ಮೈಸೂರು ದಸರಾ 2018: 'ಅಂಬಾ ವಿಲಾಸ' ಅರಮನೆಯಲ್ಲಿ ಆಯುಧ ಪೂಜೆ

'ಜಂಬೂ ಸವಾರಿ' ಆನೆಗಳಿಗೆ ವಿಶೇಷ ಪೂಜೆ

Last Updated : Oct 18, 2018, 08:17 AM IST
ಮೈಸೂರು ದಸರಾ 2018: 'ಅಂಬಾ ವಿಲಾಸ' ಅರಮನೆಯಲ್ಲಿ ಆಯುಧ ಪೂಜೆ  title=

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮವು ಒಂಬತ್ತನೇ ದಿನಕ್ಕೆ ಕಾಲಿಟ್ಟಿದ್ದು, 'ಅಂಬಾ ವಿಲಾಸ' ಅರಮನೆಯಲ್ಲಿ ಆಯುಧ ಪೂಜಾ ಸಂಭ್ರಮ ಹೆಚ್ಚಾಗಿದೆ. ಇದರ ಅಂಗವಾಗಿ ಇಂದು ಬೆಳಿಗ್ಗಿನಿಂದ ಚಂಡಿಹೋಮ ನಡೆಸಲಾಗುತ್ತಿದೆ. 

ಜಯಮಾರ್ತಾಂಡ ದ್ವಾರದ ಮೂಲಕ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಪಂಚಲೋಹದ ಪಲ್ಲಕ್ಕಿಯಲ್ಲಿ 'ಖಾಸಾ ಖತ್ತಿ' ಸೇರಿದಂತೆ ಯುದ್ದೋಪಕರಣಗಳು ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನೆ ಮಾಡಲಾಗುವುದು. ನಂತರ ದೇವಾಲಯದಲ್ಲಿ ಪೂಜೆ ನೆರವೇರಿಸಿ ಖಾಸಾ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ವಾಪಸ್ ತರಲಾಗುವುದು. 

ತದನಂತರ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಆಯುಧಗಳಿಗೆ ಪೂಜೆ ಮತ್ತು ರಾಜ ಪುರೋಹಿತರಿಂದ ಫಿರಂಗಿಗಳಿಗೆ ಆಯುಧಪೂಜೆ ನೆರವೇರಿಸಲಾಗುವುದು.

'ಜಂಬೂ ಸವಾರಿ'ಯ ಆನೆಗಳಿಗೆ ವಿಶೇಷ ಪೂಜೆ ಕೋಡಿ ಸೋಮೇಶ್ವರ ದೇವಾಲಯದ ಬಳಿ ಅರಣ್ಯ ಇಲಾಖೆಯಿಂದ ಆನೆಗಳನ್ನು ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು.
 

Trending News