OTPಯೂ ಇಲ್ಲ, ಹಣ ವರ್ಗಾವಣೆ ಸಂದೇಶವೂ ಬಂದಿಲ್ಲ ಆದರೂ ಬ್ಯಾಂಕ್‌ ಖಾತೆಯಲ್ಲಿದ್ದ ₹64 ಸಾವಿರ ಹಣ ಮಾಯ

Money Missing From Account: ಇದು ಮಾಹಿತಿ ತಂತ್ರಜ್ಞಾನ ಯುಗ ಕೈ ಬೆರಳಲ್ಲೇ ಜಗತ್ ನೋಡಬಹುದು. ಇದರ ಜೊತೆಗೆ ಅನೇಕ ಸಮಸ್ಯೆಗಳನ್ನ ಎದುರುಸುವಂತಾಗಿದೆ. ಇದಕ್ಕೆ ಕನ್ನಡಿ ಹಿಡಿದಂತಿದೆ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದಿರುವ ಘಟನೆ. 

Written by - Yashaswini V | Last Updated : Nov 29, 2023, 08:38 AM IST
  • ಒಟಿಪಿ ಬಂದಿಲ್ಲ, ಹಣ ವರ್ಗಾವಣೆ ಸಂದೇಶವೂ ಬಂದಿಲ್ಲ
  • ಆದ್ರೂ ಖಾತೆಯಲ್ಲಿದ್ದ 64 ಸಾವಿರ ರೂಪಾಯಿ ಮಂಗಮಾಯ
  • ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದ ಘಟನೆ
OTPಯೂ ಇಲ್ಲ, ಹಣ ವರ್ಗಾವಣೆ ಸಂದೇಶವೂ ಬಂದಿಲ್ಲ ಆದರೂ ಬ್ಯಾಂಕ್‌ ಖಾತೆಯಲ್ಲಿದ್ದ ₹64 ಸಾವಿರ ಹಣ ಮಾಯ title=

Money Missing From Account: ಮೊಬೈಲ್ ಫೋನ್‌ಗೆ ಯಾವುದೇ ಓಟಿಪಿಯೂ ಬಂದಿಲ್ಲ, ಹಣ ವರ್ಗಾವಣೆಯ ಸಂದೇಶವೂ ಬಂದಿಲ್ಲ ಆದರೂ ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ ₹64 ಸಾವಿರ   ಹಣ ಮಂಗಮಾಯವಾಗಿರುವ ಘಟನೆ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ  ಬೆಳಕಿಗೆ ಬಂದಿದೆ. 

ತಾಲ್ಲೂಕಿನ ಯರಿನಾರಾಯಣಪುರ ಗ್ರಾಮದ ಮಹಿಳೆ ಮಲ್ಲವ್ವ ಅಶೋಕ ಮುಳ್ಳಹಳ್ಳಿ ಅವರ ಯರಗುಪ್ಪಿ ಗ್ರಾಮದ ಕೆ.ವಿ.ಜಿ ಬ್ಯಾಂಕಿನ ಖಾತೆಯಲ್ಲಿದ್ದ ₹64 ಸಾವಿರ ಹಣ ಅವರ ಗಮನಕ್ಕೆ ಬರದೆ ಆನ್‍ಲೈನ್‍ನಲ್ಲಿ ವರ್ಗಾವಣೆಯಾಗಿದ್ದು, ಸದ್ಯ ಈ ಕುರಿತು ಕುಂದಗೋಳದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಏನಿದು ಘಟನೆ? 
ಸಂತ್ರಸ್ತ ಮಹಿಳೆಯ ಖಾತೆಯಿಂದ ಅ.24 ರಿಂದ ನ. 3ರವರೆಗೆ ಒಟ್ಟು ಏಳು ಬಾರಿ ಹಣ ವರ್ಗಾವಣೆಯಾಗಿದೆ. ಹಣ ವರ್ಗಾವಣೆ ಆಗಿರುವ ಯಾವುದೇ ಸಂದೇಶ ಬ್ಯಾಂಕಿನಿಂದ ಬಂದಿಲ್ಲ. ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿರುವ ಸಂದೇಶ ಮಾತ್ರ ಬಂದಿದೆ. ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಬ್ಯಾಂಕಿಗೆ ಹೋದಾಗಲೇ ಈ ವಿಷಯ ಬೆಳಕಿಗೆ ಬಂದಿದೆ. ಇವರಿಗೆ ಜಾಗ ಮಾರಿದ ಬಸವರಾಜ ಹೊರಟ್ಟಿ ಎಂಬುವವರ ಖಾತೆಯಿಂದಲೂ ₹1,500 ಹಣ ವರ್ಗಾವಣೆ ಆಗಿದ್ದು ಇವರಿಗೂ ಯಾವುದೇ ತರಹದ ಮೇಸೆಜ್ ಬಂದಿಲ್ಲ. ಇಬ್ಬರ ಖಾತೆಯಿಂದ ವರ್ಗಾವಣೆ ಆಗಿದೆ.

ಇದನ್ನೂ ಓದಿ- ಹಸುಗೂಸನ್ನು ಮಾರಲು ಬಂದಿದ್ದ ಕಿರಾತಕರು.. ಸಿಸಿಬಿ ಕೈಗೆ ಲಾಕ್ ಆದ ತಮಿಳುನಾಡು ಗ್ಯಾಂಗ್.!

ಮಲ್ಲವ್ವ ಹಾಗೂ ಅವರ ಪತಿ ಅಶೋಕ ಬ್ಯಾಂಕ್‍ಗೆ ಹೋಗಿ ವಿಚಾರಿಸಿದಾಗ, ‘ಈ ವಿಷಯ ಎಲ್ಲಿಯೂ ಹೇಳಬೇಡಿ, ನಿಮ್ಮ ಹಣ ನಿಮ್ಮ ಖಾತೆಗೆ ಬರುತ್ತದೆ’ ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರಂತೆ. ಕಷ್ಟಪಟ್ಟು ದುಡಿದ ಹಣ ಕಳೆದುಕೊಂಡು ಬದುಕು ದಿಕ್ಕು ತಪ್ಪಿದಂತಾಗಿದೆ’ ಎಂದು ಮಲ್ಲವ್ವ ಕಡೆಯವರು ಬೇಸರ ವ್ಯಕ್ತಪಡಿಸಿದ್ದಾರೆ. 

ಮಲ್ಲವ್ವ ಅವರು ಹೇಳುವ ಪ್ರಕಾರ, ಭೂಮಿ ಖರೀದಿಗೆ ಸಂಬಂಧಿಸಿದಂತೆ ಕುಂದಗೋಳದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹೆಬ್ಬೆರಳು ಗುರುತು ನೀಡಿದ ಮೇಲೆ ಮತ್ತೆಲ್ಲೂ ಹೆಬ್ಬೆರಳ ಗುರುತು ನೀಡಿಲ್ಲ. ಯಾವುದೇ ಸಂಶಯಸ್ಪಾದ ಕರೆಗಳೂ ಬಂದಿಲ್ಲ. ಒಟಿಪಿ ಕೇಳಿ ಕರೆಗಳೂ ಸಹಿತ ಬಂದಿಲ್ಲ ಆದರೂ ನನ್ನ ಖಾತೆಯಲ್ಲಿದ್ದ ಹಣ ನನಗೇ ತಿಳಿಯದೆ ಮಂಗಮಾಯವಾಗಿದೆ.

ಇದನ್ನೂ ಓದಿ- ಬರ್ತ್​ಡೇ ಆಚರಿಸಲು ದುಬೈಗೆ ಕರೆದುಕೊಂಡು ಹೋಗಲಿಲ್ಲವೆಂದು ಗಂಡನನ್ನೇ ಕೊಂದ ಪತ್ನಿ!

ಸುಣ್ಣದ ಕಲ್ಲಿನ ವ್ಯಾಪಾರ, ಕೂಲಿ ಮಾಡಿ ಸಂಗ್ರಹಿಸಿದ ಹಣ ಈಗ ನಮ್ಮ ಖಾತೆಯಲ್ಲಿ ಇಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ ಎಂದು ಮಲ್ಲವ್ವ ತಮ್ಮ ಅಸಹಾಯಕತೆ ವ್ಯಕ್ತಪಡಿಸುತಿದ್ದು, ಈ ರೀತಿ ಯಾರಿಗೂ ಅನ್ಯಾಯ ಆಗಬಾರದು ಎಂದಿದ್ದಾರೆ. 

ಸದ್ಯ ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಕುಂದಗೋಳ ಪೊಲೀಸರು ಸೂಕ್ತ ತನಿಖೆ ನಡೆಸಿ ಈ ದಂಪತಿಗಳಿಗೆ ನ್ಯಾಯ ಒದಗಿಸಿಕೊಡಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News