ಹೊಸಕೋಟೆ ಹಾಗೂ ತಿರುಮಲ ಶೆಟ್ಟಹಳ್ಳಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 650 ಕ್ಕೂ ಅಧಿಕ ಕೆ.ಜಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ರಕ್ತಚಂದನ ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿ: ಭಾರತ vs ಐರ್ಲ್ಯಾಂಡ್: ಬೂಮ್ರಾಗಿಂತ ಡೇಂಜರಸ್ ಆಟಗಾರನನ್ನು ನಿರ್ಲ್ಯಕ್ಷಿಸಿದ ಆಯ್ಕೆ ಸಮಿತಿ!
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ನೀಲಗಿರಿ ತೋಪಿನಲ್ಲಿ ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. ನೀಲಗಿರಿ ಮರಗಳ ನಡುವೆ ಭೂಮಿಯಲ್ಲಿ ರಕ್ತಚಂದನ ಬಚ್ಚಿಟ್ಟು ಖದೀಮರು ಸ್ಮಗ್ಲಿಂಗ್ ಮಾಡಲು ಯತ್ನಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ನೇತೃತ್ವದ ತಂಡ, ಕೆಜಿಗಟ್ಟಲೆ ರಕ್ತಚಂದನವನ್ನು ವಶಕ್ಕೆ ಪಡೆದಿದೆ.
ಇದನ್ನು ಓದಿ: Weight Loss:ಕೇವಲ ಈ ಒಂದು ಹಣ್ಣನ್ನು ಸೇವಿಸಿ ತೂಕ ಇಳಿಕೆ ಮಾಡಿಕೊಳ್ಳಿ
ನೆರೆಯ ಆಂಧ್ರ ಪ್ರದೇಶದ ನಲ್ಲಮಲ್ಲ ಅರಣ್ಯ ಪ್ರದೇಶದಿಂದ ರಕ್ತ ಚಂದನ ತಂದಿದ್ದು, ಪೊಲೀಸರು ದಾಳಿ ನಡೆಸುತ್ತಿದ್ದಂತೆ ಖದೀಮರು ಎಸ್ಕೆಪ್ ಆಗಿದ್ದಾರೆ. ರಕ್ತಚಂದನ ಬಚ್ಚಿಟ್ಟಿದ್ದ ಅಯಾಜ್ ಖಾನ್, ಜಮೀರ್ ಮತ್ತು ಇರ್ಫಾನ್ ಎಸ್ಕೆಪ್ ಆಗಿದ್ದು, ಈ ಮೂವರ ವಿರುದ್ಧ ತಿರುಮಲ ಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಹಾಗೇ ಹೊಸಕೋಟೆ ಪೊಲೀಸರಿಂದ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ನಡೆದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.