Shocking News: ಟ್ರಕ್ ಹರಿಸಿ ಡಿಎಸ್‌ಪಿ ಹತ್ಯೆ..! ಗುಂಡು ಹಾರಿಸಿ ಆರೋಪಿಯ ಬಂಧನ

ಖಚಿತ ಮಾಹಿತಿ ಮೇರೆಗೆ ಪಂಚಗಾಂವ್ ಪ್ರದೇಶದ ಅರವಳ್ಳಿ ಹಿಲ್ಸ್ ಪ್ರದೇಶದಲ್ಲಿ ಅಕ್ರಮ ಕಲ್ಲುಗಾರಿಕೆ ತಡೆಗೆ ಡಿಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

Written by - Puttaraj K Alur | Last Updated : Jul 20, 2022, 10:25 AM IST
  • ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿಎಸ್‌ಪಿ ಮೇಲೆ ಟ್ರಕ್ ಹರಿಸಿ ಹತ್ಯೆ
  • ಹರಿಯಾಣದ ಗುರುಗ್ರಾಮದಲ್ಲಿ ಆಘಾತಕಾರಿ ಘಟನೆ, ಗುಂಡು ಹಾರಿಸಿ ಆರೋಪಿ ಬಂಧನ
  • ದಾಖಲೆ ಪರಿಶೀಲನೆಗೆ ಟ್ರಕ್ ನಿಲ್ಲಿಸುವಂತೆ ಹೇಳಿದ್ದ ಡಿಎಸ್‍ಪಿ ಮತ್ತು ಸಿಬ್ಬಂದಿ ಮೇಲೆ ಟ್ರಕ್ ಹರಿಸಿದ್ದ ಚಾಲಕ
Shocking News: ಟ್ರಕ್ ಹರಿಸಿ ಡಿಎಸ್‌ಪಿ ಹತ್ಯೆ..! ಗುಂಡು ಹಾರಿಸಿ ಆರೋಪಿಯ ಬಂಧನ title=
ಟ್ರಕ್ ಹರಿಸಿ ಡಿಎಸ್‌ಪಿ ಹತ್ಯೆ..!

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿಎಸ್‌ಪಿಯನ್ನೇ ಟ್ರಕ್ ಹರಿಸಿ ಹತ್ಯೆ ಮಾಡಲಾಗಿದೆ. ತೌರು ಉಪ ಪೊಲೀಸ್ ವರಿಷ್ಠಾಧಿಕಾರಿ(DSP) ಸುರೇಂದರ್ ಸಿಂಗ್ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಿದ್ದ ಟ್ರಕ್ ಚಾಲಕನ ಮೇಲೆ ಹರಿಯಾಣ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ ನುಹ್ ಜಿಲ್ಲೆಯ ಪಚ್‌ಗಾಂವ್ ಗ್ರಾಮದ ಬಳಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾಗ ಓವರ್‌ಲೋಡ್ ಮಾಡಿದ ಟ್ರಕ್‍ಅನ್ನು ಸುರೇಂದರ್ ಸಿಂಗ್ ಮೇಲೆ ಹರಿಸಲಾಗಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ಇದನ್ನೂ ಓದಿ: ಭಾರತ-ಚೀನಾ ಗಡಿ ಬಳಿ ನಾಪತ್ತೆಯಾದ 18 ರಸ್ತೆ ಕಾರ್ಮಿಕರು: ಓರ್ವನ ಶವ ಪತ್ತೆ

ಗನ್‌ಮ್ಯಾನ್ & ಚಾಲಕ ಪ್ರಣಾಪಾಯದಿಂದ ಪಾರು

ದಾಖಲೆ ಪರಿಶೀಲನೆಗೆ ಟ್ರಕ್ ನಿಲ್ಲಿಸುವಂತೆ ಡಿಎಸ್‌ಪಿ ಸುರೇಂದರ್ ಸಿಂಗ್ ಅವರು ಚಾಲಕನಿಗೆ ಸಿಗ್ನಲ್ ಮಾಡಿದ್ದರು. ಆದರೆ ಚಾಲಕ ವೇಗವಾಗಿ ಟ್ರಕ್ ಚಲಾಯಿಸುವ ಮೂಲಕ ಅವರಿಗೆ ಗುದ್ದಿಸಿದ್ದಾನೆ. ಡಿಎಸ್‌ಪಿ ಜೊತೆಗಿದ್ದ ಗನ್‌ಮ್ಯಾನ್ ಮತ್ತು ಚಾಲಕ ಪಕ್ಕಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಡಿಎಸ್‌ಪಿ ಸಾವನ್ನಪ್ಪಿದ್ದಾರೆ. ಬಳಿಕ ಆರೋಪಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಡಿಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆದಿತ್ತು

ಖಚಿತ ಮಾಹಿತಿ ಮೇರೆಗೆ ಪಂಚಗಾಂವ್ ಪ್ರದೇಶದ ಅರವಳ್ಳಿ ಹಿಲ್ಸ್ ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ತಡೆಗೆ ಡಿಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆದರೆ, ಅಕ್ರಮ ಗಣಿಗಾರಿಕೆ ಮಾಫಿಯಾಗೆ ಡಿಎಸ್‍ಪಿ ಬಲಿಯಾಗಿದ್ದಾರೆ. ಹತ್ಯೆ ಮಾಡಿದ ಚಾಲಕ ಮತ್ತು ಟ್ರಕ್ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ಚಾಲಕನನ್ನು ಗುರುತಿಸಿದ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Viral video : ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡ ಈ ತಾತನ ರೀತಿ ಹೇಗಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News