ಮೇಕೆ ಬಚಾವ್ ಮಾಡಲು ಮುಂದಾದ ಕುರಿಗಾಹಿಗಳ ಮೇಲೆ ಎಗರಿದ ಹುಲಿ; ಇಬ್ಬರಿಗೆ ಗಾಯ!

Tiger Attacks on Shepherds: ಶಿವಪುರ ಗ್ರಾಮದ ಹೊರವಲಯದಲ್ಲಿ ಮೇಕೆ ಮೇಯಿಸುವ ವೇಳೆ ಮೇಕೆಯೊಂದನ್ನು ಹುಲಿ ಹಿಡಿದಿದೆ. ಮೇಕೆಯನ್ನು ಬಚಾಬ್ ಮಾಡಲು ಈ ಇಬ್ಬರು ಕೂಗಾಡಿ ಹತ್ತಿರ ಹೋದ ವೇಳೆ ಮೇಕೆಯನ್ನು ಬಿಟ್ಟು ಇವರಿಬ್ಬರ ಮೇಲೆ ಹುಲಿ ಎಗರಿ ಗಾಯಗೊಳಿಸಿದೆ.

Written by - Zee Kannada News Desk | Last Updated : Feb 12, 2024, 08:57 PM IST
  • ಮೇಕೆ ಬಚಾವ್‌ ಮಾಡಲು ಹೋದ ಕುರಿಗಾಹಿಗಳ ಮೇಲೆ ಹುಲಿ ದಾಳಿ
  • ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಹೊರವಲಯದಲ್ಲಿ ಘಟನೆ
  • ಇಬ್ಬರ ಎದೆ, ಮೊಣಕಾಲು, ತೊಡೆ, ಬೆನ್ನಿಗೆ ಪರಚಿದ ಹುಲಿ ಎಸ್ಕೇಪ್
ಮೇಕೆ ಬಚಾವ್ ಮಾಡಲು ಮುಂದಾದ ಕುರಿಗಾಹಿಗಳ ಮೇಲೆ ಎಗರಿದ ಹುಲಿ; ಇಬ್ಬರಿಗೆ ಗಾಯ! title=
ಕುರಿಗಾಹಿಗಳ ಮೇಲೆ ಹುಲಿ ದಾಳಿ!

ಚಾಮರಾಜನಗರ: ಕುರಿಗಾಹಿಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಇಬ್ಬರನ್ನು ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಹೊರವಲಯದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ‌ ಶಿವಪುರ ಗ್ರಾಮದ ಜವರಶೆಟ್ಟಿ ಹಾಗೂ ಶಿವಶೆಟ್ಟಿ ಎಂಬವರು ಹುಲಿ ದಾಳಿಯಿಂದ ಗಾಯಗೊಂಡು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಶೆಟ್ಟಿ ಮತ್ತು ಜವರಶೆಟ್ಟಿ ಅವರ ಎದೆ, ಮೊಣಕಾಲು, ತೊಡೆ, ಬೆನ್ನಿಗೆ ಪರಚಿದ ಹುಲಿ ಗಾಯಗೊಳಿಸಿದೆ.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ

ಶಿವಪುರ ಗ್ರಾಮದ ಹೊರವಲಯದಲ್ಲಿ ಮೇಕೆ ಮೇಯಿಸುವ ವೇಳೆ ಮೇಕೆಯೊಂದನ್ನು ಹುಲಿ ಹಿಡಿದಿದೆ. ಮೇಕೆಯನ್ನು ಬಚಾಬ್ ಮಾಡಲು ಈ ಇಬ್ಬರು ಕೂಗಾಡಿ ಹತ್ತಿರ ಹೋದ ವೇಳೆ ಮೇಕೆಯನ್ನು ಬಿಟ್ಟು ಇವರಿಬ್ಬರ ಮೇಲೆ ಹುಲಿ ಎಗರಿ ಗಾಯಗೊಳಿಸಿದೆ. ಕಿರುಚಾಟ ಕೇಳಿ ಹತ್ತಿರದಲ್ಲಿದ್ದ ಪುಟ್ಟಸಿದ್ದಯ್ಯ ಹಾಗೂ ಇನ್ನಿತರರು ದೌಡಾಯಿಸಿ ಬೆದರಿಸಿದ ಬಳಿಕ ಹುಲಿ ಕಾಡಿನತ್ತ ಓಡಿ ಹೋಗಿದೆ ಎಂದು ತಿಳಿದುಬಂದಿದೆ.

ಹುಲಿ ಮನುಷ್ಯರ ಮೇಲೆ ದಾಳಿ ಮಾಡಲು ಮುಂದಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು, ಕೂಡಲೇ ಹುಲಿ ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಕಮಿಷನರ್ ಕಚೇರಿಗೆ ಆಗಮಿಸಿದ ಬಿಜೆಪಿ ನಾಯಕರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News