Shocking: ಊಟದಲ್ಲಿ ಕೂದಲು ಪತ್ತೆ; ಪತ್ನಿಯ ತಲೆಬೋಳಿಸಿ ಚಿತ್ರಹಿಂಸೆ ನೀಡಿದ ಸೈಕೋ ಪತಿ!

Shocking News: ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿ, ಅತ್ತೆ ಮತ್ತು ಸೋದರ ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.

Written by - Puttaraj K Alur | Last Updated : Dec 11, 2022, 09:03 AM IST
  • ಊಟದಲ್ಲಿ ಕೂದಲು ಪತ್ತೆಯಾಗಿದ್ದಕ್ಕೆ ಸೈಕೋನಂತೆ ವರ್ತಿಸಿ ಹೆಂಡತಿಗೆ ಚಿತ್ರಹಿಂಸೆ ನೀಡಿದ ಪತಿ
  • ಉತ್ತರಪ್ರದೇಶದ ಪಿಲಿಭಿತ್‌ನಲ್ಲಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಪಾಪಿ ಪತಿ
  • ಮನಬಂದಂತೆ ಹಲ್ಲೆ ನಡೆಸಿ ಹೆಂಡತಿಯ ತಲೆ ಬೋಳಿಸಿ ಮೃಗೀಯವಾಗಿ ವರ್ತಿಸಿದ ಸೈಕೋ ಪತಿ
Shocking: ಊಟದಲ್ಲಿ ಕೂದಲು ಪತ್ತೆ; ಪತ್ನಿಯ ತಲೆಬೋಳಿಸಿ ಚಿತ್ರಹಿಂಸೆ ನೀಡಿದ ಸೈಕೋ ಪತಿ! title=
ಮೃಗೀಯವಾಗಿ ವರ್ತಿಸಿದ ಸೈಕೋ ಪತಿ!

ನವದೆಹಲಿ: ಊಟದಲ್ಲಿ ಕೂದಲು ಪತ್ತೆಯಾಗಿದ್ದಕ್ಕೆ ವ್ಯಕ್ತಿಯೊಬ್ಬ ಸೈಕೋನಂತೆ ವರ್ತಿಸಿ ಹೆಂಡತಿಗೆ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರಪ್ರದೇಶದ ಪಿಲಿಭಿತ್‌ನಲ್ಲಿ ನಡೆದಿದೆ. ಸಣ್ಣ ಸಣ್ಣ ವಿಷಯಕ್ಕೂ ಕೋಪಗೊಳ್ಳುತ್ತಿದ್ದ ಪತಿ ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಊಟ ಮಾಡುತ್ತಿದ್ದ ವೇಳೆ ಆಹಾರದಲ್ಲಿ ಕೂದಲು ಪತ್ತೆಯಾಗಿದೆ. ಇದರಿಂದ ಕೋಪಕೊಂಡ ಪತಿ, ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಪಿಲಿಭಿತ್‌ನ ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪತಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಹೆಂಡತಿಯ ಕೈಕಾಲು ಕಟ್ಟಿ ಹಾಕಿ ಬಲವಂತವಾಗಿ ಸಂಭೋಗಕ್ಕೆ ಯತ್ನಿಸಿದ ಸೈಕೋ ಪತಿ ಬಳಿಕ ಆಕೆಯ ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾನೆ.

ಇದನ್ನೂ ಓದಿ: “ನಾನು 4 ಮಕ್ಕಳಿಗೆ ಜನ್ಮ ನೀಡಲು ಕಾಂಗ್ರೆಸ್ ಪಕ್ಷವೇ ಕಾರಣ”

ಅತ್ತೆ-ಮಾವ ಸಾಥ್!

ಹುಚ್ಚನಂತೆ ವರ್ತಿಸುವ ಮೂಲಕ ಪತ್ನಿಗೆ ಪತಿ ಚಿತ್ರಹಿಂಸೆ ನೀಡುವಾಗ ಆತನಿಗೆ ಅತ್ತೆ-ಮಾವ ಸಹ ಸಾಥ್ ನೀಡಿದ್ದಾರಂತೆ. ‘ನನ್ನ ಮೇಲೆ ಪತಿ ಮನಬಂದಂತೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದರೂ ಅತ್ತೆ-ಮಾವ ನನ್ನ ಸಹಾಯಕ್ಕೆ ಬರಲಿಲ್ಲ. ನನ್ನ ಮೇಲೆ ಗಂಡ ಮೃಗೀಯವಾಗಿ ವರ್ತಿಸುತ್ತಿರುವುದನ್ನು ಕಂಡು ಅತ್ತೆ-ಮಾವ ಮಜಾ ತೆಗೆದುಕೊಳ್ಳುತ್ತಿದ್ದರು. ನನ್ನನ್ನು ರಕ್ಷಿಸದೆ ನನ್ನ ಗಂಡನಿಗೆ ಅವರು ಸಾಥ್ ನೀಡಿದರು' ಎಂದು ಮಹಿಳೆ ಆರೋಪಿಸಿದ್ದಾಳೆ.

ಇನ್ನು ಘಟನೆಯ ಕುರಿತು ಸಂತ್ರಸ್ತ ಮಹಿಳೆ ತನ್ನ ಪೋಷಕರಿಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದಾಳೆ. ಯಾವಾಗ ಪೋಷಕರು ಮನೆಗೆ ಬಂದರೋ ಅವರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ. ಇದಲ್ಲದೆ ತನ್ನ ಪತಿ ವರದಕ್ಷಿಣೆಗೆ ಒತ್ತಾಯಿಸಿ ಥಳಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: Snake in Air India: ಏರ್ ಇಂಡಿಯಾ ವಿಮಾನದಲ್ಲಿ ಹಾವು ಪತ್ತೆ! ತನಿಖೆಗೆ ಆದೇಶ

ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಮಹಿಳೆಯ ದೂರಿನ ಮೇರೆಗೆ ಆರೋಪಿ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆ ತವರು ಮನೆಗೆ ಹೋಗಿದ್ದಾಳೆಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News