Chitradurga: ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ!

Chitradurga suicide Case: ವಿಶಾಲಾಕ್ಷಿ ಅನ್ಯಜಾತಿಯವಳು ಅಂತಾ ತಿಪ್ಪೇಸ್ವಾಮಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬಸ್ಥರ ವಿರೋಧದ ನಡುವೆಯೂ ತಿಪ್ಪೇಸ್ವಾಮಿ ವಿಶಾಲಾಕ್ಷಿಯನ್ನು ಮದುವೆಯಾಗಿದ್ದ. ​

Written by - Puttaraj K Alur | Last Updated : Feb 26, 2024, 03:46 PM IST
  • ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ
  • ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಡೆದಿರುವ ಘಟನೆ
  • ಪ್ರೀತಿಸಿ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಜೋಡಿ
Chitradurga: ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ! title=
ಮೊದಲ ಪತ್ನಿ ಆತ್ಮಹತ್ಯೆ!

ಚಿತ್ರದುರ್ಗ: ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಡೆದಿದೆ. ಪತಿಯ ಮತ್ತೊಂದು ವಿವಾಹದ ವಿಚಾರ ತಿಳಿದು ಮೊದಲ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಶಾಲಾಕ್ಷಿ (21) ಮೃತ ದುರ್ದೈವಿ. ವಿಶಾಲಾಕ್ಷಿ-ತಿಪ್ಪೇಸ್ವಾಮಿ ಪ್ರೀತಿಸಿ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ತಿಪ್ಪೇಸ್ವಾಮಿ ಚಾಲಕನಾಗಿದ್ದು, ವಿಶಾಲಾಕ್ಷಿಯ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿದ್ದಳು. ಮದುವೆ ನಂತರ ವಿಶಾಲಾಕ್ಷಿ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಳು. 

ಇದನ್ನೂ ಓದಿ- ಯುಪಿಯಲ್ಲಿ ಘೋರ ದುರಂತ: ಕೆರೆಗೆ ಟ್ರ್ಯಾಕ್ಟರ್ ಪಲ್ಟಿಯಾಗಿ ಮಕ್ಕಳು ಸೇರಿ 22 ಮಂದಿ ದುರ್ಮರಣ..!

ವಿಶಾಲಾಕ್ಷಿ ಅನ್ಯಜಾತಿಯವಳು ಅಂತಾ ತಿಪ್ಪೇಸ್ವಾಮಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಕುಟುಂಬಸ್ಥರ ವಿರೋಧದ ನಡುವೆಯೂ ತಿಪ್ಪೇಸ್ವಾಮಿ ವಿಶಾಲಾಕ್ಷಿಯನ್ನು ಮದುವೆಯಾಗಿದ್ದ. ಆದರೆ ತಿಪ್ಪೇಸ್ವಾಮಿ ಮದುವೆ ನಂತರ ವಿಶಾಲಾಕ್ಷಿಯಿಂದ ದೂರವಾಗಿದ್ದನು.

ಪತಿ ಕೈಬಿಟ್ಟ ನಂತರ ವಿಶಾಲಾಕ್ಷಿ ಕೂನಬೇವು ಗ್ರಾಮದಲ್ಲಿನ ತವರು ಮನೆಗೆ ಹೋಗಿ ಓದನ್ನು ಮುಂದುವರೆಸಿದ್ದಳು. ಇತ್ತ ತಿಪ್ಪೇಸ್ವಾಮಿಗೆ ಆತನ ಕುಟುಂಬಸ್ಥರು ಮತ್ತೊಂದು ಮದುವೆ ಮಾಡಿಸಿದ್ದಾರೆ. ಈ ವಿಚಾರ ತಿಳಿದ ವಿಶಾಲಾಕ್ಷಿ ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಈ ಬಗ್ಗೆ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ- OMG: ಡಿಜೆ ಸೌಂಡ್‌ಗೆ ಹೃದಯಾಘಾತ; ಕುಸಿದು ಬಿದ್ದು ವ್ಯಕ್ತಿ ಸಾವು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News