Shocking News: ಕೋರ್ಟ್ ಆವರಣದಲ್ಲಿಯೇ ಪತ್ನಿಯ ಕತ್ತು ಸೀಳಿ ಹತ್ಯೆಗೈದ ಪತಿ!

ಹಾಸನ ಜಿಲ್ಲೆಯ ಹೊಳೆನರಸೀಪುರ ನ್ಯಾಯಾಲಯದ ಹೊರ ಆವರಣದಲ್ಲಿರುವ ಶೌಚಾಲಯದಲ್ಲಿ ಗಂಡನೇ ತನ್ನ ಹೆಂಡತಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.

Written by - Zee Kannada News Desk | Last Updated : Aug 14, 2022, 12:58 PM IST
  • ನ್ಯಾಯಾಲಯದ ಆವರಣದಲ್ಲಿಯೇ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಪತಿ
  • ಹಾಸನ ಜಿಲ್ಲೆಯ ಹೊಳೆನರಸೀಪುರದ 2ನೇ ಜೆಎಂಎಫ್‌ಸಿ ಕೋರ್ಟ್‌ನ ಶೌಚಾಲಯದ ಬಳಿ ಕೃತ್ಯ
  • ಹೆಂಡತಿಗೆ ಮಚ್ಚಿನಿಂದ ಕೊಚ್ಚಿ ಎಸ್ಕೇಪ್ ಆಗಲು ಯತ್ನಿಸಿದ ಪತಿಯನ್ನು ಬಂಧಿಸಿದ ಪೊಲೀಸರು
Shocking News: ಕೋರ್ಟ್ ಆವರಣದಲ್ಲಿಯೇ ಪತ್ನಿಯ ಕತ್ತು ಸೀಳಿ ಹತ್ಯೆಗೈದ ಪತಿ! title=
ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಪತಿ!

ಹಾಸನ: ನ್ಯಾಯಾಲಯದ ಆವರಣದಲ್ಲಿಯೇ ಪತ್ನಿಯ ಕತ್ತು ಸೀಳಿ ಪತಿಯೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ. ಕಳೆದ 2 ವರ್ಷದಿಂದ ವಿಚ್ಛೇದನಕ್ಕಾಗಿ ಗಂಡ-ಹೆಂಡತಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

2ನೇ ಜೆಎಂಎಫ್‌ಸಿ ಕೋರ್ಟ್‌ನ ಶೌಚಾಲಯದ ಬಳಿ ಈ ಕೃತ್ಯ ನಡೆದಿದೆ. ತನ್ನ ಹೆಂಡತಿ ಕತ್ತಿಗೆ ಮಚ್ಚಿನಿಂದ ಕೊಚ್ಚಿ ಪರಾರಿಯಾಗಲು ಯತ್ನಿಸಿದ ಆರೋಪಿ ಪತಿ ಶಿವಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಯ ಪತ್ನಿ ಚೈತ್ರಾ (32) ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಕ್ಕೂ ಮುನ್ನ ಕರಾಳ ದಿನ: ವೀರಪ್ಪನ್ ಮಿಣ್ಯಂ ದಾಳಿಗೆ 30 ವರ್ಷ

ಘಟನೆಯ ವಿವರ

ಆರೋಪಿ ಶಿವಕುಮಾರ್ ಜೊತೆಗೆ 2015ರಲ್ಲಿ ಚೈತ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿಯೂ ಎಲ್ಲವೂ ಸರಿಯಾಗಿಯೇ ಇತ್ತು. ಬಳಿಕ ದಂಪತಿಗಳ ನಡುವೆ ಮನಸ್ತಾಪ ಆರಂಭವಾಗಿ ವಿಚ್ಛೇದನದವರೆಗೂ ತಲುಪಿದೆ. ಗಂಡನ ಕಿರುಕುಳ ತಾಳಲಾರದ ಚೈತ್ರಾ ತನಗೆ ವಿಚ್ಛೇದನ ಬೇಕು ಅಂತಾ ಕೇಳಿದ್ದಳಂತೆ. ಪರಸ್ಪರ ಒಪ್ಪಿಗೆಯ ಮೇರೆಗೆ ತಮ್ಮ 7 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಲು ದಂಪತಿ ನಿರ್ಧರಿಸಿದ್ದರಂತೆ. ಅದರಂತೆ ಹೊಳೆನರಸೀಪುರ ಕೌಟುಂಬಿಕ ನ್ಯಾಯಾಲಯದಲ್ಲಿ 1 ಗಂಟೆ ಕಾಲ ಕೌನ್ಸೆಲಿಂಗ್ ಮುಗಿಸಿ ಆರೋಪಿ ಶಿವಕುಮಾರ್ ಹೊರಬಂದಿದ್ದ. ಬಳಿಕ ಪತ್ನಿ ಚೈತ್ರಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆಕೆ ಶೌಚಾಲಯಕ್ಕೆ ತೆರಳುತ್ತಿದ್ದನ್ನು ಗಮನಿಸಿ ಹಿಂಬಾಲಿಸಿದ ಆರೋಪಿ ಮಚ್ಚಿನಿಂದ ಚೈತ್ರಾಳ ಕತ್ತು ಸೀಳಿದ್ದಾನೆ.

ಹೆಂಡತಿಗೆ ಮಚ್ಚಿನಿಂದ ಕೊಚ್ಚಿದ ಬಳಿಕ ಮಗುವಿನ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದಾನೆ. ವಿಪರೀತ ರಕ್ತಸ್ರಾವದಿಂದ ಬಳಲುತ್ತಿದ್ದ ಚೈತ್ರಾರನ್ನು ಕೂಡಲೇ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ಶಿವಕುಮಾರ್‌ನನ್ನು ಪಕ್ಕದಲ್ಲಿದ್ದವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  

ಇದನ್ನೂ ಓದಿ: ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಖಾಕಿ ಸರ್ವ ಸನ್ನದ್ಧ: ಈ ಬಾರಿ ಎಲ್ಲೆಲ್ಲೂ ಪೊಲೀಸರ ಹದ್ದಿನ ಕಣ್ಣು

ಮತ್ತೆ ಒಂದಾಗಲು ಒಪ್ಪಿಕೊಂಡಿದ್ದ ದಂಪತಿ

ಘಟನೆಯ ಕೆಲ ನಿಮಿಷಗಳ ಹಿಂದಷ್ಟೇ ಕೌನ್ಸೆಲಿಂಗ್ ಸೆಷನ್‌ನಲ್ಲಿ ಈ ದಂಪತಿ ತಮ್ಮ ಭಿನ್ನಾಭಿಪ್ರಾಯ ಬದಿಗಿರಿಸಿ 7 ವರ್ಷಗಳ ದಾಂಪತ್ಯವನ್ನು ಉಳಿಸಿಕೊಂಡು ಮತ್ತೆ ಒಂದಾಗಲು ಒಪ್ಪಿಕೊಂಡಿದ್ದರಂತೆ. ಇದಾಗಿ ಕೆಲವೇ ಕ್ಷಣಗಳಲ್ಲಿ ಈ ಕೃತ್ಯ ನಡೆದಿದೆ.  

‘ಕೋರ್ಟ್ ಆವರಣದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆತ ಅಪರಾಧವೆಸಗಲು ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದೇವೆ. ಕೌನ್ಸೆಲಿಂಗ್ ನಂತರ ಏನಾಯಿತು ಮತ್ತು ನ್ಯಾಯಾಲಯದೊಳಗೆ ಆತ ಆಯುಧವನ್ನು ಹೇಗೆ ತಂದ? ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಇದೊಂದು ಪೂರ್ವಯೋಜಿತ ಕೊಲೆಯೇ ಎಂಬುದರ ಬಗ್ಗೆಯೂ ನಾವು ತನಿಖೆ ಮಾಡುತ್ತೇವೆ’ ಅಂತಾ ಹಾಸನದ ಹಿರಿಯ ಪೊಲೀಸ್ ಅಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News