ಮುಂಬೈ ಪೊಲೀಸರು ಎಂದು ಕರೆ ಮಾಡಿ ಶಿಕ್ಷಕನಿಗೆ ಲಕ್ಷ ಲಕ್ಷ ಮೋಸ

ಶನಿವಾರ ಫೆಡೆಕ್ಸ್ ಕೊರಿಯರ್ ಕಂಪನಿಯ ಪ್ರತಿನಿಧಿ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ 'ನಿಮ್ಮ ಹೆಸರಿನ ಕೊರಿಯರ್ ಪಾರ್ಸೆಲ್ ಬಂದಿದೆ. ಅದರಲ್ಲಿ ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್, ಐದು ಪಾಸ್‌ಪೋರ್ಟ್, ಐದು ಕ್ರೆಡಿಟ್ ಕಾರ್ಡ್ಸ್, ಒಂದು ಲ್ಯಾಪ್‌ಟಾಪ್ ಇದೆ ಎಂದಿದ್ದ. 

Written by - VISHWANATH HARIHARA | Edited by - Yashaswini V | Last Updated : Sep 5, 2023, 02:46 PM IST
  • ಫೆಡೆಕ್ಸ್ ಕೊರಿಯರ್ ಕಂಪನಿಯ ಪ್ರತಿನಿಧಿ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿ
  • ನಂತರ ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಸಿಬ್ಬಂದಿಯೆಂದು ಕರೆ ಮಾಡಿದ್ದ ಮತ್ತೋರ್ವ ಆರೋಪಿ
  • ಯಾರೋ ನಿಮ್ಮ ಹೆಸರು ದಾಖಲೆಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದ ವ್ಯಕ್ತಿ
ಮುಂಬೈ ಪೊಲೀಸರು ಎಂದು ಕರೆ ಮಾಡಿ ಶಿಕ್ಷಕನಿಗೆ ಲಕ್ಷ ಲಕ್ಷ ಮೋಸ title=

ಬೆಂಗಳೂರು: ಶಿಕ್ಷಕರೊಬ್ಬರಿಗೆ ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ಎಂದು ಕರೆ ಮಾಡಿ 32.25 ಲಕ್ಷ ರೂ. ದೋಚಿರುವ ಪ್ರಕರಣ ಬೆಳಕಿಗೆ ಬಂದಿದೆ. 50 ವರ್ಷ ವಯಸ್ಸಿನ ಚತುರ ರಾವ್ ಎಂಬ ಶಿಕ್ಷಕ ನೀಡಿರುವ ದೂರಿನನ್ವಯ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ಫೆಡೆಕ್ಸ್ ಕೊರಿಯರ್ ಕಂಪನಿಯ ಪ್ರತಿನಿಧಿ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ 'ನಿಮ್ಮ ಹೆಸರಿನ ಕೊರಿಯರ್ ಪಾರ್ಸೆಲ್ ಬಂದಿದೆ. ಅದರಲ್ಲಿ ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್, ಐದು ಪಾಸ್‌ಪೋರ್ಟ್, ಐದು ಕ್ರೆಡಿಟ್ ಕಾರ್ಡ್ಸ್, ಒಂದು ಲ್ಯಾಪ್‌ಟಾಪ್ ಇದೆ. ಪ್ರಕರಣವನ್ನ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ನೀವು ವಿಡಿಯೋ ಕರೆಯ ಮೂಲಕ ಮಾತನಾಡಬೇಕಾಗುತ್ತದೆ. ಆದ್ದರಿಂದ ಸ್ಕೈಪ್ ಆ್ಯಪ್ ಡೌನ್‌ಲೋಡ್‌ ಮಾಡಿ ಎಂದಿದ್ದ. 

ಇದನ್ನೂ ಓದಿ- ಗಂಡನ ಮೇಲೆ ಮಾಟಮಂತ್ರ ಮಾಡಿಸಿದ ಹೆಂಡತಿ: ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಗಂಡ

ನಂತರ ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಸಿಬ್ಬಂದಿಯೆಂದು ಕರೆ ಮಾಡಿದ್ದ ಮತ್ತೋರ್ವ ಆರೋಪಿ ಯಾರೋ ನಿಮ್ಮ ಹೆಸರು ದಾಖಲೆಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ತಿಳಿದುಕೊಳ್ಳಬೇಕಾದರೆ ಹಣವನ್ನ ವರ್ಗಾಯಿಸಬೇಕು ಎಂದಿದ್ದ. 

ಇದನ್ನೂ ಓದಿ- ಚೀಟಿ ಹಾಕಿಸಿಕೊಂಡು ಚೀಟಿಂಗ್ ಮಾಡಿದ ಫ್ರಾಡ್ ಫ್ಯಾಮಿಲಿ

ಆರೋಪಿಗಳ ಸಂಚು ಅರಿಯದ ಚತುರ ರಾವ್ ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ 32.25 ಲಕ್ಷ ವರ್ಗಾಯಿಸಿದ್ದರು. ನಂತರ ಆರೋಪಿಗಳು ಸಂಪರ್ಕಕ್ಕೆ ಸಿಗದೆ ಯಾಮಾರಿಸಿದ್ದಾರೆ. ಸದ್ಯ ಹಣ ಕಳೆದುಕೊಂಡ ಚತುರ ರಾವ್ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News