ಬಂಡೀಪುರ ಕಾಡಲ್ಲಿ ಮೂರು ಚಿರತೆ ಸಾವು- 1 ಚಿರತೆ ವಿಷಪೂರಿತ ಮಾಂಸ ತಿಂದು ಮೃತ

Leopard Death: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯ ವಲಯದ ಕಣಿಯನಪುರ ಗ್ರಾಮದ ಸಮೀಪ 1 ಹಾಗೂ ಜಿ.ಎಸ್.ಬೆಟ್ಟ ವಲಯ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಮತ್ತೊಂದು ಚಿರತೆ ಶವ ಪತ್ತೆಯಾಗಿದ್ದು ಸಾವಿಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. 

Written by - Yashaswini V | Last Updated : Jun 23, 2023, 08:58 AM IST
  • ಗುಂಡ್ಲುಪೇಟೆ ಬಫರ್ ವಲಯದ ಕೂತನೂರು ಗ್ರಾಮದ ಜಮೀನಿನಲ್ಲಿ ವಿಷಪೂರಿತ ಮಾಂಸ ತಿಂದು 3 ವರ್ಷದ ಚಿರತೆಯೊಂದು ಸಾವನ್ನಪ್ಪಿದೆ.
  • ಜಿ.ಆರ್. ಗೋವಿಂದರಾಜ ಎಂಬವರ ಜಮೀನಿನಲ್ಲಿ ಈ ದುರ್ಘಟನೆ ಬೆಳಕಿಗೆ ಬಂದಿದೆ.
ಬಂಡೀಪುರ ಕಾಡಲ್ಲಿ ಮೂರು ಚಿರತೆ ಸಾವು- 1 ಚಿರತೆ ವಿಷಪೂರಿತ ಮಾಂಸ ತಿಂದು ಮೃತ title=

Three Leopard Found Dead: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದೇ ದಿನ 3 ಚಿರತೆ ಶವಗಳು ಪತ್ತೆಯಾಗಿತುವ ಆತಂಕಕಾರಿ ಘಟನೆ ಇಂದು ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯ ವಲಯದ ಕಣಿಯನಪುರ ಗ್ರಾಮದ ಸಮೀಪ 1 ಹಾಗೂ ಜಿ.ಎಸ್.ಬೆಟ್ಟ ವಲಯ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಮತ್ತೊಂದು ಚಿರತೆ ಶವ ಪತ್ತೆಯಾಗಿದ್ದು ಸಾವಿಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. 

ಕಣಿಯನಪುರ, ಮಂಗಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಅರಣ್ಯಾಧಿಕಾರಿಗಳು ಕಣಿಯನಪುರದಲ್ಲಿ 5 ವರ್ಷದ ಗಂಡು‌ ಚಿರತೆ, ಮಂಗಲ ಗ್ರಾಮದಲ್ಲಿ 2.5 ವರ್ಷದ ಹೆಣ್ಣು ಚಿರತೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. 

ಇದನ್ನೂ ಓದಿ- ಸತ್ತಿದ್ದ ಹುಲಿ, ಚಿರತೆ ಹೂತಿಟ್ಟಿದ್ದು ಆರ್‌ಎಫ್‌ಒ, ನೌಕರರು ಬಲಿಪಶು: ಪರಿಸರ ಹೋರಾಟಗಾರ ಹೂವರ್

ವಿಷಪೂರಿತ ಮಾಂಸ ಸೇವಿಸಿ ಮತ್ತೊಂದು ಚಿರತೆ ಮೃತ: 
ಇದಲ್ಲದೆ, ಗುಂಡ್ಲುಪೇಟೆ ಬಫರ್ ವಲಯದ  ಕೂತನೂರು ಗ್ರಾಮದ ಜಮೀನಿನಲ್ಲಿ ವಿಷಪೂರಿತ ಮಾಂಸ ತಿಂದು 3 ವರ್ಷದ ಚಿರತೆಯೊಂದು ಸಾವನ್ನಪ್ಪಿದೆ. ಜಿ.ಆರ್.ಗೋವಿಂದರಾಜ ಎಂಬವರ ಜಮೀನಿನಲ್ಲಿ ಈ ದುರ್ಘಟನೆ ಬೆಳಕಿಗೆ ಬಂದಿದ್ದು  ಸಾಕು ನಾಯಿಯನ್ನು ಚಿರತೆ ಬೇಟೆಯಾಡಿ ಹೋಗಿತ್ತು. ಉಳಿದ ಕಳೇಬರಕ್ಕೆ ಜಮೀನಿನ ಕಾವಲುಗಾರ ಸೋಮಶೇಖರ್ ಕೀಟನಾಶಕ ಸಿಂಪಡಿಸಿ ಇರಿಸಿದ್ದನು. ತನ್ನ ಉಳಿದ ಬೇಟೆ ತಿನ್ನಲು ಬಂದ ಚಿರತೆ ವಿಷಪೂರಿತ ಮಾಂಸವನ್ನು ತಿಂದು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಸದ್ಯ, ವಿಷಪೂರಿತ ಮಾಂಸ ತಿಂದು ಸಾವನ್ನಪ್ಪಿರುವ ಚಿರತೆ 3 ವರ್ಷದ ಹೆಣ್ಣು ಚಿರತೆ ಎಂದು ಬಂಡೀಪುರ‌ ಸಿಎಫ್ಒ ರಮೇಶ್ ಕುಮಾರ್ ತಿಳಿಸಿದ್ದಾರೆ‌.

ಇದನ್ನೂ ಓದಿ- ಹುಡುಗಿ ಪಕ್ಕ ಕೂತಿದ್ದೀಯಾ ಎಂದು ವ್ಯಕ್ತಿಗೆ ಯುವಕರ ಗುಂಪಿನಿಂದ ಮನಬಂದಂತೆ ಹಲ್ಲೆ..!

ವಿಷ ಹಾಕಿದ್ದ ಕಾವಲುಗಾರ ಸೋಮಶೇಖರ್ ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಣಿಯನಪುರ ಹಾಗೂ ಮಂಗಲ ಗ್ರಾಮದ ಚಿರತೆ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News