RTO : ಕಾರುಗಳಿಗೆ ಲೈಫ್ ಟ್ಯಾಕ್ಸ್ ಕಟ್ಟಿದ್ರು ನೋಟಿಸ್ ಬರಬಹುದು ಎಚ್ಚರ!?

ಟ್ಯಾಕ್ಸ್  ಹೆಸ್ರಲ್ಲಿ ಹೆಚ್ಚುವರಿ ಹಣ ಪಡೆದು ನಕಲಿ ಬಿಲ್‌ ನೀಡುತ್ತಿದ್ದ ಆರ್ ಟಿಓ ಅಧಿಕಾರಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.  

Written by - VISHWANATH HARIHARA | Last Updated : Aug 13, 2022, 04:38 PM IST
  • ರೋಡ್ ಟ್ಯಾಕ್ಸ್ ಕಟ್ಟಿರುವ ವಾಹನ ಮಾಲೀಕರು ಈ ಸ್ಟೋರಿ ಒದಲೇಬೇಕು
  • ಹೈ ಎಂಡ್ ಕಾರ್ ತಗೊಂಡು ಲಕ್ಷ ಲಕ್ಷ ಟ್ಯಾಕ್ಸ್ ಪೇ
  • ಟ್ಯಾಕ್ಸ್ ಹೆಸ್ರಲ್ಲಿ ಹೆಚ್ಚುವರಿ ಹಣ ಪಡೆದು ನಕಲಿ ಬಿಲ್‌ ನೀಡುತ್ತಿದ್ದ ಆರ್ ಟಿಓ ಅಧಿಕಾರಿಗಳು
RTO : ಕಾರುಗಳಿಗೆ ಲೈಫ್ ಟ್ಯಾಕ್ಸ್ ಕಟ್ಟಿದ್ರು ನೋಟಿಸ್ ಬರಬಹುದು ಎಚ್ಚರ!? title=

ಬೆಂಗಳೂರು : ಲೈಫ್ ರೋಡ್ ಟ್ಯಾಕ್ಸ್ ಕಟ್ಟಿರುವ ವಾಹನ ಮಾಲೀಕರು ಈ ಸ್ಟೋರಿ ಒದಲೇಬೇಕು. ಯಾಕಂದ್ರೆ ಹೈ ಎಂಡ್ ಕಾರ್ ತಗೊಂಡು ಲಕ್ಷ ಲಕ್ಷ ಟ್ಯಾಕ್ಸ್ ಪೇ ಮಾಡಿದರೂ ನಿಮ್ಮ ಮನೆಗೆ ನೋಟೀಸ್ ಬರಬಹುದು. ಇದಕ್ಕೆ ಕಾರಣ ನೀವು ಕಟ್ಟಿರುವ ಟ್ಯಾಕ್ಸ್  ಸರ್ಕಾರದ ಬೊಕ್ಕಸಕ್ಕೆ ಸೇರದೇ ವಂಚಕರ ಜೇಬು ಸೇರಿರುತ್ತೆ‌. ಟ್ಯಾಕ್ಸ್  ಹೆಸ್ರಲ್ಲಿ ಹೆಚ್ಚುವರಿ ಹಣ ಪಡೆದು ನಕಲಿ ಬಿಲ್‌ ನೀಡುತ್ತಿದ್ದ ಆರ್ ಟಿಓ ಅಧಿಕಾರಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.  

ಕೋರಮಂಗಲದಲ್ಲಿ ದಾಖಲಾಗಿದ್ದ ಆರ್‌ಟಿಓ ಅಧಿಕಾರಿಗಳ ಮೇಲಿನ‌ ಪ್ರಕರಣ ಬಗೆದಷ್ಟು ಹೊರ ಬರುತ್ತಿದೆ. ಆರ್ ಟಿಓ ನಕಲಿ ರಸೀದಿ ನೀಡಿ ದೊಡ್ಡ ಹಗರಣ ನಡೆಸಿರುವುದು ಬಯಲಾಗಿದೆ. ಮಲ್ಲೇಶ್ವರಂ ಬಳಿಕ ಕೋರಮಂಗಲದಲ್ಲಿ ವಂಚನೆ ಕುರಿತು ಎರಡು ಪ್ರಕಣ ದಾಖಲಾಗಿದ್ದವು.ಲೈಪ್ ಟೈಮ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವ. ಆರ್ಟಿಓ ಎಸ್ ಡಿಎ ರವಿಶಂಕರ್ ಮತ್ತು ಸಂತೋಷ್ ಎಂಬ ಆರೋಪಿಗಳು ಜನರಿಗೆ ಯಾಮಾರಿಸಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.ಒಂದು ಕೇಸ್ ತನಿಖೆ ವೇಳೆ ಮತ್ತಷ್ಟು ವಂಚನೆ ಬೆಳಕಿಗೆ ಬಂದಿದ್ದು ಈಗಾಗಲೇ ಒಂದು ಕೇಸಲ್ಲಿ ಬಂಧನವಾಗಿರುವ ಆರ್ ಟಿಓ ಎಸ್ ಡಿಎ ರವಿಶಂಕರ್ ಜೊತೆಗೆ ಮತ್ತೊಬ್ಬ ಆರೋಪಿ ಸಂತೋಷ್  ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ : BBMP Election : ರಾಜಕಾರಣಿಗಳಿಗೆ ಟಕ್ಕರ್ ಕೊಡಲು ರೌಡಿಶೀಟರ್ಸ್ ಪ್ಲಾನ್ : BBMPಯಲ್ಲಿ ಹಿಡಿತಕ್ಕೆ ಕ್ರಿಮಿನಲ್ ಗಳ ಸಿದ್ಧತೆ

ಸದ್ಯ ಕೋರಮಂಗಲ ಪೊಲೀಸರಿಂದ ಸಂತೋಷ್ ವಿಚಾರಣೆ ನಡೆಯುತ್ತಿದ್ದು, ಫ್ಯಾನ್ಸಿ ನಂಬರ್ ಹಾಗೂ ಲೈಪ್ ಟೈಮ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವ ಹೆಸರಲ್ಲಿ ಹಲವರಿಗೆ ದೋಖಾ ಮಾಡಿರುವುದು ಗೊತ್ತಾಗಿದೆ. ಒಂದೊಂದು ಕಾರಿಗೆ ಟ್ಯಾಕ್ಸ್ ಅಂತಾ ನಂಬಿಸಿ ಲಕ್ಷ ಲಕ್ಷ ವಸೂಲಿ ಮಾಡಿ ನಕಲಿ ಬಿಲ್ ನೀಡಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News