ಕಳ್ಳತನ, ಪಾರ್ಟಿ ಮಾಡೊದೇ ಜೀವನ ಎಂದುಕೊಂಡಿದ್ದ ಯುವಕ ಬೀದಿ ಹೆಣವಾದ ಕಥೆ!

ಆತ ಸದಾ ಕಾಲ ಮನೆ ಬಿಟ್ಟು ಬೀದಿ ತಿರುಗುತ್ತಿದ್ದ. ಎಷ್ಟು ಬೇಡ ಅಂದ್ರು ಕೇಳದೆ ರಾತ್ರಿಯಲ್ಲಾ ಸ್ನೇಹಿತರೊಂದಿಗೆ ಪಾರ್ಟಿ ಮಾಡಿಕೊಂಡು ಮನೆನೇ ಸೇರ್ತಾ ಇರಲಿಲ್ಲಾ. ಹೀಗೆ ಊರೂರು ತಿರುಗುತ್ತಿದ್ದವನು ಬೀದಿ ಹೆಣವಾಗಿದ್ದಾನೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ. 

Written by - Yashaswini V | Last Updated : Oct 14, 2022, 07:31 AM IST
  • ಮೈಸೂರಿನ ಕುಂಬಾರಕೊಪ್ಪಲಿನ ನಿವಾಸಿ ಸುನೀಲ್ ಕೊಲೆಯಾದ ಯುವಕ.
  • ಈತ ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಜೀವನ ನಡೆಸುತ್ತಿದ್ದ
  • ಈತನ ವಿರುದ್ದ ಮೈಸೂರಿನ ದೇವರಾಜ ಪೊಲೀಸ್ ಠಾಣೆ ಸೇರಿದಂತೆ ಬೇರೆ ಬೇರೆ ಠಾಣೆಯಲ್ಲಿ ಕಳ್ಳತನ ಸುಲಿಗೆ ಪ್ರಕರಣ ದಾಖಲಾಗಿದೆ.
ಕಳ್ಳತನ, ಪಾರ್ಟಿ ಮಾಡೊದೇ ಜೀವನ ಎಂದುಕೊಂಡಿದ್ದ ಯುವಕ ಬೀದಿ ಹೆಣವಾದ ಕಥೆ! title=
ಸಾಂದರ್ಭಿಕ ಚಿತ್ರ

ಮೈಸೂರು: ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕ. ನೀರಿನಂತೆ ಹರಿಯುತ್ತಿರುವ ನೆತ್ತರು.  ಮೈಸೂರಿನ‌ ಹೃದಯ ಭಾಗ ದೇವರಾಜ ಮಾರುಕಟ್ಟೆ ಬಳಿ ದುಷ್ಕರ್ಮಿಗಳು ಯುವಕನೊಬ್ಬನನಿಗೆ ಬ್ಲೇಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.   ಕಳ್ಳತನ, ಪಾರ್ಟಿ ಮಾಡೊದೇ ಜೀವನ ಎಂದುಕೊಂಡಿದ್ದ ಯುವಕ ಬೀದಿ ಹೆಣವಾದ ಕಥೆಯಿದು.

ಮೈಸೂರಿನ ಕುಂಬಾರಕೊಪ್ಪಲಿನ ನಿವಾಸಿ ಸುನೀಲ್ ಕೊಲೆಯಾದ ಯುವಕ.  ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತನ ವಿರುದ್ದ ಮೈಸೂರಿನ ದೇವರಾಜ ಪೊಲೀಸ್ ಠಾಣೆ ಸೇರಿದಂತೆ ಬೇರೆ  ಬೇರೆ ಠಾಣೆಯಲ್ಲಿ ಕಳ್ಳತನ ಸುಲಿಗೆ ಪ್ರಕರಣ ದಾಖಲಾಗಿದೆ. ಬುಧವಾರ (ಅಕ್ಟೋಬರ್ 12)  ರಾತ್ರಿ ಈತನನ್ನ ದೇವರಾಜ ಮಾರುಕಟ್ಟೆ ಬಳಿ ಭೀಕರವಾಗಿ ಕೊಲೆ ಮಾಡಲಾಗಿದೆ.

ಇದನ್ನೂ ಓದಿ- Bangalore Crime : ಹೌಸಿಂಗ್ ಸೊಸೈಟಿ ಹೆಸರಲ್ಲಿ ವಂಚನೆ : ಸಿಲಿಕಾನ್‌ ಸಿಟಿಯಲ್ಲಿ ಇಬ್ಬರ ಅರೆಸ್ಟ್  

ವಾಸ್ತವವಾಗಿ, ಸುನೀಲ್ ಮನೆಗೆ  ಬರ್ತಾ ಇರಲಿಲ್ಲಾ. ಯಾವಗಲೂ ಸ್ನೇಹಿತರು ಪಾರ್ಟಿ ಅಂಥ ಸುತಾಡ್ತಿದ್ದ. ಕಳ್ಳತನ ಮಾಡಿದ ವಸ್ತುವಿನಿಂದ ಬಂದ ಹಣದಲ್ಲಿ  ಕುಡಿದು ಸುತ್ತಾಡಿಕೊಂಡು ಇರುತ್ತಿದ್ದ. ಮನೆಯಲ್ಲೇ ಇರ್ತಿಲಿಲ್ಲಾ. ಬುಧವಾರ ರಾತ್ರಿ ಮಗ ಕೊಲೆಯಾಗಿರುವ ಬಗ್ಗೆ ಫೋನ್ ಬಂದಿತ್ತು. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ಸುನೀಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಕಂಡ ಪೋಷಕರು, ನನ್ನ ಮಗನನ್ನ ಯಾರು ಕೊಲೆ ಮಾಡಿದ್ದಾರೆ ಗೊತ್ತಿಲ್ಲಾ. ಮಗನನ್ನು ಕೊಲೆ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕೆಂದು ಒತ್ತಾಯಿಸಿದ್ದಾರೆ.
 
ಇದನ್ನೂ ಓದಿ- Bangalore : ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ.!

ಒಟ್ಟಾರೆ ಕಳ್ಳತನ, ಪಾರ್ಟಿ ಮಾಡೊದೇ ಜೀವನ ಎಂದುಕೊಂಡಿದ್ದ ಸುನೀಲ್ ಬೀದಿ ಹೆಣ ಆಗಿರೊದು ದುರಂತವೇ ಸರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News