ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು ಕೊಟ್ಯಂತರ ರೂಪಾಯಿ ವಂಚನೆ!

ಐಡಿಬಿಐ ಬ್ಯಾಂಕ್ ನಲ್ಲಿ ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ ರೂಪಾಯಿ ಚಿನ್ನದ ಸಾಲ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲ ಪಡೆದಿದ್ದ ದತ್ತಾತ್ರೇಯ ಬಾಕಳೆ ಎಂಬುವವರೂ ಸೇರಿದಂತೆ ಒಟ್ಟು 18 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

Written by - Yashaswini V | Last Updated : Nov 4, 2022, 10:28 AM IST
  • ಇದೇ ವರ್ಷದ ಎಪ್ರಿಲ್ ತಿಂಗಳಿನಿಂದಿ ಬ್ಯಾಂಕ್ ನಲ ಜೂನ್ ತಿಂಗಳವರೆಗೆ ದತ್ತಾತ್ರೇಯ ತನ್ನ ಸಹಚರರ ಹೆಸರಿನಲ್ಲ್ಲಿ ನಕಲಿ ಚಿನ್ನದ ಆಭರಣ ಅಡವಿಟ್ಟಿದ್ದ.
  • ಈ ವಂಚನೆಯಲ್ಲಿ ಆರೋಪಿ ದತ್ತಾತ್ರೇಯ ಬಾಕಳೆ, ಬ್ಯಾಂಕ್ ನಲ್ಲಿನ ಚಿನ್ನ ಚೆಕ್ ಮಾಡುವ ಸುರೇಶ್ ರೇವಣಕರ ಎಂಬಾತನ ಸಹಾಯ ಪಡೆಯುತ್ತಿದ್ದನು.
  • ಬ್ಯಾಂಕ್ನಲ್ಲಿ ಚಿನ್ನ ಚೆಕ್ ಮಾಡುತ್ತಿದ್ದ ಸುರೇಶ್ ರೇವಣಕರ, ದತ್ತಾತ್ರೇಯ ಆ್ಯಂಡ್ ಟೀಮ್ ತರುತ್ತಿದ್ದ ನಕಲಿ ಚಿನ್ನವನ್ನು 22 ಕ್ಯಾರೆಟ್ ಚಿನ್ನ ಎಂದು ಸರ್ಟಿಫಿಕೇಟ್ ಕೊಡುತ್ತಿದ್ದ
ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು ಕೊಟ್ಯಂತರ ರೂಪಾಯಿ ವಂಚನೆ! title=
Fake gold

ಗದಗ: ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು ಕೊಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಗದಗದ ಐಡಿಬಿಐ ಬ್ಯಾಂಕ್‌ನಲ್ಲಿ ನಡೆದಿದೆ. ಈ ಸಂಬಂಧ  ನಗರಸಭೆ ಮಾಜಿ‌ ಉಪಾಧ್ಯಕ್ಷರ ಮಗ ಸೇರಿ 18 ಜನರ ವಿರುದ್ಧ  ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಐಡಿಬಿಐ ಬ್ಯಾಂಕ್ ನಲ್ಲಿ ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ ರೂಪಾಯಿ ಚಿನ್ನದ ಸಾಲ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲ ಪಡೆದಿದ್ದ ದತ್ತಾತ್ರೇಯ ಬಾಕಳೆ ಎಂಬುವವರೂ ಸೇರಿದಂತೆ ಒಟ್ಟು 18 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಗದಗ ಬೆಟಗೇರಿ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಪುತ್ರನಾದ ದತ್ತಾತ್ರೇಯ ಬಾಕಳೆ ಅವರನ್ನು ಈ ವಂಚನೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. 

ಇದೇ ವರ್ಷದ ಎಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೆ ದತ್ತಾತ್ರೇಯ ತನ್ನ ಸಹಚರರ ಹೆಸರಿನಲ್ಲಿ  ಬ್ಯಾಂಕ್ ನಲ್ಲಿ ನಕಲಿ ಚಿನ್ನದ ಆಭರಣ ಅಡವಿಟ್ಟಿದ್ದ. ಈ ವಂಚನೆಯಲ್ಲಿ ಆರೋಪಿ ದತ್ತಾತ್ರೇಯ ಬಾಕಳೆ, ಬ್ಯಾಂಕ್ ನಲ್ಲಿನ ಚಿನ್ನ ಚೆಕ್ ಮಾಡುವ ಸುರೇಶ್ ರೇವಣಕರ ಎಂಬಾತನ ಸಹಾಯ ಪಡೆಯುತ್ತಿದ್ದನು. ಬ್ಯಾಂಕ್ನಲ್ಲಿ ಚಿನ್ನ ಚೆಕ್ ಮಾಡುತ್ತಿದ್ದ ಸುರೇಶ್ ರೇವಣಕರ, ದತ್ತಾತ್ರೇಯ ಆ್ಯಂಡ್ ಟೀಮ್ ತರುತ್ತಿದ್ದ ನಕಲಿ ಚಿನ್ನವನ್ನು  22 ಕ್ಯಾರೆಟ್ ಚಿನ್ನ ಎಂದು ಸರ್ಟಿಫಿಕೇಟ್ ಕೊಡುತ್ತಿದ್ದ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ. 

ಇದನ್ನೂ ಓದಿ- Shocking: ಮನೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಳೆತ ಶವ ಪತ್ತೆ..!

ಇನ್ನು ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಆರೋಪಿ ದತ್ತಾತ್ರೇಯ ಬೇರೆ ಬೇರೆಯವರ ಹೆಸರಿನಲ್ಲಿ ಒಟ್ಟು  4,871.04 ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು ಬರೋಬ್ಬರಿ 1 ಕೋಟಿ 43 ಲಕ್ಷ 34 ಸಾವಿರ ರೂಪಾಯಿ ಚಿನ್ನದ ಸಾಲವನ್ನು ಪಡೆದಿದ್ದಾನೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..? 
ವಾಸ್ತವವಾಗಿ, ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ನಲ್ಲಿ ಇರಿಸಲಾಗಿದ್ದ ಚಿನ್ನವನ್ನ ಚೆಕ್ ಮಾಡಲಾಗಿತ್ತು. ತಪಾಸಣೆ ವೇಳೆ ಕೆಲ ಚಿನ್ನಾಭರಣ ನಕಲಿ‌ ಅನ್ನೋದು ಪತ್ತೆಯಾಗಿದೆ. ವಂಚನೆಯಾಗಿರೋ ಬಗ್ಗೆ ಮಾಹಿತಿ ಪಡೆದಿದ್ದ ಬ್ಯಾಂಕ್ ಮ್ಯಾನೇಜರ್ ಪರಶುರಾಮ ರೊಟ್ಟಿಗವಾಡ ಅವರು ಮುಖ್ಯ ಕಚೇರಿಗೆ ಮಾಹಿತಿ ನೀಡಿದ್ದರು. ಮೇಲಧಿಕಾರಿಗಳ ಅನುಮತಿ ಪಡೆದ ನಂತರ ಸದ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಇದನ್ನೂ ಓದಿ- ಕಾರ್ಮಿಕ ಸೋಗಿನಲ್ಲಿ ಲಕ್ಷಾಂತರ ರೂ. ಎಗರಿಸಿದ್ದ ಕಿರಾತಕ ಅರೆಸ್ಟ್

ಮುಖ್ಯ ಆರೋಪಿ ಬೆಂಗಳೂರಲ್ಲಿ ಬಂಧನ..! 
ದತ್ತಾತ್ರೇಯ ಕಳೆದ ಕೆಲ ವರ್ಷಗಳಿಂದ ವಿವಿಧ ಫ್ರಾಡ್ ಕೇಸ್ ಗಳಲ್ಲಿ ಭಾಗಿಯಾಗಿದ್ದ. ಬೆಂಗಳೂರಿನಲ್ಲಿ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಯಾಗಿರುವ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.. ಪ್ರಕರಣದಲ್ಲಿ ಭಾಗಿಯಾಗಿದ್ದ 18 ಜನರಿಗಾಗಿ ಈಗಾಗ್ಲೆ ತಲಾಶ್ ನಡೆದಿದೆ.. ಪ್ರಕರಣ ಸಂಬಂಧ ಬೆಟಗೇರಿ ಬಡಾವಣೆಯಲ್ಲಿ ಕೇಸ್ ದಾಖಲಾಗಿದ್ದು, ವಂಚನೆ ಸಹಕಾರ ನೀಡಿದ್ದ ಬ್ಯಾಂಕ್ ನ ಚಿನ್ನ ಚೆಕ್ ಮಾಡುತ್ತಿದ್ದ ಸುರೇಶ್ ರೇವಣಕರ.. ದತ್ತಾತ್ರೇಯ ಬಾಕಳೆ, ಅರಣ್ ಕುಮಾರ್, ಆದಿಲ್ ನಿಶಾನಿ, ರವಿ ಹತ್ತರಕಲ್, ಗಣೇಶ ಮಾದರ, ಮಾಣಿಕ್ ಲಕ್ಕುಂಡಿ, ದಾನೇಶ್ ಉಮಾದಿ, ರಾಕೇಶ್ ನವಲಗುಂದ, ಮಂಜುನಾಥ ಹೊಸದು, ಸುಚೀತಕುಮಾರ ಹರಿವಾನ, ದುಂಡಪ್ಪ ಕೊಟ್ಟೂರುಶೆಟ್ಟರ್, ಸಿದ್ಧಾರ್ಥ್ ಭರಡಿ, ನಾಗರಾಜ ರಾಮಗಿರಿ, ಅರುಣಕುಮಾರ ಹೂಗಾರ, ಸಚಿನ್ ಹರಿವಾಣ, ಸಂತೋಷ ವೀರಶೆಟ್ಟಿ ಅವರ ವಿರುದ್ಧ ದೂರು ದಾಖಲಾಗಿದೆ.. ನಕಲಿ ಚಿನ್ನಾಭರಣೆ ಎಲ್ಲಿಂದ ಖರೀದಿ ಮಾಡಿದ್ರು.. ಆರೋಪಿಗಳಿಂದ ಎಷ್ಟು ಹಣ ಸೀಜ್ ಮಾಡ್ಲಾಗಿದೆ ಅನ್ನೋ ಮಾಹಿತಿ ಮುಂದಿನ ತನಿಖೆಯ ನಂತ್ರ ತಿಳಿದು ಬರಲಿದೆ.. ಪ್ರಕರಣವನ್ನ ಗಂಭೀರವಾಗಿ ಪರಿಣಗಿಸಿ ತನಿಖೆ ನಡೆಸಿ ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News