ನನಗೆ ಈ ಶಿಕ್ಷೆ ಕಡಿಮೆ ಇನ್ನೂ ಶಿಕ್ಷೆ ಆಗ್ಬೇಕು: ಯುವತಿ ಒಪ್ಪಿದ್ರೆ ಮದುವೆ ಆಗ್ತಾನಂತೆ ಆ್ಯಸಿಡ್ ನಾಗ

ಈ ಹಿಂದೆ ನಾನು ಯುವತಿ ಅಕ್ಕಪಕ್ಕದ ಮನೆಯಲ್ಲೇ ಇದ್ವಿ. ಇಬ್ಬರ ಜಾತಿ ಬೇರೆ ಬೇರೆ ಇತ್ತು.18 ವರ್ಷ ಇದ್ದಾಗ ಇಬ್ಬರು ಚೆನ್ನಾಗಿ ಮಾತಾಡ್ಕೊಂಡು ಇದ್ವಿ. ಆಕೆ ನನ್ನ ಜೊತೆ ಚೆನ್ನಾಗಿ ಮಾತಾಡೋದನ್ನ ನೋಡಿ ನನ್ನ ಮೇಲೆ ಲವ್ ಇದೆ ಅನ್ಕೊಂಡೆ. ಆದ್ರೆ ಅವಳಿಗೆ ನನ್ನ ಮೇಲೆ ಲವ್ ಇರಲಿಲ್ಲ ಅನ್ನೋದು ಆಮೇಲೆ ಗೊತ್ತಾಯ್ತು- ಆ್ಯಸಿಡ್ ನಾಗ 

Written by - VISHWANATH HARIHARA | Edited by - Yashaswini V | Last Updated : Jun 4, 2022, 02:23 PM IST
  • ನಾನು ದೊಡ್ಡ ಪ್ರಮಾದ ಮಾಡಿದ್ದೇನೆ, ಆ ಹುಡುಗಿಗೆ ಆ್ಯಸಿಡ್ ಹಾಕಬೇಕು ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ
  • ನನಗೆ ಈ ಶಿಕ್ಷೆ ಕಡಿಮೆ ಇನ್ನೂ ಶಿಕ್ಷೆ ಆಗ್ಬೇಕು
  • ಪೊಲೀಸ್ರ ಮುಂದೆ ಆ್ಯಸಿಡ್ ನಾಗನ ಪಶ್ಚಾತ್ತಾಪದ ಮಾತು
ನನಗೆ ಈ ಶಿಕ್ಷೆ ಕಡಿಮೆ ಇನ್ನೂ ಶಿಕ್ಷೆ ಆಗ್ಬೇಕು: ಯುವತಿ ಒಪ್ಪಿದ್ರೆ ಮದುವೆ ಆಗ್ತಾನಂತೆ ಆ್ಯಸಿಡ್ ನಾಗ  title=
Acid Naga

ಬೆಂಗಳೂರು: ಕೊನೆಗೂ ಪೊಲೀಸ್ರ ಮುಂದೆ ಆ್ಯಸಿಡ್ ನಾಗ ಪಶ್ಚಾತ್ತಾಪದ ಮಾತುಗಳನ್ನ ಆಡಿದ್ದಾನೆ‌. ಕಾಮಾಕ್ಷಿಪಾಳ್ಯ ಪೋಲೀಸ್ರು ಆ್ಯಸಿಡ್ ನಾಗೇಶನ ಸ್ಟೇಟ್ ಮೆಂಟ್ ದಾಖಲಿಸಿದ್ದು, ನಾನು ದೊಡ್ಡ ಪ್ರಮಾದ ಎಸಗಿದ್ದೇನೆ. ಆ ಹುಡುಗಿಗೆ ಆ್ಯಸಿಡ್ ಹಾಕಬೇಕು ಅಂತ ಕನಸು ಮನಸಲ್ಲೂ ಯೋಚಿಸಿರಲಿಲ್ಲ. ನಾನು ಇಂತಾ ಅನ್ಯಾಯ ಮಾಡಬಾರದಿತ್ತು.  ನಾನು ಮಾಡಿರೋದು ತಪ್ಪು ಅಂತ ನಾಗ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾನೆ ಎಂದು ತಿಳಿದುಬಂದಿದೆ. 

ಆಕೆ ಮೇಲೆ ನಾನು ಆ್ಯಸಿಡ್ ಹಾಕಬಾರದಿತ್ತು:
ತಾನು ಪ್ರೀತಿಸಿದ್ದ ಹುಡುಗಿಗೆ ಆ್ಯಸಿಡ್ ಹಾಕಿರುವ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಆ್ಯಸಿಡ್ ನಾಗ, ನಾನು ಆ ಹುಡುಗಿ ಮೇಲೆ ಆ್ಯಸಿಡ್ ಹಾಕಬಾರದಿತ್ತು. ಆದರೆ ನನಗೆ ಸಿಗದ ಹುಡುಗಿ ಬೇರೆಯವರಿಗೆ ಸಿಗಬಾರದು ಅನ್ನೋ ಹೊಟ್ಟೆಕಿಚ್ಚಿನಲ್ಲಿ ಹಾಕಿಬಿಟ್ಟೆ. ಮರುಕ್ಷಣ ನನ್ನ ಮನಪರಿವರ್ತನೆ ಆಯ್ತು, ಹೆದರಿಕೆ ಆಯ್ತು. ನಾನು ಮಾಡಿದ ತಪ್ಪಿಗೆ ಸದ್ಯ ನನಗೆ ಸಿಕ್ಕಿರೋ  ಕಡಿಮೆ ಕಮ್ಮಿ. ನಮ್ಮ ಅಣ್ಣ ಮನೆಯವರು ಬೈದಿದ್ದಕ್ಕೆ ಹಾಗೇ ಮಾಡಿಬಿಟ್ಟೆ. ಅದು ಬಿಟ್ಟು ಬೇರೆನೂ ಕಾರಣ ಇಲ್ಲ ಎಂದಿದ್ದಾನೆ.

ಇದನ್ನೂ ಓದಿ- ಲವ್ ಮಾಡಲ್ಲ ಎಂದ ಯುವತಿ ಮೇಲೆ ಆಸಿಡ್ ಎರಚಿದ ಪಾಗಲ್ ಪ್ರೇಮಿ

ನಾನು ನಾರ್ಮಲ್ ಆಗಬೇಕು. ತಪ್ಪು ತಿದ್ದುಕೊಳ್ಳಬೇಕು ಅಂತ ದೇವಸ್ಥಾನಕ್ಕೆ ಹೋಗಿದ್ದೆ ಅಂತ ಬಾಯ್ಬಿಟ್ಟಿರುವ ಆ್ಯಸಿಡ್ ನಾಗ, ಇನ್ನು ಈ ಘಟನೆ ಆದ್ಮೇಲೆ ಮೊದಲು ಸಾಯೋಣ ಅನ್ಕೊಂಡೆ, ಆದ್ರೆ ಭಯ ಆಯ್ತು‌, ಮನಸ್ಸು ಬರಲಿಲ್ಲ ಎಂದು ಹೇಳಿದ್ದಾನೆ.

ಈ ಹಿಂದೆ ನಾನು ಯುವತಿ ಅಕ್ಕಪಕ್ಕದ ಮನೆಯಲ್ಲೇ ಇದ್ವಿ. ಇಬ್ಬರ ಜಾತಿ ಬೇರೆ ಬೇರೆ ಇತ್ತು.18 ವರ್ಷ ಇದ್ದಾಗ ಇಬ್ಬರು ಚೆನ್ನಾಗಿ ಮಾತಾಡ್ಕೊಂಡು ಇದ್ವಿ. ಆಕೆ ನನ್ನ ಜೊತೆ ಚೆನ್ನಾಗಿ ಮಾತಾಡೋದನ್ನ ನೋಡಿ ನನ್ನ ಮೇಲೆ ಲವ್ ಇದೆ ಅನ್ಕೊಂಡೆ. ಆದ್ರೆ ಅವಳಿಗೆ ನನ್ನ ಮೇಲೆ ಲವ್ ಇರಲಿಲ್ಲ ಅನ್ನೋದು ಆಮೇಲೆ ಗೊತ್ತಾಯ್ತು. ನಂತರ ನಮ್ಮ ಮನೆಯವರು ಕೂಡ ಸ್ವಲ್ಪ ದೂರ ಮಾಡೋಕೆ ನೋಡಿದ್ರು. ಅವಳು ಓದೋ ಕಾಲೇಜಿನಲ್ಲೆ ಹುಡುಗರನ್ನ ಇಟ್ಟಿದ್ದೆ. ಆಕೆ ಹಿಂದೆ ಯಾರಾದ್ರು ಬಿದ್ರೆ ವಾರ್ನ್ ಮಾಡ್ತಿದ್ದೆ ಎಂದು ಹಿಂದಿನ ಕಥೆಯನ್ನೂ ವಿವರಿಸಿದ್ದಾನೆ.

ಇದನ್ನೂ ಓದಿ- ಆಸಿಡ್‌ ಸಂತ್ರಸ್ತೆಯ ಭೇಟಿ ಮಾಡಿದ ಸಚಿವ ಸುಧಾಕರ್‌ ಹೇಳಿದ್ದು ಹೀಗೆ...

ಇನ್ನೂ ಯಾವ ಕಾರಣಕ್ಕೂ ಇಂತಹ ತಪ್ಪು ಮಾಡಲ್ಲ. ಶಿಕ್ಷೆ ಅನುಭವಿಸಿ ಒಳ್ಳೆಯವನಾಗಿರ್ತಿನಿ. ಸಂತ್ರಸ್ಥೆ ಒಪ್ಪಿದ್ರೆ ಮದುವೆನೂ ಆಗ್ತೀನಿ ಅಂತ ನಾಗ ಪೊಲೀಸ್ರ ಮುಂದೆ ಹೇಳಿಕೊಂಡಿದ್ದಾನೆ. ಇನ್ನು ಆ್ಯಸಿಡ್ ದಾಳಿ ಕುರಿತು ನಾಗೇಶನ ವಿಚಾರಣೆ ನಡೆಸಿರೋ ಪೊಲೀಸರು ಇಂದು ಸ್ಥಳ ಮಹಜರು ಸಹ ಕೂಡ ನಡೆಸಿದ್ದಾರೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News