ಮೊಬೈಲ್, ಬೈಕ್ ಕಳ್ಳತನ: ಖತರ್ನಾಕ್ ಕಳ್ಳರ ಬಂಧನ

ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಜೆಸಿ ನಗರ ಪೊಲೀಸರು ಬಂಧಿಸಿ ಸುಮಾರು 5.95 ಲಕ್ಷ ವೌಲ್ಯದ ಬೈಕ್ ಗಳನ್ನು‌ ವಶಪಡಿಸಿಕೊಳ್ಳಲಾಗಿದೆ.

Written by - VISHWANATH HARIHARA | Edited by - Chetana Devarmani | Last Updated : Jun 11, 2022, 05:08 PM IST
  • ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೊಬೈಲ್ ಕಳ್ಳತನ
  • ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ
ಮೊಬೈಲ್, ಬೈಕ್ ಕಳ್ಳತನ: ಖತರ್ನಾಕ್ ಕಳ್ಳರ ಬಂಧನ   title=
ಕಳ್ಳತನ

ಬೆಂಗಳೂರು: ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಜೆಸಿ ನಗರ ಪೊಲೀಸರು ಬಂಧಿಸಿ ಸುಮಾರು 5.95 ಲಕ್ಷ ವೌಲ್ಯದ ಬೈಕ್ ಗಳನ್ನು‌ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ :  Health Tips: ದಾಳಿಂಬೆ ಸಿಪ್ಪೆಯಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ

ಸಯ್ಯದ್ ನಜೀಮ್, ಸಯ್ಯದ್ ಅಲಿ ಬಂಧಿತ ಆರೋಪಿಗಳು. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಯುವಿಹಾರಕ್ಕೆ ಬರುವ ಒಂಟಿ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಮೊಬೈಲ್ ಸುಲಿಗೆ ಹಾಗೂ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಹ್ಯಾಂಡ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. 

ಮೇ 23ರಂದು ಇದೇ ರೀತಿ ಕಳವು ಮಾಡಿದ್ದು, ದೂರು ಬಂದ ಮೇರೆಗೆ ಪೊಲೀಸರು ಕಾರ್ಯಾಚರಣೆ ‌ನಡೆಸಿ ಆರೋಪಿಗಳನ್ನು ಬಂಧಿಸಿ 5.95 ಲಕ್ಷ ಬೆಲೆಯ 6 ದ್ವಿಚಕ್ರವಾಹನ, ವಿವಿಧ ಕಂಪನಿಗಳ 5 ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News