ನಾಗರಿಕ ಸಮಾಜವೇ ತಲೆ ತಗ್ಗಿಸುವ ಸ್ಟೋರಿ: ಉದ್ಯಮಿ ಪುತ್ರನ ಕೊಲೆಯ ರೋಚಕ ಕಹಾನಿ

Hubli Murder Case: ಅಖಿಲ್ ಕೊಲೆಗೆ ಹಂತಕರು ರೂಪಿಸಿದ್ದ ಮಾಸ್ಟರ್ ಪ್ಲಾನ್ ಗೆ ಅವರ ತಂದೆ ಸೂತ್ರದಾರನಾಗಿದ್ದು, ಮನೆಯಿಂದ ಮಗನನ್ನು ಕರೆದುಕೊಂಡು ಬಂದ ಭರತ್ ಹಂತಕರಿಗೆ ಒಪ್ಪಿಸಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ವಾಣಿಜ್ಯ ನಗರಿಯಲ್ಲಿ ದೊಡ್ಡ ಉದ್ಯಮಿಯಾಗಿರುವ ಭರತ್‌ ಮಹಾಜನ್‌ ಸೇಠ್‌, ದುಶ್ಚಟಕ್ಕೆ ಈಡೀಗಾಗಿದ್ದ ತನ್ನ ಮಗನ ಕೊಲೆಗಾಗಿ ಹತ್ತು ಲಕ್ಷ ರೂಪಾಯಿ ಸುಪಾರಿ ನೀಡಿದ್ದ...

Written by - Yashaswini V | Last Updated : Dec 8, 2022, 11:26 AM IST
  • ಹಿಂಸೆ ಮಹಾಪಾಪ‌ ಎಂದು ಜಗತ್ತಿಗೆ ಸಾರಿದ ಧರ್ಮವದು
  • ಒಂದು ಇರುವೆಯ ಪ್ರಾಣ ತೆಗೆದರು ಅದು ದೊಡ್ಡ ಪಾಪಕ್ಕೆ ಹೋಗಲಾಗುವುದು ಎಂದು ಸಾರುವ ಧರ್ಮ
  • ಇಂತಹ ಧರ್ಮದ ಸಂದೇಶ ಸಾರುವವನೇ ಅಧರ್ಮದ ಹಾದಿ ಹಿಡಿದ್ದಾದರೂ ಏಕೆ?
ನಾಗರಿಕ ಸಮಾಜವೇ ತಲೆ ತಗ್ಗಿಸುವ ಸ್ಟೋರಿ: ಉದ್ಯಮಿ ಪುತ್ರನ ಕೊಲೆಯ ರೋಚಕ ಕಹಾನಿ title=
Hubli Murder Case

Hubli Murder Case: ಒಂದು ಇರುವೆಯನ್ನೂ ಸಹ ಸಾಯಿಸಲು ಬಿಡದ ವಿಶ್ವಕ್ಕೆ ಶಾಂತಿ ಮಂತ್ರ ಕೋರಿದ  ಸಮುದಾಯವೇ ತಲೆ ತಗ್ಗಿಸುವಂತೆ, ನಾಗರಿಕ ಸಮಾಜವೇ ನಾಚುವಂತೆ ಸ್ವತಃ ತಂದೆಯೇ ಹೆತ್ತ ಮಗನನ್ನು ಕೊಲೆ ಮಾಡಿಸಿದ ಪ್ರಕರಣ ಅಂತಿಮ ಘಟ್ಟ ತಲುಪಿದೆ. ಮಣ್ಣಿನಲ್ಲಿ ಮುಚ್ಚಿಟ್ಟ ಶವದ ಜೊತೆಗೆ ಸತ್ಯವನ್ನು ಹೊರೆಳೆದ ಪೊಲೀಸರು, ಅಂತಿಮ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಮಗನನ್ನು ಕಳೆದುಕೊಂಡ ತಾಯಿ ತನ್ನ ಗಂಡ ಹೇಳಿದ ಸುಳ್ಳನ್ನು ಸತ್ಯವೆಂದು ನಂಬಿ, ಇನ್ನೂ ಬಾರದ ಮಗನ ದಾರಿ ಕಾಯುತ್ತಿದ್ದಾಳೆ. ಇಂತಹ ಒಂದು ಕರುಳು ಕುಡಿಯ ದಯನೀಯ ಸ್ಟೋರಿ ಇಲ್ಲಿದೆ...
 

ಹೌದು.. ಅಖಿಲ್ ಕೊಲೆಗೆ ಹಂತಕರು ರೂಪಿಸಿದ್ದ ಮಾಸ್ಟರ್ ಪ್ಲಾನ್ ಗೆ ಅವರ ತಂದೆ ಸೂತ್ರದಾರನಾಗಿದ್ದು, ಮನೆಯಿಂದ ಮಗನನ್ನು ಕರೆದುಕೊಂಡು ಬಂದ ಭರತ್ ಹಂತಕರಿಗೆ ಒಪ್ಪಿಸಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ವಾಣಿಜ್ಯ ನಗರಿಯಲ್ಲಿ ದೊಡ್ಡ ಉದ್ಯಮಿಯಾಗಿರುವ ಭರತ್‌ ಮಹಾಜನ್‌ ಸೇಠ್‌, ದುಶ್ಚಟಕ್ಕೆ ಈಡೀಗಾಗಿದ್ದ ತನ್ನ ಮಗನ ಕೊಲೆಗಾಗಿ ರೆಹಮಾನ್ ಬಿಜಾಪುರ, ಮಹಾದೇವ ನಾಲ್ವಾಡ ,ಸಲೀಂ ಸಲಾವುದ್ದಿನ್ ಎಂಬುವವರಿಗೆ  ಹತ್ತು ಲಕ್ಷಕ್ಕೆ ಸುಪಾರಿ ಕೊಡಲು ಮುಂದಾಗಿದ್ದರು. ಕೊಲೆ ಮಾಡಲು ಒಪ್ಪಿಕೊಂಡಿದ್ದ ಹಂತಕರು, ಧಾರವಾಡ ಜಿಲ್ಲೆಯ ಕಲಘಟಗಿ ಹೊರ ವಲಯದ ರೆಹಮಾನ್ ಬಿಜಾಪುರ ಸಂಬಂಧಿ ಕಬ್ಬಿನ ಗದ್ದೆಯಲ್ಲಿ ಅಖಿಲ್ ಕೊಲೆಗೆ ಸಂಚು ರೂಪಿಸಿದ್ದರು. ಆದರೆ ಕಲಘಟಗಿಗೆ ಅಖಿಲ್ ಕರೆತರುವ ಜವಾಬ್ದಾರಿ ಮಾತ್ರ ಅವರ ತಂದೆಗೆ ವಹಿಸಿದ್ದರು.

ಇದನ್ನೂ ಓದಿ- ಹುಬ್ಬಳ್ಳಿ ಉದ್ಯಮಿ ಪುತ್ರನ ಸುಪಾರಿ ಕೊಲೆ ಪ್ರಕರಣ- ಶವ ಹೊರತೆಗೆದ ಪೊಲೀಸರು

ಪ್ಲಾನ್ ನಂತೆ ಡಿಸೆಂಬರ್ 1 ರಂದು ಮಧ್ಯಾಹ್ನ ಊಟಕ್ಕೆಂದು ಆರೋಪಿ ರೆಹಮಾನ್ ಜೊತೆಗೆ ಮನೆಗೆ ತೆರಳಿ ಭರತ್, ಊಟದ ಬಳಿಕ ಅಖಿಲ್ ನನ್ನು ಕರೆದು, ಕಲಘಟಗಿಯಲ್ಲಿ ಒಂದು ಡಾಬಾ ನಿರ್ಮಾಣ ಮಾಡುವ ಸಲುವಾಗಿ ಒಂದಿಷ್ಟು ಸಾಮಗ್ರಿಗಳ ಪೂರೈಕೆಗೆ ಆರ್ಡರ್ ಬಂದಿದ್ದು, ನೋಡಿಕೊಂಡು ಬರೋಣ ಅಂತ ಕರೆದಿದ್ದಾರೆ. ತಂದೆಯ ಮಾತಿಗೆ ಒಪ್ಪಿಕೊಂಡ ಅಖಿಲ್ ತನ್ನದೇ ಕಾರ್ ನಲ್ಲಿ ತಂದೆ ಮತ್ತು ಹಂತಕನನ್ನು ಕೂರಿಸಿಕೊಂಡು, ಕಲಘಟಗಿ ಬಳಿಯ ಕಬ್ಬಿನ ಗದ್ದೆಗೆ ಬಂದಿದ್ದಾರೆ. ಗದ್ದೆಯಲ್ಲಿರುವ ಒಂದು ನಿರ್ಮಾಣ ಹಂತ ಟಿನ್ ಶೆಡ್ ತೋರಿಸಿ ಇದಕ್ಕೆ ಪಿಓಪಿ ಮಾಡಬೇಕು ಅಂತ ನಾಟಕ ಮಾಡಿ ಗದ್ದೆಯ ಒಳಗಡೆ ಕರೆದುಕೊಂಡು ಹೋಗಿದ್ದಾರೆ. ಪ್ಲಾನ್ ನಂತೆ ಮಗನನ್ನು ಒಳಗೆ ಕಳುಹಿಸಿದ ಭರತ್ ತಾನು ಹೊರಗಡೆ ಬಂದು ಕಾರ್ ತೆಗೆದುಕೊಂಡು ಮತ್ತೆ ವಾಪಾಸು ಹುಬ್ಬಳ್ಳಿಗೆ ತೆರಳಿದ್ದಾರೆ.

ಇದನ್ನೂ ಓದಿ- ಪತ್ನಿ ಶವವನ್ನು ಮೂಟೆಯಲ್ಲಿ ಹೊತ್ತೊಯ್ದ ಪತಿ!

ಅತ್ತ ಭರತ್ ಹುಬ್ಬಳ್ಳಿಗೆ ತೆರಳುತ್ತಿದ್ದಂತೆ ಇತ್ತ ಹಂತಕರು ಅಖಿಲ್ ಗೆ ಹಿಂದೆಯಿಂದ ಅಟ್ಯಾಕ್ ಮಾಡಿ, ಹಗ್ಗದಿಂದ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಮಗನ ಸಾವಿನ‌ ಸುದ್ದಿ ತಿಳಿದ ಭರತ್ ಪೊಲೀಸ್ ಠಾಣೆಗೆ ತೆರಳಿ ಮಗನ ಮಿಸ್ ಆಗಿದ್ದಾನೆ ಅಂತ ದೂರು ದಾಖಲಿಸಲು ಮುಂದಾಗಿ, ತಾನೆ ಹೆಣದ ಬಲೆಯಲ್ಲಿ ಸಿಕ್ಕು ಈಗ ಹಂತಕರ ಜೊತೆಗೆ ಕಂಬಿ ಹಿಂದೆ ತೆರಳಿದ್ದಾನೆ. ದುಶ್ಚಟಕ್ಕೆ ಈಡಾಗಿದ್ದ ಮಗನನ್ನು ಸರಿ ದಾರಿಗೆ ತರುವ ಬದಲಿಗೆ ಆತನನ್ನೇ ಬಲಿಕೊಟ್ಟ ತಂದೆ ಜೈಲು ಸೇರಿದರೆ, ಬಾರದ ಲೋಕಕ್ಕೆ ತೆರಳಿರುವ ಮಗ ಬಂದೇ ಬರುತ್ತಾನೆ ಎಂದು ನಂಬಿಕೆಯಿಂದ ಕಾಯುತ್ತಿರುವ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News