14 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ ಅಂಕಲ್ ಅರೆಸ್ಟ್..!

ಕೆಲ ವರ್ಷಗಳಿಂದ ಹೆಂಡತಿಯನ್ನು ಬಿಟ್ಟು ಬೇರೆಡೆ ವಾಸವಾಗಿದ್ದ ಆರೋಪಿ, ಇತ್ತೀಚೆಗೆ ಬಾಲಕಿಯನ್ನು ಮದುವೆಯಾಗೋದಾಗಿ ಪೋಷಕರಿಗೆ ಹೇಳಿದ್ದ.

Written by - Puttaraj K Alur | Last Updated : Sep 10, 2022, 10:10 AM IST
  • 14 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ ಅಂಕಲ್ ಅರೆಸ್ಟ್
  • ಕಳೆದ 7ನೇ ತಾರೀಖು ಒತ್ತಾಯ ಪೂರ್ವಕವಾಗಿ ಬಾಲಕಿಯನ್ನು ಮದುವೆಯಾಗಿದ್ದ ಗುರುಪ್ರಸಾದ್
  • ಈಗಾಗಲೇ ಮದುವೆಯಾಗಿದ್ದ ಗುರುಪ್ರಸಾದ್‍ಗೆ 17 ವರ್ಷದ ಮಗ ಇದ್ದಾನೆ
14 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ ಅಂಕಲ್ ಅರೆಸ್ಟ್..! title=
ಬಾಲಕಿಯನ್ನು ಮದುವೆಯಾಗಿದ್ದ ಅಂಕಲ್ ಅರೆಸ್ಟ್!

ಬೆಂಗಳೂರು: 14 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ ಅಂಕಲ್ ಒಬ್ಬನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗುರುಪ್ರಸಾದ್ (45) ಬಂಧಿತ ಆರೋಪಿ. ಪುಸಲಾಯಿಸಿ ಬಾಲಕಿಯನ್ನು ಮದುವೆಯಾಗಿದ್ದ ಈತನನ್ನು ಯಲಹಂಕದ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.  

ಕಳೆದ 7ನೇ ತಾರೀಖು ಬಾಲಕಿಯನ್ನು ಒತ್ತಾಯ ಪೂರ್ವಕವಾಗಿ ಆರೋಪಿ ಗುರುಪ್ರಸಾದ್ ಮದುವೆಯಾಗಿದ್ದ. ಬಾಲಕಿಗೆ ಇಷ್ಟವಿಲ್ಲದಿದ್ದರೂ ಆಕೆಯ ಪೋಷಕರಿಗೆ ಹಣದಾಸೆ ತೋರಿಸಿ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.  

ಇದನ್ನೂಓದಿ: Bangalore Traffic Problem : ಬೆಂಗಳೂರು ಸಂಚಾರ ದಟ್ಟಣೆಗೆ ಸ್ಕೈ ಬಸ್, ಟ್ರಾಲಿ ಬಸ್ ಕೇಂದ್ರ ಸಚಿವ ಗಡ್ಕರಿ ಸಲಹೆ!

ಈಗಾಗಲೇ ಮದುವೆಯಾಗಿ ಗುರುಪ್ರಸಾದ್‍ಗೆ 17 ವರ್ಷದ ಮಗ ಇದ್ದಾನೆ. ಕೆಲ ವರ್ಷಗಳಿಂದ ಹೆಂಡತಿಯನ್ನು ಬಿಟ್ಟು ಬೇರೆಡೆ ವಾಸವಾಗಿದ್ದ ಆರೋಪಿ, ಇತ್ತೀಚೆಗೆ ಬಾಲಕಿಯನ್ನು ಮದುವೆಯಾಗೋದಾಗಿ ಪೋಷಕರಿಗೆ ಹೇಳಿದ್ದ. ಬಾಲಕಿಗೆ ಒಪ್ಪಿಗೆ ಇಲ್ಲದಿದ್ರೂ ಪೋಷಕರಿಗೆ ಹಣದಾಸೆ ತೋರಿಸಿದ್ದ. 7ನೇ ತಾರೀಖು ನಗರದ ಹೊರ ವಲಯಕ್ಕೆ ಕರೆದೊಯ್ದು ಆಕೆಯನ್ನು ಮದುವೆಯಾಗಿದ್ದ.

ಈ ಬಗ್ಗೆ ಪರಿಚಯಸ್ಥರ ಬಳಿ ಬಾಲಕಿ ನೋವು ತೋಡಿಕೊಂಡಿದ್ದಳು. ಕೂಡಲೇ ಅವರು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಆರೋಪಿ ಜೊತೆಗೆ ಬಾಲಕಿಯ ತಂದೆ-ತಾಯಿಯನ್ನೂ ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂಓದಿ: Karnataka ACB : ರಾಜ್ಯ ಸರ್ಕಾರದಿಂದ 'ಎಸಿಬಿ' ರದ್ದುಗೊಳಿಸಿ ಅಧಿಕೃತ ಅಧಿಸೂಚನೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News