Thief Dance Video: CCTV ಫೂಟೇಜ್ ನಲ್ಲಿ ಕಂಡ ಕಳ್ಳನ ವಿಶಿಷ್ಟ ಡಾನ್ಸ್, ನೀವೂ ನೋಡಿ

Thief Dance Viral Video: ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಕಳ್ಳನೊಬ್ಬ ಕಳ್ಳತನ ಮಾಡುವುದಲ್ಲದೆ ಕ್ಯಾಮರಾ ನೋಡಿ ಡ್ಯಾನ್ಸ್ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಗಮನಿಸಲಾಗಿದೆ.

Written by - Nitin Tabib | Last Updated : Apr 19, 2022, 11:40 AM IST
  • ಉತ್ತರ ಪ್ರದೇಶದ ಚಂದೌಲಿಯಲ್ಲೊಂದು ವಿಶಿಷ್ಟ ಕಳ್ಳತನದ ಘಟನೆ
  • ಕಳ್ಳತನ ಮಾಡಿದ ಕಳ್ಳ ಬಳಿಕ ಸಿಸಿಟಿವಿ ಮುಂದೆ ಡಾನ್ಸ್ ಮಾಡಿದ್ದಾನೆ
  • ವಿಶೇಷ ಎಂದರೆ ಈ ಕಳ್ಳತನದ ಘಟನೆ SP ಕಚೇರಿ ಮುಂದೆಯೇ ನಡೆದಿದೆ
Thief Dance Video: CCTV ಫೂಟೇಜ್ ನಲ್ಲಿ ಕಂಡ ಕಳ್ಳನ ವಿಶಿಷ್ಟ ಡಾನ್ಸ್, ನೀವೂ ನೋಡಿ title=
Robbery

Thief Dance Video  - ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ನಡೆದಿರುವ ವಿಶಿಷ್ಟ ಕಳ್ಳತನದ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಆದರೆ ಈ ಕಳ್ಳತನದ ವಿಡಿಯೋದಲ್ಲಿರುವ ಕಳ್ಳನ ಕುಚೇಷ್ಟೆ ಎಲ್ಲರನ್ನೂ ವಿಡಿಯೋ ನೋಡುವಂತೆ ಮಾಡಿದೆ. ಈ ವಿಶಿಷ್ಟ ಕಳ್ಳತನದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ, 

ಕ್ಯಾಮರಾ ನೋಡಿ ಡಾನ್ಸ್ ಆರಂಭಿಸಿದ ಕಳ್ಳ
ಈ ಕಳ್ಳ ಚಂದೌಲಿಯ ಹಾರ್ಡ್‌ವೇರ್ ಅಂಗಡಿಯನ್ನು ಗುರಿಯಾಗಿಸಿಕೊಂಡು ಸಾವಿರಾರು ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾನೆ. ಈ ವೇಳೆ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ನೋಡಿದ ತಕ್ಷಣ ಆತ ಡ್ಯಾನ್ಸ್ ಮಾಡಲು ಆರಂಭಿಸಿದ್ದಾನೆ. ಪ್ರಸ್ತುತ ಈ ವಿಡಿಯೋ ವೈರಲ್ ಆಗುತ್ತಿದೆ 

ಇದನ್ನೂ ಓದಿ-Snake Mongoose Fight: ಹಾವು-ಮುಂಗುಸಿಯ ನಡುವೆ ಭೀಕರ ಕಾಳಗ, ನೋಡಿ ನೀವು ಒಂದು ಕ್ಷಣ ದಂಗಾಗುವಿರಿ

SP ನಿವಾಸದ ಬಳಿಯೇ ಈ ಕಳ್ಳತನ ನಡೆದಿದೆ
ಕಳೆದ ವಾರದ ಶುಕ್ರವಾರದಂದು ಸಂಭವಿಸಿದ ಈ ಕಳ್ಳತನದ ಘಟನೆಯ ಆಘಾತಕಾರಿ ಸಂಗತಿಯೆಂದರೆ, ಕಳ್ಳನು ಟಾರ್ಗೆಟ್ ಮಾಡಿದ ಅಂಗಡಿ ಚಂದೌಲಿಯಲ್ಲಿರುವ ಪೊಲೀಸ್ ವರಿಷ್ಠಾಧಿಕಾರಿಯ ನಿವಾಸದ ಹತ್ತಿರವೇ ಇದೆ ಎನ್ನಲಾಗಿದೆ. ಈ ಕಳ್ಳತನದ ಘಟನೆಯಲ್ಲಿ ಒಟ್ಟು ಆರು ಸಾವಿರ ರೂಪಾಯಿ ಮೌಲ್ಯದ ನಗದು ಹಾಗೂ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳತನ ಮಾಡಲು ಹಾರ್ಡ್‌ವೇರ್ ಅಂಗಡಿಗೆ ನುಗ್ಗಿದ ಕಳ್ಳ, ಕಳ್ಳತನದ ಬಳಿಕ ಸಿಸಿಟಿವಿ ಕ್ಯಾಮೆರಾದತ್ತ ತಿರುಗಿ ಜೋರಾಗಿ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ-Viral Video: ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಮರಿ ಆನೆ, ತಾಯಿ ಆನೆ ಮಾಡಿದ ಕೆಲಸಕ್ಕೆ ಸೆಲ್ಯೂಟ್ ಹೊಡೆಯಲೇಬೇಕು

ತನಿಖೆಯಲ್ಲಿ ತೊಡಗಿದ ಪೊಲೀಸರು 
ಚಂದೌಲಿಯ ಜಸೂರಿ ಗ್ರಾಮದ ನಿವಾಸಿಯಾಗಿರುವ ಅಂಶು ಸಿಂಗ್ ಅವರು ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್ಪಿ ನಿವಾಸದ ಬಳಿ ಹಾರ್ಡ್‌ವೇರ್ ಅಂಗಡಿಯನ್ನು ಹೊಂದಿದ್ದಾರೆ. ಶುಕ್ರವಾರ ಈ ಘಟನೆ ಸಂಭವಿಸಿದ್ದು, ಶನಿವಾರ ಬೆಳಗ್ಗೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆಯ ಬಗ್ಗೆ ಅಂಗಡಿಯ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News