KPTCL Recruitment Scam: ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸಿದ್ದ ಆರೋಪಿ ಬಂಧನ!

ಬಂಧಿತ ಆರೋಪಿ ಮೊಹಮ್ಮದ್ ಅಜೀಮುದ್ದಿನ್ ವಿವಿಧ ಬಗೆಯ ಇಲೆಕ್ಟ್ರಾನಿಕ್ ಡಿವೈಸ್‍ಗಳನ್ನು ದೆಹಲಿ, ಹೈದರಾಬಾದ್‍ನಿಂದ ತಂದು ಸಂಜು ಭಂಡಾರಿ ಸೇರಿ ಇತರರಿಗೆ ಮಾರಾಟ ಮಾಡಿದ್ದ.

Written by - Puttaraj K Alur | Last Updated : Sep 9, 2022, 12:17 PM IST
  • ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ನಡೆದ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣ
  • ಅಭ್ಯರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್‍ & ಸ್ಮಾರ್ಟ್ ವಾಚ್ ಮಾರಾಟ ಮಾಡಿದ್ದ ಆರೋಪಿ ಬಂಧನ
  • ದೆಹಲಿ-ಹೈದರಾಬಾದ್‍ನಿಂದ ವಿವಿಧ ಇಲೆಕ್ಟ್ರಾನಿಕ್ ಡಿವೈಸ್‍ ತಂದು ಮಾರಾಟ ಮಾಡಿದ್ದ ಆರೋಪಿ
KPTCL Recruitment Scam: ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸಿದ್ದ ಆರೋಪಿ ಬಂಧನ! title=
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣ

ಬೆಳಗಾವಿ: ಗೋಕಾಕ ನಗರದಲ್ಲಿ ನಡೆದ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ಪರೀಕ್ಷಾರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್‍ಗಳನ್ನು ಮಾರಾಟ ಮಾಡುತ್ತಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ.

ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ  ಎಲೆಕ್ಟ್ರಾನಿಕ್‌ ಡಿವೈಸ್‌ ಹಾಗೂ ಸ್ಮಾರ್ಟ್‌ ವಾಚ್‌ ಪೂರೈಸಿದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ದೇವಸಂದ್ರ ಮೂಲದ ಮೊಹಮ್ಮದ್ ಅಜೀಮುದ್ದಿನ್ (37) ಬಂಧಿತ ಆರೋಪಿ.

ಇದನ್ನೂ ಓದಿ: ವಿದ್ಯಾರ್ಥಿಗಳ ಗಮನಕ್ಕೆ : ಸೆ.12 ರಂದು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಈತನ ಬಂಧನದಿಂದ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಗೋಕಾಕ ನಗರದಲ್ಲಿ ಕಳೆದ ಆ.7ರಂದು ಹೆಸ್ಕಾಂ ನೇಮಕಾತಿ ಪರೀಕ್ಷಾ ಅಕ್ರಮ ನಡೆದಿತ್ತು. ಪ್ರಕರಣ ಸಂಬಂಧ ಈಗಾಗಲೇ ಬೆಳಗಾವಿ ಜಿಲ್ಲಾ ಪೊಲೀಸರು 17 ಆರೋಪಿಗಳ ಬಂಧಿಸಿದಂತಾಗಿದೆ. ಬಂಧಿತ ಆರೋಪಿ ಮೊಹಮ್ಮದ್ ಅಜೀಮುದ್ದಿನ್ ವಿವಿಧ ಬಗೆಯ ಇಲೆಕ್ಟ್ರಾನಿಕ್ ಡಿವೈಸ್‍ಗಳನ್ನು ದೆಹಲಿ, ಹೈದರಾಬಾದ್‍ನಿಂದ ತಂದು ಸಂಜು ಭಂಡಾರಿ ಸೇರಿ ಇತರರಿಗೆ ಮಾರಾಟ ಮಾಡಿದ್ದ.

ಆರೋಪಿಯಿಂದ 2 ಮೊಬೈಲ್ ಮತ್ತು ವಿವಿಧ ಬಗೆಯ 179 ಇಲೆಕ್ಟ್ರಾನಿಕ್ ಡಿವೈಸ್‍ಗಳು, ಇಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ 7 N95 ಮಾಸ್ಕ್, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ 41 ಬನಿಯನ್, ವಿವಿಧ ಬಗೆಯ 445 ಇಲೆಕ್ಟ್ರಾನಿಕ್ ಇಯರ್ ಪಿಸ್, ವಿವಿಧ ಬಗೆಯ 554 ಚಾರ್ಜಿಂಗ್ ಕೇಬಲ್ ಹಾಗೂ 6 ವಾಕಿಟಾಕಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಅಪ್ಪು ಫೇವರೇಟ್ ಲ್ಯಾಂಬೋರ್ಗಿನಿ ಕಾರು ದುಬೈಗೆ ಕಳುಹಿಸಿಕೊಟ್ಟ ಪತ್ನಿ ಅಶ್ವಿನಿ! ಕಾರಣವೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News