ಕಾಣೆಯಾಗಿದ್ದ ಮೂವರು ಶಾಲಾ ಬಾಲಕಿಯರು ಕೊನೆಗೂ ಪತ್ತೆ!

ಖಾಸಗಿ ಶಾಲೆಯೊಂದರಲ್ಲಿ ಮೂವರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಶಾಲಾ ಹಾಸ್ಟೆಲ್ ನಲ್ಲಿದ್ದು ಓದುತ್ತಿದ್ದರು. ಮತ್ತೊಬ್ಬ ಬಾಲಕಿ ಮನೆಯಿಂದಲೇ ಶಾಲೆಗೆ ತೆರಳುತ್ತಿದ್ದಳು. 

Written by - VISHWANATH HARIHARA | Edited by - Yashaswini V | Last Updated : Sep 26, 2022, 02:52 PM IST
  • ಖಾಸಗಿ ಶಾಲೆಯೊಂದರಲ್ಲಿ ಮೂವರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದರು.
  • ಇಬ್ಬರು ಶಾಲಾ ಹಾಸ್ಟೆಲ್ ನಲ್ಲಿದ್ದು ಓದುತ್ತಿದ್ದರು.
  • ಮತ್ತೊಬ್ಬ ಬಾಲಕಿ ಮನೆಯಿಂದಲೇ ಶಾಲೆಗೆ ತೆರಳುತ್ತಿದ್ದಳು.
ಕಾಣೆಯಾಗಿದ್ದ ಮೂವರು ಶಾಲಾ ಬಾಲಕಿಯರು ಕೊನೆಗೂ ಪತ್ತೆ!  title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ 20 ದಿನದ ಹಿಂದೆ ಕಾಣೆಯಾಗಿದ್ದ ಮೂವರು ಶಾಲಾ ಬಾಲಕಿಯರು ಕೊನೆಗೂ ಪತ್ತೆಯಾಗಿದ್ದಾರೆ. ಅಪ್ರಾಪ್ತೆಯರನ್ನು ಪುಲಕೇಶಿನಗರ ಪೊಲೀಸರು ತಮಿಳುನಾಡಿನ ಚೆನ್ನೈನಲ್ಲಿ ಪತ್ತೆಹಚ್ಚಿ ನಗರಕ್ಕೆ ಕರೆತಂದಿದ್ದಾರೆ. 

ಖಾಸಗಿ ಶಾಲೆಯೊಂದರಲ್ಲಿ ಮೂವರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಶಾಲಾ ಹಾಸ್ಟೆಲ್ ನಲ್ಲಿದ್ದು ಓದುತ್ತಿದ್ದರು. ಮತ್ತೊಬ್ಬ ಬಾಲಕಿ ಮನೆಯಿಂದಲೇ ಶಾಲೆಗೆ ತೆರಳುತ್ತಿದ್ದಳು. ಈ ಬಾಲಕಿಯರು ಕಳೆದ ಕೆಲವು ದಿನಗಳ ಹಿಂದೆ ಯಾರಿಗೂ ಹೇಳದೆ ನಾಪತ್ತೆಯಾಗಿದ್ದರು. 

ಇದನ್ನೂ ಓದಿ- ದೊಡ್ಡಬಳ್ಳಾಪುರದಲ್ಲಿ ಹೊತ್ತಿ ಹುರಿದ ಕೆಮಿಕಲ್ ಫ್ಯಾಕ್ಟರಿ

ಊರು ಬಿಡಲು ನಿರ್ಧರಿಸಿದ್ದ ಈ ಅಪ್ರಾಪ್ತೆಯರು ಮನೆಯಲ್ಲಿ ಕಷ್ಟವಿದೆ ಎಂದು ಸ್ನೇಹಿತೆಯರು ಹಾಗೂ‌ ಪರಿಚಯಸ್ಥರಿಂದ ಸುಮಾರು 21 ಸಾವಿರ ರೂಪಾಯಿ ಹಣ ಸಂಗ್ರಹಿಸಿದ್ದರು. ಇದೇ ತಿಂಗಳು ಸೆಪ್ಟೆಂಬರ್ 6 ರಂದು ಹಾಸ್ಟೆಲ್ ವಾರ್ಡನ್ ಹಾಗೂ ಸೆಕ್ಯೂರಿಟಿ ಕಣ್ತಪ್ಪಿಸಿ ಲಗೇಜ್ ಸಮೇತ ಬೆಂಗಳೂರು ತೊರೆದಿದ್ದರು. ಮಾರ್ಗ ಮಧ್ಯೆ ಮತ್ತೋರ್ವ ಬಾಲಕಿ ಕೂಡಿಕೊಂಡು ಆಟೋ ಮೂಲಕ ಸೇವಾನಗರಕ್ಕೆ ತೆರಳಿದ್ದರು. ಅಂಗಡಿಯಲ್ಲಿ ಬಟ್ಟೆ ಖರೀದಿಸಿ ಕಂಟ್ಮೋನೆಂಟ್ ರೈಲು ನಿಲ್ದಾಣದಿಂದ ಚೆನ್ನೈ ರೈಲು ಹತ್ತಿದ್ದರು. ಬಳಿಕ ಚೆನ್ನೈನಲ್ಲಿ ಇಳಿದು ಆಟೋ ಚಾಲಕನನ್ನ ಪರಿಚಯಿಸಿಕೊಂಡು ಮೂವರು ಅನಾಥರು ಎಂದು ಹೇಳಿದ್ದರು. ಇದನ್ನ ನಂಬಿದ ಆಟೋ ಚಾಲಕ ತಮ್ಮ ಮನೆಗೆ ಕರೆದೊಯ್ದಿದ್ದ. ಕಾಣೆಯಾಗಿ ಕಳೆದ 20 ದಿನ ಕಳೆದರೂ ಬಾಲಕಿಯರ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ‌. 

ಇದನ್ನೂ ಓದಿ- NSE Phone Tapping Case: ಫೋನ್ ಟ್ಯಾಪಿಂಗ್ ಪ್ರಕರಣ, ಮುಂಬೈ ಮಾಜಿ ಪೋಲೀಸ್ ಕಮಿಷನರ್ ಸಿಬಿಐ ವಶಕ್ಕೆ

ಈ ನಡುವೆ ನಾಪತ್ತೆಯಾಗಿದ್ದ ಮೂವರಲ್ಲಿ ಓರ್ವಳು ಸ್ನೇಹಿತೆಗೆ ಕರೆ ಮಾಡಿ ಮಾತನಾಡಿದ್ದಳು. ಈ ಬಗ್ಗೆ ಸ್ನೇಹಿತೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಈ ಕರೆ ಜಾಡನ್ನು ಹಿಡಿದು ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯರನ್ನು ನಗರಕ್ಕೆ ಕರೆತಂದಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಮೂವರು ಅಪ್ರಾಪ್ತೆಯರನ್ನು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News