ಹಾನಗಲ್ ವ್ಯಕ್ತಿ ಶಿರಸಿಯಲ್ಲಿ ಕೊಲೆ: 3 ಜನ ಆರೋಪಿಗಳನ್ನು ಬಂಧಿಸಿದ ಬನವಾಸಿ ಪೋಲಿಸರು

ಸಾರ್ವಜನಿಕರು ಬೆಚ್ಚಿಬಿದ್ದಿದ್ದ ಈ ಪ್ರಕರಣವನ್ನು ಪೊಲೀಸರು ಕೇವಲ 48 ಗಂಟೆಯಲ್ಲಿ ಬೇಧಿಸಿರುವ ಬಗ್ಗೆ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ..

Written by - Yashaswini V | Last Updated : Sep 18, 2023, 04:11 PM IST
  • ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿ ನಿವಾಸಿ ಅಶೋಕ ಗಿರಿಯಪ್ಪ ಉಪ್ಪಾರ (48) ಕೊಲೆಯಾದ ವ್ಯಕ್ತಿ
  • ಇದೇ ಊರಿನ ಮೂವರಿಂದ ಹತ್ಯೆ
  • ಕೊಲೆಯಾದ 48 ಗಂಟೆಗಳಲ್ಲೇ ಪ್ರಕರಣ ಬೇಧಿಸಿದ ಪೊಲೀಸರು
ಹಾನಗಲ್ ವ್ಯಕ್ತಿ ಶಿರಸಿಯಲ್ಲಿ ಕೊಲೆ: 3 ಜನ ಆರೋಪಿಗಳನ್ನು ಬಂಧಿಸಿದ ಬನವಾಸಿ ಪೋಲಿಸರು title=

Crime News: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಳ್ಳಿಕೊಪ್ಪ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವನನ್ನು ಕೊಂದು ಶವವನ್ನು ಇಂಗು ಗುಂಡಿಯಲ್ಲಿ ಅರೆಬರೆ ಮುಚ್ಚಿ ಹೋಗಿದ್ದ ಘಟನೆ ನಡೆದಿದ್ದು 48 ಗಂಟೆಗಳಲ್ಲಿ ಆರೋಪಿಗಳನ್ನು  ಪತ್ತೆ ಹಚ್ಚಿ ಬಂಧಿಸುವಲ್ಲಿ ಬನವಾಸಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿ ನಿವಾಸಿ ಅಶೋಕ ಗಿರಿಯಪ್ಪ ಉಪ್ಪಾರ (48) ಕೊಲೆಯಾದ ವ್ಯಕ್ತಿಯಾಗಿದ್ದಾನೆ.. ಇದೇ ಊರಿನ ಕಿರಣ ಪರಶುರಾಮ ಸುರಳೇಶ್ವರ (23), ನಿರಂಜನ ಗೋವಿಂದಪ್ಪ ತಳವಾರ (19) ಹಾಗೂ ಗುಡ್ಡಪ್ಪ ಯಾನೆ ಗುಡ್ಯ ಕೊಟ್ಟಪ್ಪ ತಿಳುವಳ್ಳಿ (19) ಬಂಧಿತ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ- ಮಾನಸಿಕ ಕಿರುಕುಳಕ್ಕೆ ಮನನೊಂದು ಮೈಸೂರು ವಿವಿಯ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಬಂಧಿತರಿಂದ‌ ಕೃತ್ಯಕ್ಕೆ ಬಳಸಿದ ಕ್ರೆಟಾ ಮತ್ತು ಸ್ವಿಪ್ಟ್ ಕಾರು ಜಪ್ತುಮಾಡಿದ್ದು, ಮೃತನ ಬೈಕ್ ಹಾಗೂ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.. ಸಾರ್ವಜನಿಕರು ಬೆಚ್ಚಿಬಿದ್ದಿದ್ದ ಈ ಪ್ರಕರಣವನ್ನು ಪೊಲೀಸರು ಕೇವಲ 48 ಗಂಟೆಯಲ್ಲಿ ಬೇಧಿಸಿರುವ ಬಗ್ಗೆ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ..

ಇದನ್ನೂ ಓದಿ- ಪುಷ್ಪ ಸಿನಿಮಾದಂತೆ ರಕ್ತ ಚಂದನ ಸಾಗಿಸುತ್ತಿದ್ದ ಖದೀಮರ ಬಂಧನ

ಡಿ‌ವೈ‌ಎಸ್‌ಪಿ ಗಣೇಶ ಕೆ ಲ್ ಮಾರ್ಗದರ್ಶನದಲ್ಲಿ, ಸಿಪಿಆಯ್ ರಾಮಚಂದ್ರ ನಾಯಕ್ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ  ಪಿಎಸ್ಆಯ್ ಚಂದ್ರಕಲಾ ಪತ್ತಾರ್ , ಪಿಎಸ್ಆಯ್ ಸುನೀಲ್ ಕುಮಾರ ಬಿ ವೈ ಮತ್ತು ಸಿಬ್ಭಂದಿಗಳು ಪಾಲ್ಗೊಂಡಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News