ಆನೇಕಲ್: ಆನೇಕಲ್‌ನಲ್ಲಿ 22 ವರ್ಷದ ವಿಲೇಜ್ ಅಕೌಂಟೆಂಟ್ ನೇಣಿಗೆ ಶರಣಾಗಿದ್ದು, ಯುವತಿ ಸಾವಿನ ಸುತ್ತ ಅನುಮಾನ ಮೂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಯುವತಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬಳ್ಳಾರಿ ಜಿಲ್ಲೆ ಮೂಲದ ಅಲಿಯಾ ಅಂಜುಂ ಅಣ್ಣಿಗೇರಿ ಮೃತ ಯುವತಿ. ಆನೇಕಲ್ ಪಟ್ಟಣದ ಪೊಲೀಸ್ ಠಾಣೆ ಸಮೀಪದ ಮುನಿವೀರಪ್ಪ ಗಲ್ಲಿಯಲ್ಲಿರುವ ಶ್ರೀನಿವಾಸ್ ರೆಡ್ಡಿ ಎಂಬುವವರ ಬಿಲ್ಡಿಂಗ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಅಲಿಯಾರ ತಂದೆ- ತಾಯಿ ಊರಿನಲ್ಲಿ ವಾಸವಾಗಿದ್ದಾರೆ. ಅಣ್ಣ-ತಂಗಿ ಇಬ್ಬರೇ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.
ಇದನ್ನೂ ಓದಿ: Shiggaon Constituency : ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿಗೆ ಶಾಕ್ ನೀಡಿದ ಕಾಂಗ್ರೆಸ್ ನಾಯಕರು!
ಸರ್ಜಾಪುರದಲ್ಲಿ ತಂಗಿ ಅಲಿಯಾ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಹಿನ್ನೆಲೆ ಆಕೆಯ ಮದುವೆ ಆಗುವವರೆಗೆ ಜೊತೆಯಲ್ಲಿರುವ ಉದ್ದೇಶದಿಂದ ಅಣ್ಣ ಆಕೆ ಜೊತೆಗಿದ್ದನಂತೆ. ಆದರೆ ಕೆಲಸದ ನಿಮತ್ತ ಅಲಿಯಾಳ ಅಣ್ಣ ಬಳ್ಳಾರಿಯ ಹಳ್ಳಿಗೆ ಹೋಗಿದ್ದ. ಮನೆಯಲ್ಲಿ ಇಂದು ಒಂಟಿಯಾಗಿದ್ದಾಗ ಅಲಿಯಾ ನೇಣಿಗೆ ಶರಣಾಗಿದ್ದಾಳೆ.
ಘಟನೆ ಕುರಿತು ಕಟ್ಟಡದ ಮಾಲೀಕರು ಆನೇಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಯುವತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ: ಭಾರತದ ಪ್ರಯಾಣಿಕ ಸಾರಿಗೆ ದೈತ್ಯರಾದ ಓಲಾ ಊಬರ್ ಗಳನ್ನು ನಡುಗಿಸಿದ ಒಎನ್‌ಡಿಸಿಯ ಶೂನ್ಯ ಕಮಿಷನ್ ಸೇವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.