ನವದೆಹಲಿ: ಗಾಜಿಯಾಬಾದ್ನ ಕೌಶಂಬಿಯಲ್ಲಿರುವ ಪ್ರಸಿದ್ಧ ರಾಡಿಸನ್ ಬ್ಲೂ ಹೋಟೆಲ್ನ ಮಾಲೀಕ ಅಮಿತ್ ಜೈನ್ ಶವವಾಗಿ ಪತ್ತೆಯಾಗಿದ್ದಾರೆ. ದೆಹಲಿಯ ಕಾಮನ್ ವೆಲ್ತ್(CWG) ವಿಲೇಜ್ ಪ್ರದೇಶದಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಅಮಿತ್ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಮಾಂಡವಲಿ ಪೊಲೀಸ್ ಠಾಣೆಯ ಪೊಲೀಸ್ ನಿಯಂತ್ರಣ ಕೊಠಡಿಗೆ ಈ ಬಗ್ಗೆ ಶನಿವಾರ ಕರೆ ಬಂದಿತ್ತು. ಕಾಮನ್ವೆಲ್ತ್ ಗೇಮ್ಸ್ ಗ್ರಾಮದಲ್ಲಿರುವ ಫ್ಲಾಟ್ನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡಿದ್ದಾರೆಂದು ಕರೆ ಮಾಡಿದವವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತದೇಹ ಪತ್ತೆಯಾದ ಮನೆಯಲ್ಲಿ ಯಾವುದೇ ರೀತಿಯ ಡೆತ್ ನೋಟ್ ಪತ್ತೆಯಾಗಿಲ್ಲವೆಂದು ತಿಳಿದುಬಂದಿದೆ.
ಇದನ್ನೂ ಓದಿ: Shraddha Murder Case: ನಾರ್ಕೋ ಪರೀಕ್ಷೆಯಲ್ಲಿ ಆರೋಪಿ ಅಫ್ತಾಬ್ ಗೆ ಕೇಳಲಿರುವ 50 ಪ್ರಶ್ನೆಗಳ ಪಟ್ಟಿ ಹೀಗಿದೆ
ಸಾವನ್ನಪ್ಪಿರುವ ಅಮಿತ್ ಜೈನ್ ಕೌಶಂಬಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ಮಾಲೀಕ ಅಂತಾ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಿತ್ ಜೈನ್ ಅವರು ಶನಿವಾರ ನೋಯ್ಡಾದಲ್ಲಿರುವ ತಮ್ಮ ಹೊಸ ನಿವಾಸದಲ್ಲಿ ಉಪಾಹಾರ ಸೇವಿಸಿದ ನಂತರ ಕಾಮನ್ ವೆಲ್ತ್ ವಿಲೇಜ್ಗೆ ಬಂದಿದ್ದರಂತೆ.
ತಮ್ಮ ಕುಟುಂಬದೊಂದಿಗೆ ಅಮಿತ್ ಜೈನ್ ನೋಯ್ಡಾದಲ್ಲಿರುವ ಹೊಸ ಮನೆಗೆ ಶೀಘ್ರದಲ್ಲೇ ಶಿಫ್ಟ್ ಆಗುವ ಯೋಚನೆಯಲ್ಲಿದ್ದರಂತೆ. ಕಾರಿನಲ್ಲಿ ತೆರಳುವ ವೇಳೆ ಮಾರ್ಗಮಧ್ಯೆ ಅಮಿತ್ ಜೈನ್ ತಮ್ಮ ಸಹೋದರ ಕರಣ್ ಅವರನ್ನು ಘಾಜಿಯಾಬಾದ್ನಲ್ಲಿರುವ ತಮ್ಮ ಕಚೇರಿಗೆ ಬಿಟ್ಟುಹೋಗಿದ್ದರು. ಬಳಿಕ ಒಬ್ಬರೇ ಕಾಮನ್ವೇಲ್ತ್ ವಿಲೇಜ್ಗೆ ತೆರಳಿದ್ದ ಅಮಿತ್ ಶವವಾಗಿ ಪತ್ತೆಯಾಗಿದ್ದಾರೆ. ಕೆಲವು ವಸ್ತುಗಳನ್ನು ತೆಗೆದುಕೊಳ್ಳಲು ನಿವಾಸಕ್ಕೆ ಬಂದಾಗ ಅಮಿತ್ ಜೈನ್ ಅವರ ಪುತ್ರ ಮತ್ತು ಡ್ರೈವರ್ ನೇಣು ಬಿಗಿದುಕೊಂಡಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅವರನ್ನು ಮ್ಯಾಕ್ಸ್ ಪಟ್ಪರ್ಗಂಜ್ಗೆ ಕರೆದೊಯ್ಯಲಾಯಿತು, ಆದರೆ ಉದ್ಯಮಿ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Ration Cardನಲ್ಲಿ ʻದತ್ತಾʼ ಬದಲು ʻಕುತ್ತಾʼ.! ಸಿಟ್ಟಿಗೆದ್ದ ವ್ಯಕ್ತಿ, ಅಧಿಕಾರಿ ಎದುರು ಗಲಾಟೆ
ಅಮಿತ್ ಜೈನ್ ವಿರುದ್ಧ ಯಾವುದೇ ರೀತಿಯ ಅವ್ಯವಹಾರದ ಆರೋಪಗಳು ಇನ್ನೂ ಕೇಳಿಬಂದಿಲ್ಲ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ತನಿಖೆ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.