ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ದಸರಾ ರಜೆಯಲ್ಲಿ ಗರ್ಭಪಾತಕ್ಕೆ ಕರೆತಂದು ಶಿಕ್ಷಕ ಎಸ್ಕೇಪ್!

ಪೊಲೀಸರಿಗೆ ದೂರು ಬಂದಿದೆ ಎಂದು ಗೊತ್ತಾದ ಕೂಡಲೇ ಆರೋಪಿಯು ಅಪ್ರಾಪ್ತೆಯನ್ನು ಮಾಚರ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದ.

Written by - Puttaraj K Alur | Last Updated : Oct 14, 2022, 09:39 AM IST
  • ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಶಿಕ್ಷಕನಿಂದ ನೀಚ ಕೃತ್ಯ
  • ದಸರಾ ರಜೆಯಲ್ಲಿ ಗರ್ಭಪಾತಕ್ಕೆ ಕರೆತಂದು ಎಸ್ಕೇಪ್ ಆಗಿದ್ದ ಆರೋಪಿ
  • ಆಂಧ್ರದ ಪಲ್ನಾಡು ಜಿಲ್ಲೆಯ ರೇಣಿಗುಂಟದಲ್ಲಿ ನಡೆದಿರುವ ಹೀನ ಕೃತ್ಯ
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ದಸರಾ ರಜೆಯಲ್ಲಿ ಗರ್ಭಪಾತಕ್ಕೆ ಕರೆತಂದು ಶಿಕ್ಷಕ ಎಸ್ಕೇಪ್!  title=
ಶಿಕ್ಷಕನಿಂದ ನೀಚ ಕೃತ್ಯ

ಗುಂಟೂರು: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದ ಶಿಕ್ಷಕನೊಬ್ಬ ದಸರಾ ರಜೆಯಲ್ಲಿ ಗರ್ಭಪಾತಕ್ಕೆ ಕರೆತಂದು ಎಸ್ಕೇಪ್ ಆಗಿರುವ ಘಟನೆ ಆಂಧ‍್ರಪ್ರದೇಶದಲ್ಲಿ ನಡೆದಿದೆ. ಪಲ್ನಾಡು ಜಿಲ್ಲೆಯ ರೇಣಿಗುಂಟದ ಸರ್ಕಾರಿ ಬುಡಕಟ್ಟು ಕಲ್ಯಾಣ ಬಾಲಕಿಯರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕ ಅತ್ಯಾಚಾರ ಎಸಗಿದ್ದ. ಬಳಿಕ ಅಪ್ರಾಪ್ತ ಬಾಲಕಿಯನ್ನು ಗರ್ಭಪಾತಕ್ಕೆ ಆಸ್ಪತ್ರೆಗೆ ಕರೆತಂದು ಅಲ್ಲೇ ಬಿಟ್ಟು ಹೋಗಿದ್ದ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ.    

ಆರೋಪಿ ಪೆದ್ದಲಪುಡಿ ಶ್ರೀನಿವಾಸರಾವ್ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಪಿಸಿಯ ಇತರ ಸೆಕ್ಷನ್‌ಗಳಡಿ  ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ  ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: AAI Recruitment 2022 : ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 55 ಹುದ್ದೆಗಳಿಗೆ ಅರ್ಜಿ : ನ. 14 ಕೊನೆ ದಿನ

ಆರೋಪಿಯು ಬಾಲಕಿ ವಾಸವಾಗಿದ್ದ ಹಾಸ್ಟೆಲ್‍ನ ವಾರ್ಡನ್ ಆಗಿದ್ದ. ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆತ ಸುಮಾರು 1 ತಿಂಗಳ ಹಿಂದೆ ಶಾಲೆಯಿಂದ ವರ್ಗಾವಣೆಯಾಗಿದ್ದ. ತಾನು ಗರ್ಭಿಣಿಯಾಗಿರುವ ವಿಷಯವನ್ನು ಬಾಲಕಿ ಆತನಿಗೆ ತಿಳಿಸಿದ್ದಳು. ದಸರಾ ಹಬ್ಬದ ರಜೆಯಲ್ಲಿ ಅಕ್ರಮವಾಗಿ ಗರ್ಭಪಾತ ಮಾಡಿಸಲು ಬಾಲಕಿಯನ್ನು ಒಂಗೋಲ್‍ನಲ್ಲಿರುವ ವೈದ್ಯಕೀಯ ಕೇಂದ್ರಕ್ಕೆ ಆರೋಪಿಯು ಕರೆದೊಯ್ದಿದ್ದ.

ಈ ಮಧ್ಯೆ ಬಾಲಕಿ ಹಬ್ಬಕ್ಕೆ ಮನೆಗೆ ಬಾರದಿದ್ದಾಗ ಆಕೆಯ ಪೋಷಕರು ಹಾಸ್ಟೆಲ್‍ಗೆ ತೆರಳಿ ವಿಚಾರಿಸಿದ್ದಾರೆ. ಆಗ ಅಲ್ಲಿ ವಿದ್ಯಾರ್ಥಿನಿ ಇಲ್ಲದಿರುವುದು ಗೊತ್ತಾಗಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿಯು ಶ್ರೀನಿವಾಸರಾವ್ ಜೊತೆಗಿದ್ದಳು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಮಾಸ್ಕೋ -ದೆಹಲಿ ವಿಮಾನದಲ್ಲಿ ಬಾಂಬ್ ಬೆದರಿಕೆ .! ಎಲ್ಲಾ ಯಾತ್ರಿಗಳೂ ಸುರಕ್ಷಿತ

ಪೊಲೀಸರಿಗೆ ದೂರು ಬಂದಿದೆ ಎಂದು ಗೊತ್ತಾದ ಕೂಡಲೇ ಆರೋಪಿಯು ಅಪ್ರಾಪ್ತೆಯನ್ನು ಮಾಚರ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತ ಬಾಲಕಿಯನ್ನು ರಕ್ಷಿಸಿ ಶಿಶುಪಾಲನಾ ಕೇಂದ್ರದಲ್ಲಿ ಇರಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಗುರಜಾಲ ಡಿಎಸ್‌ಪಿ ಜಯರಾಮ ಪ್ರಸಾದ್ ಹೆಚ್ಚಿನ ವಿವರ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News