Delhi Liquor Scam : ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಂದು ಸಿಬಿಐ ಮುಂದೆ ಹಾಜರಾಗಲಿದ್ದಾರೆ. ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ನಡೆಸಲಾಗುವುದು. ಮನೀಶ್ ಸಿಸೋಡಿಯಾ ಬಂಧನದ ಬಗ್ಗೆ ಆತಂಕ ವ್ಯಕ್ತವಾಗಿದೆ. ಇದಕ್ಕೂ ಮುನ್ನ ಮನೀಶ್ ಸಿಸೋಡಿಯಾ ಅವರನ್ನು 9 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಇಂದು ಮನೀಶ್ ಸಿಸೋಡಿಯಾ ಸಿಬಿಐ ಕಚೇರಿಗೆ ತೆರಳುವ ಮುನ್ನ ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದಕ್ಕೂ ಮೊದಲು ಫೆಬ್ರವರಿ 19 ರಂದು ಹಾಜರಾಗುವಂತೆ ಸಿಬಿಐ ಅವರಿಗೆ ಸಮನ್ಸ್ ಕಳುಹಿಸಿತ್ತು. ಸಿಸೋಡಿಯಾ ಅವರ ಬಳಿ ಹಣಕಾಸು ಇಲಾಖೆಯೂ ಇದೆ, ಆದ್ದರಿಂದ ಅವರು ಬಜೆಟ್‌ನ ಸಿದ್ಧತೆಗಳನ್ನು ಉಲ್ಲೇಖಿಸಿ ಹಿಂದಿನ ದಿನಾಂಕದಂದು ಹಾಜರಾಗಲು ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದರು. ಇದಾದ ಬಳಿಕ ಸಿಬಿಐ ಅವರಿಗೆ ಇಂದಿನ ದಿನಾಂಕವನ್ನು ನೀಡಿದೆ.
ಸಿಸೋಡಿಯಾಗೆ ಬಂಧನ ಭೀತಿ :
ಮನೀಶ್ ಸಿಯೋಡಿಯಾ ತನಿಖೆಗೆ ಸಹಕರಿಸುತ್ತಿದ್ದಾರೆ ಎಂಬ ಮಾತುಗಳು ಒಂದೆಡೆಯಾದರೆ, ಮತ್ತೆ ಕೆಲವರು ಅವರನ್ನು ಬಂಧೀಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ನಿಜವಾಗಿ ಈ ಪ್ರಕರಣದ ಆರೋಪಪಟ್ಟಿಯಲ್ಲಿ ಮನೀಶ್ ಸಿಸೋಡಿಯಾ ಹೆಸರು ಇಲ್ಲ. ಚಾರ್ಜ್ ಶೀಟ್ ಸಲ್ಲಿಕೆಯಾದ ಸುಮಾರು 3 ತಿಂಗಳ ನಂತರ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಇಂದಿನ ವಿಚಾರಣೆಯಲ್ಲಿ ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಿಬಿಐ ಉತ್ತರ ಹುಡುಕಲಿದೆ. ಇದಲ್ಲದೇ, ಮದ್ಯದ ವ್ಯಾಪಾರಿಗಳೊಂದಿಗೆ ಸಿಸೋಡಿಯಾ ಅವರ ಸಂಬಂಧದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ಹೇಳಿಕೆಯ ಮೇಲೆ ಸಿಸೋಡಿಯಾ ಭವಿಷ್ಯ ಗೊತ್ತಾಗಲಿದೆ.
ಇದನ್ನೂ ಓದಿ :Balakot Air Strike: ಹೀಗೆ ಸಿದ್ಧವಾಗಿತ್ತು ಪಾಕಿಸ್ತಾನವನ್ನೇ ನಡುಗಿಸಿದ್ದ ಬಾಲಕೋಟ್ ವೈಮಾನಿಕ ದಾಳಿಯ ಯೋಜನೆ
ಸಿಸೋಡಿಯಾ ಮುಂದೆ ಸಿಬಿಐ ಪ್ರಶ್ನೆಗಳ ದೊಡ್ಡ ಪಟ್ಟಿ
ಈ ವಿಚಾರದಲ್ಲಿ ಸಿಬಿಐ ಈಗಾಗಲೇ ಸಿಸೋಡಿಯಾ ಅವರನ್ನು ಪ್ರಶ್ನಿಸಿದೆ. ಅಕ್ಟೋಬರ್ 17ರಂದು ಸಿಬಿಐ ಅವರನ್ನು ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಈ ವೇಳೆ ಅವರ ಬೆಂಬಲಿಗರು ಸಿಬಿಐ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಸಿಸೋಡಿಯಾ ಅವರ ಆಪ್ತರು ಎನ್ನಲಾದ ದಿನೇಶ್ ಅರೋರಾ ಅವರ ತಪ್ಪೊಪ್ಪಿಗೆ ಹೇಳಿಕೆ ಹಾಗೂ ‘ದಕ್ಷಿಣ ಲಾಬಿ’ಯ ಸದಸ್ಯರು, ರಾಜಕಾರಣಿಗಳು ಹಾಗೂ ಮದ್ಯದ ದೊರೆಗಳ ವಿಚಾರಣೆಯಿಂದ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ಸಿಬಿಐ ಪ್ರಶ್ನೆಗಳ ದೊಡ್ಡ ಪಟ್ಟಿಯನ್ನು ಸಿದ್ಧಪಡಿಸಿದೆ.
ಸಿಸೋಡಿಯಾ ಮೇಲಿವೆ ಈ ಆರೋಪಗಳು
ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡುವ ದೆಹಲಿ ಸರ್ಕಾರದ ನೀತಿಯಿಂದ ಕೆಲವು ಡೀಲರ್‌ಗಳು ಲಾಭ ಪಡೆದಿದ್ದಾರೆ ಮತ್ತು ಈ ವಿತರಕರು ತಮ್ಮ ಇಚ್ಛೆಯಂತೆ ಪಾಲಿಸಿ ಮಾಡಲು ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಮನೀಶ್ ಸಿಸೋಡಿಯಾ ಅವರು ದೆಹಲಿಯ ಅಬಕಾರಿ ಇಲಾಖೆಯನ್ನು ಹೊಂದಿದ್ದಾರೆ, ಆದ್ದರಿಂದ ಅವರ ಮೇಲೂ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮೈಸೂರು - ಚೆನ್ನೈ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.