ನೀವು ರಸ್ತೆಬದಿ ಸಿಮ್ ಖರೀದಿಸುತ್ತಿರಾ? ಹಾಗಾದ್ರೆ ಈ ಖತರ್ನಾಕ್ ಸ್ಟೋರಿ ಓದಲೇ ಬೇಕು

ಅನಧಿಕೃತವಾಗಿ ಆ್ಯಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಸಿಸಿಬಿಯ ಪೊಲೀಸರು ಬಂಧಿಸಿದ್ದಾರೆ.

Written by - VISHWANATH HARIHARA | Edited by - Chetana Devarmani | Last Updated : Sep 9, 2022, 05:01 PM IST
  • ಆ್ಯಕ್ಟಿವೇಟೆಡ್ ಸಿಮ್ ಕಾರ್ಡುಗಳ ಮಾರಾಟ
  • ಆರೋಪಿಯನ್ನ ಬಂಧಿಸಿದ ಸಿಸಿಬಿಯ ಪೊಲೀಸರು
  • ಕಲಬುರಗಿ ಮೂಲದ ಮಲ್ಲಿಕಾರ್ಜುನ್ ಬಂಧಿತ ಆರೋಪಿ
ನೀವು ರಸ್ತೆಬದಿ ಸಿಮ್ ಖರೀದಿಸುತ್ತಿರಾ? ಹಾಗಾದ್ರೆ ಈ ಖತರ್ನಾಕ್ ಸ್ಟೋರಿ ಓದಲೇ ಬೇಕು  title=
ಸಿಮ್ ಕಾರ್ಡುಗಳ ಮಾರಾಟ

ಬೆಂಗಳೂರು : ಅನಧಿಕೃತವಾಗಿ ಆ್ಯಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಸಿಸಿಬಿಯ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮೂಲದ ಮಲ್ಲಿಕಾರ್ಜುನ್ ಬಂಧಿತ ಆರೋಪಿ. ಈತ ರೋಡ್ ಸೈಡಲ್ಲಿ ಜಿಯೋ ಸಿಮ್ ಕಾರ್ಡುಗಳನ್ನ ಮಾರಾಟ ಮಾಡುತ್ತಿದ್ದ. 

ಇದನ್ನೂ ಓದಿ : ಮ್ಯಾಕ್ ಸ್ಟಾರ್ ಪ್ರಕರಣದಲ್ಲಿ Yes Bank ಗೆ ಭಾರೀ ಹಿನ್ನಡೆ, NCLAT ದಿವಾಳಿತನದ ಆದೇಶ ರದ್ದು

ತನ್ನ ಬಳಿ ನಂಬರ್ ಪೋರ್ಟ್ ಮಾಡಿಸಲು ಬರುತ್ತಿದ್ದವರ ದಾಖಲೆಗಳನ್ನ ಮೊಬೈಲ್ ಫೋನ್‌ನಲ್ಲಿ‌ ಫೋಟೋ ಕ್ಲಿಕ್ಕಿಸಿಕೊಂಡು ಅದೇ ದಾಖಲೆಗಳಿಂದ ಅನಧಿಕೃತವಾಗಿ ಇತರೆ ಸಿಮ್ ಕಾರ್ಡುಗಳನ್ನ ಆ್ಯಕ್ಟಿವೇಟ್ ಮಾಡುತ್ತಿದ್ದ. ಬಳಿಕ ಅವುಗಳನ್ನ ಹೆಚ್ಚು ಬೆಲೆಗೆ ಇತರರಿಗೆ ಮಾರಾಟ ಮಾಡುತ್ತಿದ್ದ.

ದಾಖಲೆಗಳನ್ನು ಕೊಡದೇ ಇರೋರಿಂದ ಪ್ರತಿ ಸಿಮ್ ಕಾರ್ಡಿಗೆ ಒಂದು ಸಾವಿರದಿಂದ ಒಂದೂವರೆ ಸಾವಿರ ರೂ ಹಣ ಪಡೆಯುತ್ತಿದ್ದ. ಸದ್ಯ ಆರೋಪಿಯನ್ನ ಬಂಧಿಸಿರುವ ಸಿಸಿಬಿ ಪೊಲೀಸರು ಬಂಧಿತನಿಂದ ನೂರಕ್ಕು ಹೆಚ್ಚು ಸಿಮ್ ಕಾರ್ಡುಗಳನ್ನ ವಶಕ್ಕೆ ಪಡೆದಿದ್ದಾರೆ.ಘಟನೆ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಕಾರ್ಮಿಕರ ಕೈಯಿಂದ ಮಲ ಸ್ವಚ್ಛತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News