ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 928 ಮೊಬೈಲ್ಸ್ ಜಪ್ತಿ,105 ಆರೋಪಿಗಳ ಬಂಧನ

ಕೇಂದ್ರ, ಪಶ್ಚಿಮ, ದಕ್ಷಿಣ ಹಾಗೂ ಉತ್ತರ ವಿಭಾಗದ ವಿವಿಧ ಠಾಣಾ ವ್ಯಾಪ್ತಿಯ ರಾಜಾಜಿನಗರ, ನಂದಿನಿ ಲೇಔಟ್ , ಜೆ.ಜೆ.ನಗರ, ಉಪ್ಪಾರಪೇಟೆ, ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ರಾಬರಿ ಪ್ರಕರಣಗಳು ದಾಖಲಾಗಿದ್ದವು. 

Written by - VISHWANATH HARIHARA | Edited by - Yashaswini V | Last Updated : Sep 16, 2022, 02:45 PM IST
  • ಕೇಂದ್ರ ವಿಭಾಗದಲ್ಲಿ 121, ಪಶ್ಚಿಮ ವಿಭಾಗದಲ್ಲಿ 334, ದಕ್ಷಿಣ ವಿಭಾಗದಲ್ಲಿ 342, ಉತ್ತರ ವಿಭಾಗದಲ್ಲಿ 131 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ.
  • ವಶಪಡಿಸಿಕೊಂಡ ಮೊಬೈಲ್ ಗಳ ಮಾಹಿತಿಯನ್ನ ಪೊಲೀಸ್ ವೆಬ್‌ಸೈಟ್ ನಲ್ಲಿ ನಗರ ಪೊಲೀಸರು ಪ್ರಕಟಿಸಲಿದ್ದಾರೆ.
  • ಐಎಂಇಐ ನಂಬರ್ ಪರಿಶೀಲಿಸಿ ಮಾಲೀಕರು ವಾಪಾಸ್ ಪಡೆಯಬಹುದಾಗಿದೆ.
ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 928 ಮೊಬೈಲ್ಸ್ ಜಪ್ತಿ,105 ಆರೋಪಿಗಳ ಬಂಧನ title=
Mobile Robbery Case

ಬೆಂಗಳೂರು:  ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ ಬರೋಬ್ಬರಿ 928 ಕದ್ದ ಮೊಬೈಲ್ ಫೋನ್‌ಗಳು ಜಪ್ತಿ ಮಾಡಿ 105 ಆರೋಪಿಗಳ ಬಂಧಿಸಿದ್ದಾರೆ.
ಕೇಂದ್ರ, ಪಶ್ಚಿಮ, ದಕ್ಷಿಣ ಹಾಗೂ ಉತ್ತರ ವಿಭಾಗದ ವಿವಿಧ ಠಾಣಾ ವ್ಯಾಪ್ತಿಯ ರಾಜಾಜಿನಗರ, ನಂದಿನಿ ಲೇಔಟ್ , ಜೆ.ಜೆ.ನಗರ, ಉಪ್ಪಾರಪೇಟೆ, ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ರಾಬರಿ ಪ್ರಕರಣಗಳು ದಾಖಲಾಗಿದ್ದವು. 

ಮೊಬೈಲ್ ಕಳುವು ಪ್ರಕರಣಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳೆದ 1 ತಿಂಗಳ ಅವಧಿಯಲ್ಲಿ 105 ಜನ ಆರೋಪಿಗಳ ಬಂಧಿಸಿದ್ದಾರೆ. ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಟಾರ್ಗೆಟ್ ಮಾಡಿ ಬೈಕ್ ನಲ್ಲಿ ಬರುತ್ತಿದ್ದ  ಆರೋಪಿಗಳು ಮೊಬೈಲ್ ಕಸಿಯುತ್ತಿದ್ದರು. ಹಾಗೇ ಬಸ್ ಗಳಲ್ಲಿ ಓಡಾಡುವ ಪ್ರಯಾಣಿಕರ ಜೇಬು ಕತ್ತರಿಸಿ ಹಾಗೂ ಮೊಬೈಲ್ ಎಗರಿಸುತ್ತಿದ್ದರು. 

ಇತ್ತೀಚಿನ ದಿನದಲ್ಲಿ ದುಬಾರಿ ಬೆಲೆಯ ಮೊಬೈಲ್ ರಾಬರಿ ಕೇಸ್ ಗಳು ಹೆಚ್ಚಾಗಿದ್ದವು. ಹೀಗಾಗಿ ಮೊಬೈಲ್ ರಾಬರಿ ಸಂಬಂಧ ಎಫ್ ಐಆರ್ ದಾಖಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದರು. 

ಇದನ್ನೂ ಓದಿ- ಹಣ ಕೊಡದಿದ್ರೆ ಕೊಲೆ ಮಾಡ್ತೀನಿ: ವ್ಯಾಪಾರಿಗೆ ರೌಡಿ ಶೀಟರ್ ಬೆದರಿಕೆ

ಮೊಬೈಲ್ ಲೋಕೇಷನ್, ಸಿಸಿಟಿವಿ ಹಾಗೂ ರಿಸಿವರ್ ಗಳನ್ನು ಆಧರಿಸಿ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಒಂದೇ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಲೋಹಿತ್ ಹಾಗೂ ತಂಡ ಒಬ್ಬನಿಂದಲೇ ನೂರಾರು ಮೊಬೈಲ್ ಜಪ್ತಿ ಮಾಡಿದ್ದಾರೆ. ಕಳ್ಳರು ಮೊಬೈಲ್ ಗಳನ್ನು ಪ್ಯಾಕ್ ಮಾಡಿ ಆಂಧ್ರಗೆ ಸರಬರಾಜು ಮಾಡುತ್ತಿದ್ದರು ಎಂದು ತನಿಖೆ ವೇಳೆ ಬಯಲಾಗಿದೆ.

ಕೇಂದ್ರ ವಿಭಾಗದಲ್ಲಿ 121, ಪಶ್ಚಿಮ ವಿಭಾಗದಲ್ಲಿ 334, ದಕ್ಷಿಣ ವಿಭಾಗದಲ್ಲಿ 342, ಉತ್ತರ ವಿಭಾಗದಲ್ಲಿ 131 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮೊಬೈಲ್ ಗಳ ಮಾಹಿತಿಯನ್ನ ಪೊಲೀಸ್ ವೆಬ್‌ಸೈಟ್ ನಲ್ಲಿ ನಗರ ಪೊಲೀಸರು ಪ್ರಕಟಿಸಲಿದ್ದಾರೆ. ಐಎಂಇಐ ನಂಬರ್ ಪರಿಶೀಲಿಸಿ ಮಾಲೀಕರು ವಾಪಾಸ್ ಪಡೆಯಬಹುದಾಗಿದೆ.

ಇದನ್ನೂ ಓದಿ- Alliance University Case : ಬಂಧನ ಭೀತಿಯಲ್ಲಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ!

ವಿಶೇಷ ಅಂದರೆ ಆರೋಪಿಗಳು ಕದ್ದ ಮೊಬೈಲ್ ಗಳನ್ನು 25 ಸಾವಿರ 50 ಸಾವಿರ ,1 ಲಕ್ಷ,  ಎಷ್ಟೇ ಬೆಲೆ ಇರಲಿ ಕೇವಲ ಎರಡು-ಮೂರು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಬಳಿಕ ಆ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ರು ಎಂಬುದು ಪೊಲೀಸರು ತನಿಖೆ ವೇಳೆ ಬಯಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News