ಪ್ರೀತಿಸಿದ ಹುಡ್ಗೀಯ ಬೈಕನ್ನೇ ಸುಟ್ಟು ಹಾಕಿದ ಪಾಗಲ್ ಪ್ರೇಮಿ

Bangalore Crime News : ವಿಕ್ರಮ್ ಎಂಬ ಪಾಗಲ್ ಪ್ರೇಮಿ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡ್ತಿದ್ದ. ವಿಕ್ರಮ್ ಮಾಡುತಿದ್ದ ಆಕ್ರಮಗಳ ಕುರಿತು ಪ್ರೇಯಸಿಗೆ ಎಲ್ಲವೂ ಗೊತ್ತಿತ್ತು. ಬಿಟಿಎಂ ಲೇಔಟ್, ಮಡಿವಾಳ, ಕೊರಮಂಗಲ ಕಡೆ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ಈ ವಿಕ್ರಮ್.   

Written by - Chetana Devarmani | Last Updated : Dec 15, 2022, 12:36 PM IST
  • ಪ್ರೀತಿಸಿದ ಹುಡ್ಗೀಯ ಬೈಕನ್ನೇ ಸುಟ್ಟು ಹಾಕಿದ ಪಾಗಲ್ ಪ್ರೇಮಿ
  • ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
  • ವಿಕ್ರಮ್ ಎಂಬ ಪಾಗಲ್ ಪ್ರೇಮಿಯಿಂದ ಕೃತ್ಯ
ಪ್ರೀತಿಸಿದ ಹುಡ್ಗೀಯ ಬೈಕನ್ನೇ ಸುಟ್ಟು ಹಾಕಿದ ಪಾಗಲ್ ಪ್ರೇಮಿ title=
ವಿಕ್ರಮ್

ಬೆಂಗಳೂರು : ಪ್ರೀತಿ ಮಾಯೆ ಹುಷಾರು ಎಂಬ ಮಾತೇ ಇದೆ. ಪ್ರೇಮದ ಅಮಲೇ ಹಾಗೆ ಏನು ಬೇಕಾದರೂ ಮಾಡಿಸುವಂಥದ್ದು. ಪ್ರೀತಿಸಿ ಪಲವರ್‌ಗಾಗಿ ಸರಿ ದಾರಿ ಹಿಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ಅದರ ಜೊತೆ ಸರಿ ದಾರಿಯಲ್ಲಿ ನಡಿ ಎಂದಿದ್ದಕ್ಕೆ ಪ್ರೀತಿಸಿದ ವ್ಯಕ್ತಿ ಪಶ್ಚಾತಾಪ ಪಡುವಂತೆ ಮಾಡುವ ಪಾಪಿಗಳೂ ಇದ್ದಾರೆ. ಸಮಾಜದ ಏಳ್ಗೆಗೆ ಮಾರಕವಾದ ಡ್ರಗ್‌ ಪೆಡ್ಲಿಂಗ್‌ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿದ ತಪ್ಪಿಗೆ ಈ ಯುವತಿ ಪಶ್ಚಾತಾಪ ಪಡುವಂತಾಗಿದೆ. 

ಇದನ್ನೂ ಓದಿ : ಸಾರ್ವಜನಿಕರಿಂದ ಹಣ ವಸೂಲಿ ಮಾಡಿದರೆ ಕ್ರಮ: ಪೊಲೀಸರಿಗೆ ಹಿರಿಯ ಅಧಿಕಾರಿಗಳ ಎಚ್ಚರಿಕೆ

ವಿಕ್ರಮ್ ಎಂಬ ಪಾಗಲ್ ಪ್ರೇಮಿ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡ್ತಿದ್ದ. ವಿಕ್ರಮ್ ಮಾಡುತಿದ್ದ ಆಕ್ರಮಗಳ ಕುರಿತು ಪ್ರೇಯಸಿಗೆ ಎಲ್ಲವೂ ಗೊತ್ತಿತ್ತು. ಬಿಟಿಎಂ ಲೇಔಟ್, ಮಡಿವಾಳ, ಕೊರಮಂಗಲ ಕಡೆ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ಈ ವಿಕ್ರಮ್. ಎಷ್ಟೇ ಆದರೂ ಪ್ರೀತಿಸಿದ ಹುಡುಗ ಅಲ್ವಾ ಅದಕ್ಕೆ ಇಂದಲ್ಲ ನಾಳೆ ಸರಿ ಹೋಗ್ತಾನೆ ಅಂತಾ ಯುವತಿ ಕಾಯುತ್ತಿದ್ದಳು. ಅನೇಕ ಬಾರಿ ಡ್ರಗ್ ಪೆಡ್ಲಿಂಗ್ ಬಿಡುವಂತೆ ಹೇಳಿದ್ರೂ ವಿಕ್ರಮ್ ಮಾತ್ರ ತನ್ನ ದಂಧೆ ನಿಲ್ಲಿಸಿರಲಿಲ್ಲ.  

ವಿಕ್ರಮ್‌ಗೆ ಎಷ್ಟೇ ಬುದ್ಧಿ ಹೇಳಿದ್ರೂ ಕೇಳದಿದ್ದಾಗ, ಕೊನೆಗೆ ಪ್ರಿಯಕರನ್ನು ಬದಲಾಯಿಸೋಣ ಅಂತ ಈ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಒಮ್ಮೆ ಅರೆಸ್ಟ್ ಆದ್ರೂ ಪರವಾಗಿಲ್ಲ, ಬದಲಾದ್ರೆ ಸಾಕು ಎಂದು ಈ ಕೆಲಸ ಮಾಡಿದ್ದಳು. ಏನಾದ್ರೂ ಮಾಡಿ ನನ್ನ ಪ್ರಿಯಕರನನ್ನು ಬದಲಾಯಿಸಿ ಅಂತ ಪೊಲೀಸರಿಗೆ ಈಕೆ ಹೇಳಿದ್ದಳಂತೆ. ಮಾಹಿತಿ ಪಡೆದಿದ್ದೇ ಮಾಲು ಸಮೇತ ಮಡಿವಾಳ ಪೊಲೀಸರು ವಿಕ್ರಮ್‌ನನ್ನು ಬಂಧಿಸಿದ್ದರು. 

ಇದನ್ನೂ ಓದಿ : ಕಾಮುಕ ಶಿಕ್ಷಕನಿಗೆ ವಸತಿ ನಿಲಯದ ವಿದ್ಯಾರ್ಥಿನಿಯರಿಂದ ಧರ್ಮದೇಟು

ಸುಮಾರು ಎಂಟು ತಿಂಗಳು ಜೈಲಿನಲ್ಲಿ ಇದ್ದ ವಿಕ್ರಮ್‌ ಕೆಲದಿನಗಳ ಹಿಂದೆ ಬಿಡುಗಡೆಯಾಗಿ ಹೊರಗೆ ಬಂದಿದ್ದ. ಜೈಲ್‌ನಿಂದ ರಿಲೀಸ್‌ ಆಗಿ ಬಂದಿದ್ದೇ ಪ್ರೇಯಸಿಯೇ ಪೊಲೀಸರಿಗೆ ಮಾಹಿತಿ ನೀಡಿರೋದು ಈತನಿಗೆ ಗೊತ್ತಾಗಿದೆ. 12 ನೇ ತಾರೀಖಿನಂದು ಪೆಟ್ರೋಲ್ ತಗೊಂಡು ಹಲಸೂರಿನಲ್ಲಿರೋ ಯುವತಿ ಮನೆಗೆ ಹೋಗಿದ್ದ ವಿಕ್ರಮ್‌, ಆಕೆ ಇಲ್ಲದಿದ್ದಾಗ ಅವಳ ಬೈಕ್ ಸುಟ್ಟು ಎಸ್ಕೇಪ್ ಆಗಿದ್ದಾನೆ. 

ವಿಕ್ರಮ್‌ ಬೈಕ್ ಸುಟ್ಟು ಎಸ್ಕೇಪ್ ‌ಆಗೋ ದೃಶ್ಯ ಸಿಸಿಕ್ಯಾಮರದಲ್ಲಿ‌ ಸೆರೆಯಾಗಿದೆ. ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ‌ ವಿಕ್ರಮ್ ನನ್ನು ಬಂಧಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News