ವರದಕ್ಷಿಣೆ ಕಿರುಕುಳ ಆರೋಪ: ಎಂಟು ತಿಂಗಳ ಗರ್ಭಿಣಿ ಆತ್ಮಹತ್ಯೆ!

Allegation of dowry harassment: 2 ವರ್ಷಗಳ ಹಿಂದೆ ಕನಕಗಿರಿಯ ಶರತ್‌ರಾಜ್‌ ಜೊತೆಗೆ ಚೈತ್ರಾಳ ವಿವಾಹವಾಗಿತ್ತು. ಆದರೆ ಗಂಡನ ಮನೆಯವರ ಕಿರುಕುಳ ತಾಳಲಾರದೆ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಾಲ್ವರ ವಿರುದ್ಧ ಆಕೆಯ ಪೋಷಕರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ​

Written by - Puttaraj K Alur | Last Updated : Sep 6, 2024, 08:40 PM IST
  • ವರದಕ್ಷಿಣೆ ಕಿರುಕುಳ ಆರೋಪ; ಎಂಟು ತಿಂಗಳ ಗರ್ಭಿಣಿ ಆತ್ಮಹತ್ಯೆ
  • ಮೈಸೂರಿನ ಕನಕಗಿರಿಯಲ್ಲಿ 23 ವರ್ಷದ ಚೈತ್ರಾ ಆತ್ಮಹತ್ಯೆಗೆ ಶರಣು
  • ಪತಿ ಶರತ್‌ರಾಜ್​ರನ್ನು ವಶಕ್ಕೆ ಪಡೆದಿರುವ ವಿದ್ಯಾರಣ್ಯಪುರಂ ಪೊಲೀಸರು
ವರದಕ್ಷಿಣೆ ಕಿರುಕುಳ ಆರೋಪ: ಎಂಟು ತಿಂಗಳ ಗರ್ಭಿಣಿ ಆತ್ಮಹತ್ಯೆ! title=
ಎಂಟು ತಿಂಗಳ ಗರ್ಭಿಣಿ ಆತ್ಮಹತ್ಯೆ!

ಮೈಸೂರು: ವರದಕ್ಷಿಣೆ ಕಿರುಕುಳ ಆರೋಪಕ್ಕೆ ಎಂಟು ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮೈಸೂರಿನ ಕನಕಗಿರಿಯಲ್ಲಿ ನಡೆದಿದೆ. 

ಚೈತ್ರಾ ಅಲಿಯಾಸ್​ ಚಿಕ್ಕದೇವಿ(23) ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ. ಗಂಡ ಶರತ್‌ರಾಜ್, ಮಾವ ಮುತ್ತುರಾಜ್, ಅತ್ತೆ ಪದ್ಮ ಮತ್ತು ಚಿಕ್ಕತ್ತೆ ಮಂಜುಳಾ ವಿರುದ್ಧ ಆರೋಪ ಕೇಳಿಬಂದಿದೆ.  

ಇದನ್ನೂ ಓದಿ: ಹಾಸನದಲ್ಲಿ ಏಳು ಪತ್ರಕರ್ತ ರಿಗೆ ಸಣ್ಣಪುಟ್ಟ ಗಾಯ

ಪ್ರಕರಣ ಸಂಬಂಧ ಚೈತ್ರಾ ಪತಿ ಶರತ್‌ರಾಜ್​ರನ್ನು ವಿದ್ಯಾರಣ್ಯಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

2 ವರ್ಷಗಳ ಹಿಂದೆ ಕನಕಗಿರಿಯ ಶರತ್‌ರಾಜ್‌ ಜೊತೆಗೆ ಚೈತ್ರಾಳ ವಿವಾಹವಾಗಿತ್ತು. ಆದರೆ ಗಂಡನ ಮನೆಯವರ ಕಿರುಕುಳ ತಾಳಲಾರದೆ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಾಲ್ವರ ವಿರುದ್ಧ ಆಕೆಯ ಪೋಷಕರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಇದನ್ನೂ ಓದಿ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಚಾಲನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News