ಹೆತ್ತತಾಯಿ ಕೊಂದು ಸೂಟ್ ಕೇಸಲ್ಲಿ ಪೊಲೀಸ್ ಠಾಣೆಗೆ ಶವ ತಂದ ಮಗಳು

ಮಾಸ್ಟರ್ ಆಫ್ ಪಿಸಿಯೋ ಥೆರಪಿ ಮಾಡಿರುವ ಸೇನಾಲಿ ಸೇನ್ ಎಂಬ 39 ವರ್ಷದ ಮಹಿಳೆ ತನ್ನ 70 ವರ್ಷದ ತಾಯಿ ಬೀವಾ ಪಾಲ್ ನ ಕೊಲೆ ಮಾಡಿದ್ದಾಳೆ. ಇದಕ್ಕೆ ಕಾರಣ ಸೇನಾಲಿ ಅತ್ತೆ ಮತ್ತು ಅಮ್ಮನ ಜಗಳವಂತೆ. 

Written by - VISHWANATH HARIHARA | Edited by - Yashaswini V | Last Updated : Jun 13, 2023, 08:14 AM IST
  • ಅತ್ತೆ-ಅಮ್ಮನ ಜಗಳಕ್ಕೆ ಕೊಲೆಯಾದ ತಾಯಿ!
  • ಬೀಗರ ಜಗಳಕ್ಕೆ ಬೇಸತ್ತು ಹೆತ್ತ ತಾಯಿಯನ್ನೇ ಕೊಂದ ಮಗಳು
  • ಹೆತ್ತ ತಾಯಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ಬಂದ ಮಗಳು
ಹೆತ್ತತಾಯಿ ಕೊಂದು ಸೂಟ್ ಕೇಸಲ್ಲಿ ಪೊಲೀಸ್ ಠಾಣೆಗೆ ಶವ ತಂದ ಮಗಳು  title=

ಬೆಂಗಳೂರು: ತಾಯಿಗಿಂತ ದೇವರಿಲ್ಲ.. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ಸೃಷ್ಟಿಸಿರುತ್ತಾನೆ ಎಂಬ ಮಾತಿದೆ. ತಾಯಿ ಪ್ರೀತಿಗಾಗಿ ಎಷ್ಟೋ ಜನ ಹಪಹಪಿಸುತ್ತಾರೆ. ಆದರೆ ಇಲ್ಲಿ ಒಬ್ಬ ನೀಚ ಮಗಳು ತನ್ನ ಹೆತ್ತ ತಾಯಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾಳೆ.‌ ಈ ಕೃತ್ಯ ಕಂಡು ಮೈಕೋ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಬೆಚ್ಚಿಬಿದ್ದಿದ್ದಾರೆ.  

ಮಾಸ್ಟರ್ ಆಫ್ ಪಿಸಿಯೋ ಥೆರಪಿ ಮಾಡಿರುವ ಸೇನಾಲಿ ಸೇನ್ ಎಂಬ 39 ವರ್ಷದ ಮಹಿಳೆ ತನ್ನ 70 ವರ್ಷದ ತಾಯಿ ಬೀವಾ ಪಾಲ್ ನ ಕೊಲೆ ಮಾಡಿದ್ದಾಳೆ. ಇದಕ್ಕೆ ಕಾರಣ ಸೇನಾಲಿ ಅತ್ತೆ ಮತ್ತು ಅಮ್ಮನ ಜಗಳವಂತೆ. 

ಇದನ್ನೂ ಓದಿ- ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆಗೆ ಯತ್ನ: ಆರೋಪಿ ಅಂದರ್

ಒಂದೇ ಮನೆಯಲ್ಲಿದ್ದ ಬೀಗರ ಜಗಳಕ್ಕೆ ಬೇಸತ್ತು ಬೀವಾ ಪೌಲ್ ತನ್ನ ಮಗಳಿಗೆ ನಿದ್ದೆ ಮಾತ್ರೆ ಹಾಕಿ ಸಾಯಿಸುವುದಾಗಿ ಹೇಳಿದ್ದಾಳೆ.  ಆದರೆ ಮಗಳೇ ಅಮ್ಮನಿಗೆ ನಿನ್ನೆ ಮುಂಜಾನೆ 20 ಮಾತ್ರೆಗಳನ್ನ ನುಂಗಿಸಿದ್ದಾಳೆ.‌ ನಂತರ ಸುಮಾರು‌11 ಗಂಟೆಗೆ ತಾಯಿ ಹೊಟ್ಟೆ ನೋವು ಎಂದಾಗ ಆಸ್ಪತ್ರೆಗೆ ಸೇರಿಸಬೇಕಾದ ಮಗಳು ವೇಲ್ ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಟ್ರ್ಯಾಲಿ ಸೂಟ್ ಕೇಸ್ ನಲ್ಲಿ ತಾಯಿಯನ್ನ ಪ್ಯಾಕ್ ಮಾಡಿ ತಂದೆ ಫೋಟೋ ಜೊತೆಗೆಗಿಟ್ಟು ನೇರವಾಗಿ ಮೈಕೋ ಲೇಔಟ್ ಠಾಣೆಗೆ ಬಂದಿದ್ದಾಳೆ. 

ಇದನ್ನೂ ಓದಿ- ಖ್ಯಾತ ನಟನ ಮದುವೆ ಪಾರ್ಟಿಯಲ್ಲಿ ಗಲಾಟೆ: ವೈಷ್ಣವಿ ಬಿಲ್ಡರ್ಸ್ ದರ್ಶನ್ ಕೊಲೆಗೆ ವೇದಾಂತ್ ದುಗಾರ್ ಯತ್ನ ಆರೋಪ

ಬಿಳಕಹಳ್ಳಿಯ ಎನ್ ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ ನ ಪ್ಲಾಟ್ ನಿಂದ ಆಟೋದಲ್ಲಿ ಠಾಣೆಗೆ ಬಂದು‌ ಶವದ ಸಮೇತ ಶರಣಾಗಿದ್ದಾಳೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News