2020, 09:45 AM IST
  • ಗಣಪತಿ ಬಪ್ಪನ ಆಶೀರ್ವಾದ ಪಡೆಯಲು ಪೂಜೆಯಲ್ಲಿ ಅಕ್ಷತೆ ಅರ್ಪಿಸಿ.
  • ಏಕದಂತನಿಗೆ ಪೂಜೆಯಲ್ಲಿ ಸಿಂಧೂರವನ್ನು ಅರ್ಪಿಸಿ.
  • ಗಣಪತಿಗೆ ಗರಿಕೆ ಎಂದರೆ ಅಚ್ಚು ಮೆಚ್ಚು. ಗಣಪತಿ ಪೂಜೆಯಲ್ಲಿ 21 ಗರಿಕೆ ಇಟ್ಟು ಗಣಪತಿಯನ್ನು ಆರಾಧಿಸಿದರೆ ಗಣಪತಿ ಹೆಚ್ಚು ಸಂತೋಷಗೊಳ್ಳುತ್ತಾನೆ.
Ganesh Chaturthi 2020: ಗಣಪತಿ ಪೂಜೆಯಲ್ಲಿ ಈ 7 ವಿಷಯಗಳ ಬಗ್ಗೆ ಇರಲಿ ಎಚ್ಚರ title=

ನವದೆಹಲಿ:  ಎಲ್ಲ ದೇವತೆಗಳಲ್ಲಿ ಮೊದಲ ಪೂಜೆ ಸಿದ್ದಿ ವಿನಾಯಕನಿಗೆ.  ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಗಣೇಶನ ಆರಾಧನೆಯಲ್ಲಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದವರಿಗೆ ಶೀಘ್ರದಲ್ಲೇ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ನಂಬಿಕೆ. ಯಾವುದೇ ಕೆಲಸ ಪ್ರಾರಂಭ ಮಾಡುವ ಮೊದಲು ಗಣೇಶನ ಆರಾಧನೆ ಮಾಡುವುದರಿಂದ ನಾವು ಅಂದುಕೊಂಡ ಕೆಲಸ ಅಡೆತಡೆ ಇಲ್ಲದೆ ಆಗುತ್ತದೆ. ಗಣಪತಿ ಸಂತುಷ್ಟನಾಗಿ ಸಂತೋಷ ಮತ್ತು ಸಮೃದ್ಧಿಯಿಂದ ನಮಗೆ ಆಶೀರ್ವಾದ ಮಾಡುತ್ತಾನೆ. ಗಣಪತಿ ಬಪ್ಪನ ಆರಾಧನೆಯನ್ನು ಕೆಲವು ವಿಷಯಗಳಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಬನ್ನಿ, ಗಣೇಶ ಚತುರ್ಥಿಯಂದು ಗಣಪತಿಗೆ ಇಷ್ಟವಾದ ವಸ್ತುಗಳನ್ನು ನಾವು ಅರ್ಪಿಸಬೇಕು. ಇದರಿಂದ ಬಪ್ಪಾ ಸಂತಸಗೊಂಡು ಶೀಘ್ರದಲ್ಲೇ ಆಶೀರ್ವಾದವನ್ನು ನಮಗೆ ತೋರಿಸುತ್ತಾರೆ. ಶಕ್ತಿ, ಬುದ್ಧಿವಂತಿಕೆ, ಜ್ಞಾನ, ಸಂಪತ್ತು ಹೀಗೆ ಭಕ್ತರಿಗೆ ಕೇಳಿದ ವರವನ್ನು ನೀಡುತ್ತಾನೆ. ಈ ವರ್ಷ ಗಣೇಶ ಚತುರ್ಥಿಯನ್ನು ಆಗಸ್ಟ್ 22 ರಂದು ಆಚರಿಸಲಾಗುವುದು.  ಈ ಆಚರಣೆಯ ಸಂದರ್ಭದಲ್ಲಿ ಈ ವಿಷಯಗಳ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ.

1. ಅಕ್ಷತೆ:
ಗಣಪತಿ ಬಪ್ಪನ ಆಶೀರ್ವಾದ ಪಡೆಯಲು ಪೂಜೆಯಲ್ಲಿ ಅಕ್ಷತೆ ಅರ್ಪಿಸಿ. ಅಕ್ಷತೆ ಗಣಪತಿ ಪೂಜೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಆದರೆ ಅಕ್ಷತೆ ಮುರಿಯದಂತೆ ಎಚ್ಚರಿಕೆ ವಹಿಸಿ. ಗಣಪತಿಗೆ ಅಕ್ಷತೆ  ಅರ್ಪಿಸುವ ಮೊದಲು ‘ಇದಮ್ ಅಕ್ಷತ ಗಣ ಗಣಪತಾಯ ನಮಃ’ ಎಂಬ ಮಂತ್ರವನ್ನು ಉಚ್ಚರಿಸಿ ಅರ್ಪಿಸಿ. ಒಣ ಅಕ್ಕಿ ನೀಡಲು ಮರೆಯಬೇಡಿ.

2. ಸಿಂಧೂರ
ಏಕದಂತನಿಗೆ ಪೂಜೆಯಲ್ಲಿ ಸಿಂಧೂರವನ್ನು ಅರ್ಪಿಸಿ. ಸಿಂಧೂರವನ್ನು ಶುಭವೆಂದು ಪರಿಗಣಿಸಲಾಗಿದೆ. ಅದರ ಬಳಕೆಯಿಂದ ಯಾವುದೇ ದುಷ್ಟಶಕ್ತಿ ಅಥವಾ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದಿಲ್ಲ. ಈ ಸಿಂಧೂರವನ್ನು ವಿಘ್ನ ವಿನಾಶಕ ಗಣಪತಿಗೆ ಅರ್ಪಿಸಿದಾಗ, ಅದು ಅತ್ಯಂತ ಶುಭ ಫಲಿತಾಂಶವನ್ನು ನೀಡುತ್ತದೆ.

3. ಗರಿಕೆ
ಗಣಪತಿಗೆ ಗರಿಕೆ ಎಂದರೆ ಅಚ್ಚು ಮೆಚ್ಚು. ಗಣಪತಿ ಪೂಜೆಯಲ್ಲಿ 21 ಗರಿಕೆ ಇಟ್ಟು ಗಣಪತಿಯನ್ನು ಆರಾಧಿಸಿದರೆ ಗಣಪತಿ  ಹೆಚ್ಚು ಸಂತೋಷಗೊಳ್ಳುತ್ತಾನೆ. ಹಾಗಾಗಿ ಪೂಜೆಯಲ್ಲಿ ಇಪ್ಪತ್ತೊಂದು ಗರಿಕೆಯನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.

4. ಹೂವು
ಅಲಂಕಾರ ಪ್ರಿಯ ಗಣಪನಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗುತ್ತದೆ. ಬಿಳಿ ಎಕ್ಕದ ಗಿಡವನ್ನು ಗಣೇಶ ಎಂದು ಪರಿಗಣಿಸಲಾಗುತ್ತದೆ. ಗಣಪನಿಗೆ ಎಕ್ಕದ ಹೂವಿನ ಹಾರ ಮಾಡಿ ಅರ್ಪಿಸುವುದು ಶ್ರೇಷ್ಠ. ಸಾಮಾನ್ಯವಾಗಿ 21 ಹೂವಿನಿಂದ ಹಾರ ಮಾಡಿ ಗಣೇಶನಿಗೆ ಅರ್ಪಿಸಿ ಭಕ್ತಿಯಿಂದ ನಮಿಸಿದರೆ ಗಣಪತಿಗೆ ಅಚ್ಚು ಮೆಚ್ಚು. ಇದರ ಜೊತೆಗೆ ಹಳದಿ ಹೂವಿನಿಂದ ಅಲಂಕಾರ ಮಾಡುವುದರಿಂದ ಗಣಪತಿ ಬೇಗ ಒಲಿಯುತ್ತಾನೆ ಎಂದು ನಂಬಲಾಗಿದೆ.

5. ಮೋದಕ
ಗಣಪತಿ ಬಪ್ಪನ ಆರಾಧನೆಯಲ್ಲಿ ಎಲ್ಲಾ ರೀತಿಯ ಸಿಹಿತಿಂಡಿಗಳು ಮತ್ತು ಹಲವು ಬಗೆಯ ತಿಂಡಿಗಳನ್ನು ಪ್ರಸಾದದ ರೂಪದಲ್ಲಿ ಅರ್ಪಿಸಲಾಗುತ್ತದೆ. ಆದರೆ ಗಣಪತಿಗೆ ಮೋದಕ ಎಂದರೆ ಬಹಳ ಇಷ್ಟ.  ಮೋದಕ ಇಲ್ಲದೆ ಗಣೇಶನ ಪೂಜೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಮೋದಕ ಮಾಡಲು ಸಾಧ್ಯವಾಗದಿದ್ದರೆ ಬೂಂದಿ, ಲಾಡು ಮಾಡಿ ಅರ್ಪಿಸಬಹುದು.

6. ಬಾಳೆಹಣ್ಣು
ಯಾವುದೇ ಪೂಜೆಯನ್ನು ಫಲವಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಗಣಪತಿ ಆರಾಧನೆಯಲ್ಲಿ ಬಾಳೆಹಣ್ಣನ್ನು ಅರ್ಪಿಸಿ. ಗಣಪತಿಗೆ ಬಾಳೆಹಣ್ಣನ್ನು ಅರ್ಪಿಸಿ ಪೂಜಿಸುವುದರಿಂದ ಗಣಪ ಬೇಗ ಒಲಿಯುತ್ತಾನೆ.

7. ಶಂಖ
ಸನಾತನ ಸಂಪ್ರದಾಯದ ಪ್ರತಿ ಪೂಜೆಯಲ್ಲೂ ಶಂಖವನ್ನು ಖಂಡಿತವಾಗಿ ಬಳಸಲಾಗುತ್ತದೆ. ಗಣಪತಿ ಬಪ್ಪನ ಆರಾಧನೆಯನ್ನು ಶಂಖ ಚಿಪ್ಪು ಇಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಶಂಖ ಗಣಪತಿ ಬಪ್ಪಾಗೆ ತುಂಬಾ ಪ್ರಿಯ. ಅವನು ಕೂಡ ಒಂದು ಕೈಯಲ್ಲಿ ಶಂಖ ಧರಿಸಲು ಕಾರಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಗಣೇಶನ ಆರಾಧನೆಯಲ್ಲಿ ಶಂಖ ನಾದ ಮೊಳಗಿಸಿ ಭಕ್ತಿಯಿಂದ ಪೂಜಿಸಿ.
 

Trending News