Nitin Gadkari ಗೆ ಜೀವ ಬೆದರಿಕೆಯ ಕರೆ, ತನಿಖೆ ಕೈಗೊಂಡ ಪೊಲೀಸರು

Nitin Gadkari News: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿಗೆ ಜೀವ ಬೆದರಿಕೆಯೊಡ್ಡಲಾಗಿದೆ. ಗಡ್ಕರಿ ಅವರ ಜನಸಂಪರ್ಕ ಕಚೇರಿಗೆ ಮೂರು ಬಾರಿ ಕರೆ ಮಾಡಿ ಈ ಧಮ್ಕಿ ಹಾಕಲಾಗಿದೆ ಎನ್ನಲಾಗಿದೆ. ಪ್ರಸ್ತುತ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.  

Written by - Nitin Tabib | Last Updated : Jan 14, 2023, 02:57 PM IST
  • ನಿತಿನ್ ಗಡ್ಕರಿ ಅವರಿಗೆ ಮೂರು ಬಾರಿ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದೆ.
  • ಮೊದಲ ಬಾರಿಗೆ 11:29 ಕ್ಕೆ ಫೋನ್ ರಿಂಗಾಗಿದೆ,
  • ಎರಡನೇ ಬಾರಿ 11:35 ಕ್ಕೆ ಮತ್ತು ಮೂರನೇ ಬಾರಿಗೆ ಇಂದು ಮಧ್ಯಾಹ್ನ 12:32 ಕ್ಕೆ.
Nitin Gadkari ಗೆ ಜೀವ ಬೆದರಿಕೆಯ ಕರೆ, ತನಿಖೆ ಕೈಗೊಂಡ ಪೊಲೀಸರು title=
Nitin Gadkari

Nitin Gadkari Threat Call: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಕರೆ ಮಾಡುವ ಮೂಲಕ ಈ ಬೆದರಿಕೆಯನ್ನು ಓಡ್ದಲಾಗುತ್ತಿದೆ. ಮಾಹಿತಿ ಪ್ರಕಾರ ಇಂದು ಬೆಳಗ್ಗೆಯಿಂದ ನಿತಿನ್ ಗಡ್ಕರಿ ಅವರಿಗೆ 3 ಬಾರಿ ಕೊಲೆ ಬೆದರಿಕೆ ಕರೆ ಬಂದಿವೆ ಎನ್ನಲಾಗಿದೆ. ವಿಷಯ ತಿಳಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತಗಾಗಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ನಾಗ್ಪುರದ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಈ ಬೆದರಿಕೆಯ ಕರಗಳು ಬಂದಿವೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸಾರ್ವಜನಿಕ ಸಂಪರ್ಕ ಕಚೇರಿಗೂ ತಲುಪಿದ್ದಾರೆ.

ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ
ಮೋದಿ ಸರ್ಕಾರದಲ್ಲಿ ನಿತಿನ್ ಗಡ್ಕರಿ ಅತ್ಯುತ್ತಮ ಕೆಲಸ ಮಾಡುವ ಮಂತ್ರಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ನಿತಿನ್ ಗಡ್ಕರಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಿತಿನ್ ಗಡ್ಕರಿ ಅವರು ಟ್ವಿಟರ್‌ನಲ್ಲಿ 12 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಬಂದ ನಂತರ ಭಾರಿ ಸಂಚಲನ ಉಂಟಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಆರೋಪಿಗಳ ಶೋಧಕಾರ್ಯದಲ್ಲಿ ತೊಡಗಿದ ಪೊಲೀಸರು
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರವಾಣಿ ಮೂಲಕ ಈ ಜೀವ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದ ಸುದ್ದಿ ತಿಳಿದ ನಂತರ, ತಮ್ಮ ತಂಡವು ನಾಗ್ಪುರದ ಅವರ ಕಚೇರಿಗೆ ತಲುಪಿ ತನಿಖೆಯನ್ನು ಪ್ರಾರಂಭಿಸಿದೆ. ಕರೆ ಮಾಡಿದವರ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಆದಷ್ಟು ಬೇಗ ಸಿಕ್ಕಿ ಬೀಳುತ್ತಾರೆ ಮತ್ತು ಆದಷ್ಟು ಬೇಗ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Car ಖರೀದಿಯ ಮೇಲೆ ಈ ರೀತಿ ಶೇ.15ರಷ್ಟು ರಿಯಾಯಿತಿ ಪಡೆಯಿರಿ, ಟ್ರಿಕ್ ಹೇಳಿಕೊಟ್ಟ ಗಡ್ಕರಿ

3 ಬಾರಿ ಬೆದರಿಕೆ ಕರೆ ಬಂದಿದೆ
ನಿತಿನ್ ಗಡ್ಕರಿ ಅವರಿಗೆ ಮೂರು ಬಾರಿ ಬೆದರಿಕೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ 11:29 ಕ್ಕೆ ಫೋನ್ ರಿಂಗಾಗಿದೆ, ಎರಡನೇ ಬಾರಿ 11:35 ಕ್ಕೆ ಮತ್ತು ಮೂರನೇ ಬಾರಿಗೆ ಇಂದು ಮಧ್ಯಾಹ್ನ 12:32 ಕ್ಕೆ.

ಇದನ್ನೂ ಓದಿ-Indian Railways: ಜೋತಿರ್ಲಿಂಗ ದರ್ಶನಕ್ಕೆ ಅವಕಾಶ ನೀಡುತ್ತಿದೆ ಭಾರತೀಯ ರೇಲ್ವೆ, ಊಟ-ವಸತಿ ಉಚಿತ, ಇಲ್ಲಿದೆ ವಿವರ

ಸದ್ಯ ಪೊಲೀಸರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ನಿತಿನ್ ಗಡ್ಕರಿ ಅವರ ಪಿಆರ್‌ ಕಚೇರಿಗೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಸದ್ಯ ನಾಗ್ಪುರದಲ್ಲಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News