ಗಂಡನ ಮೇಲೆ ಮಾಟಮಂತ್ರ ಮಾಡಿಸಿದ ಹೆಂಡತಿ: ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಗಂಡ

ಪತ್ನಿಯೇ ನನ್ನ ಮೇಲೆ ಮಾಟಮಂತ್ರ ಪ್ರಯೋಗ ಮಾಡಿಸಿದ್ದಾಳೆಂದು ಆರೋಪಿಸಿ ಪತಿಯೊಬ್ಬ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.ಮನೆ ತುಂಬ ನಿಂಬೆಹೆಣ್ಣು, ಕುಂಕುಮ ಹಾಕಿದ್ದು, ಇದರಿಂದ ಪತ್ನಿಯ ಬೆರಳು ಕಟ್ ಆಗಿ ಸುರೀತಿತ್ತು.

Written by - VISHWANATH HARIHARA | Edited by - Manjunath N | Last Updated : Sep 4, 2023, 09:14 PM IST
  • ಪತ್ನಿಯೇ ನನ್ನ ಮೇಲೆ ಮಾಟಮಂತ್ರ ಪ್ರಯೋಗ ಮಾಡಿಸಿದ್ದಾಳೆಂದು ಆರೋಪಿಸಿ ಪತಿಯೊಬ್ಬ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.
  • ಮನೆ ತುಂಬ ನಿಂಬೆಹೆಣ್ಣು, ಕುಂಕುಮ ಹಾಕಿದ್ದು, ಇದರಿಂದ ಪತ್ನಿಯ ಬೆರಳು ಕಟ್ ಆಗಿ ಸುರೀತಿತ್ತು
  • ಊಟದಲ್ಲಿ ಬೂದಿ, ಬೇರೆ ಬೇರೆ ರೀತಿಯ ಎಣ್ಣೆ ಹಾಗೂ ಉಗುಳನ್ನು ಬೆರಸಿ ಕೊಡುತ್ತಿದ್ದರೆಂದು ಪತಿ ಆರೋಪಿಸಿದ್ದಾರೆ.
ಗಂಡನ ಮೇಲೆ ಮಾಟಮಂತ್ರ ಮಾಡಿಸಿದ ಹೆಂಡತಿ: ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಗಂಡ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಪತ್ನಿಯೇ ನನ್ನ ಮೇಲೆ ಮಾಟಮಂತ್ರ ಪ್ರಯೋಗ ಮಾಡಿಸಿದ್ದಾಳೆಂದು ಆರೋಪಿಸಿ ಪತಿಯೊಬ್ಬ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.ಮನೆ ತುಂಬ ನಿಂಬೆಹೆಣ್ಣು, ಕುಂಕುಮ ಹಾಕಿದ್ದು, ಇದರಿಂದ ಪತ್ನಿಯ ಬೆರಳು ಕಟ್ ಆಗಿ ಸುರೀತಿತ್ತು.
ಅಷ್ಟೆ ಅಲ್ಲದೆ ತನಗೆ ಗೊತ್ತಾಗದೆ  ಊಟದಲ್ಲಿ ಬೂದಿ, ಬೇರೆ ಬೇರೆ ರೀತಿಯ ಎಣ್ಣೆ ಹಾಗೂ ಉಗುಳನ್ನು ಬೆರಸಿ ಕೊಡುತ್ತಿದ್ದರೆಂದು ಪತಿ ಆರೋಪಿಸಿದ್ದಾರೆ.

ಇದನ್ನೂ ಓದಿ-ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕಬೇಕೆ? ಈ ಸೂಪರ್ ಡ್ರಿಂಕ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ!

ಪ್ರೈವೇಟ್ ಡಿಟೆಕ್ಟಿವ್‌ ಮೊರೆ ಹೋಗಿದ್ದ ಪತಿಗೆ ಬಿಗ್ ಶಾಕ್ ಆಗಿದ್ದು, ವೈದ್ಯೆ ಪತ್ನಿ ಹಾಗೂ ಆಕೆಯ ತಾಯಿಯಿಂದ ಬ್ಲಾಕ್ ಮ್ಯಾಜಿಕ್ ಮಾಡಿಸಿದ್ದಾರೆಂದು ಪತಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.ಸ್ಮಶಾನದಲ್ಲಿ ಪೂಜೆ ಮಾಡುವ ಅತ್ತಿಗುಪ್ಪೆಯ ಮಾಂತ್ರಿಕ ನಾಗೇಂದ್ರನಿಂದ ಮಾಟಮಂತ್ರ ಮಾಡಿಸಿದ್ದಾರೆಂದು ಉದ್ಯಮಿ ದೇವಕುಮಾರ್  ಪತ್ನಿ ಡಾಕ್ಟರ್ ಐಶ್ವರ್ಯ ಮೇಲೆ ದೂರು ನೀಡಿದ್ದಾರೆ.

ಇದನ್ನೂ ಓದಿ-ಹಲವು ಪ್ರಯತ್ನಗಳ ಬಳಿಕವೂ ತೂಕ ಇಳಿಕೆಯಾಗುತ್ತಿಲ್ಲವೇ? ಈ ಆಹಾರದ ಕಾಂಬಿನೇಷನ್ ಟ್ರೈ ಮಾಡಿ !

ಬ್ಯೂಸಿನೆಸ್ ಟ್ರಿಪ್ ಮೇಲೆ ಹೊರ ಹೋಗಿದ್ದ ವೇಳೆ ಬ್ಲಾಕ್ ಮ್ಯಾಜಿಕ್ ನಡೆಸಿದ್ದು, ಮನೆಗೆ ವಾಪಸ್ ಬಂದಾಗ ಮನೆ ತುಂಬ ನಿಂಬೆಹಣ್ಣು, ಪೂಜೆ ಮಾಡಿದ್ದ ತೆಂಗಿನಕಾಯಿ ಕುಂಕುಮ ಇದ್ದದ್ದನ್ನು ಕಂಡ ಪತಿ ಅನುಮಾನಗೊಂಡು ಗ್ಲೋಬಲ್ ಡಿಟೆಕ್ಟಿವ್‌ ಏಜೆನ್ಸಿಯನ್ನ ಸಂಪರ್ಕಿಸಿದ್ದರಂತೆ.ಮಾಂತ್ರಿಕರ ಜೊತೆ ಸೇರಿ ಪತ್ನಿ ಐಶ್ವರ್ಯ ಮತ್ತಾಕೆಯ ತಾಯಿ  ಮಹಾಲಕ್ಚ್ಮಿ ವಾಮಾಚಾರ ಮಾಡಿದ್ದಾರೆಂದು ವರದಿ ನೀಡಿದ್ದರಂತೆ.ಬ್ಲಾಕ್ ಮ್ಯಾಜಿಕ್ ಸಫಲವಾಗಲು ಆಹಾರದಲ್ಲಿ ಕೂಡ ನಿಷೇಧ ಪದಾರ್ಥಗಳನ್ನ ನೀಡುತ್ತಿದ್ದಾರೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಪತ್ನಿ ಹಾಗೂ ಆಕೆಯ ತಾಯಿಯಿಂದ ಜೀವ ಬೆದರಿಕೆ ಇದೆ ಎಂದು ಉದ್ಯಮಿ ದೂರು ನೀಡಿದ್ದಾರೆ. ಸದ್ಯ ಕಬ್ಬನ್ ಪಾರ್ಕ್ ಪೊಲೀಸರು ಕೋರ್ಟ್ ಆದೇಶ ಪಡೆದು Karnataka Prevention and Eradication of Inhuman Evil Practices and Blackagic act 2017  ನಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News