Second Phase Of UGC-NET Examination Postponed : ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ NTA, ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಹಂತ 2 ಪರೀಕ್ಷೆಯನ್ನು ಮುಂದೂಡಿದೆ. ಇದಕ್ಕೂ ಮೊದಲು UGC NET ಹಂತ 2ರ ಪರೀಕ್ಷೆಯನ್ನು ಆಗಸ್ಟ್ 12 ರಿಂದ ಆಗಸ್ಟ್ 14, 2022 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಇದೀಗ ಈ ಪರೀಕ್ಷೆಯನ್ನು ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಸಲಾಗುವುದು ಎನ್ನಲಾಗಿದೆ. ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ಈ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ugcnet.nta.nic ನಲ್ಲಿ ಬಿಡುಗಡೆ ಮಾಡಲಾಗಿರುವ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಇದನ್ನೂ ಓದಿ-8th Pay Commission: 8ನೇ ವೇತನ ಆಯೋಗ ರಚನೆಯ ಕುರಿತು ಸಂಸತ್ತಿಗೆ ಸರ್ಕಾರ ನೀಡಿರುವ ಮಾಹಿತಿ ಏನು?
ಪರೀಕ್ಷೆಯ ಮಾದರಿ ಹೇಗಿರುತ್ತದೆ?
ಯುಜಿಸಿ ನೆಟ್ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಎಲ್ಲಾ ಅಭ್ಯರ್ಥಿಗಳಿಗೂ ಪತ್ರಿಕೆ-1 ಒಂದೇ ರೀತಿಯದ್ದಾಗಿರುತ್ತದೆ. ಇದರಲ್ಲಿ 100 ಅಂಕಗಳ 50 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದೇ ವೇಳೆ ಪೇಪರ್-2 ಅಭ್ಯರ್ಥಿಗಳು ಆಯ್ಕೆ ಮಾಡಿದ ಡೊಮೇನ್ ಆಗಿರುತ್ತದೆ. ಇದರಲ್ಲಿ 200 ಅಂಕಗಳ 100 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡೂ ಪತ್ರಿಕೆಗಳನ್ನು ಬಿಡಿಸಲು ಅಭ್ಯರ್ಥಿಗಳಿಗೆ 3 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.
ಇದನ್ನೂ ಓದಿ-Viral Video: ಮಹಿಳೆಯ ಮೇಲೆ ಪ್ರೀತಿಯ ಸುರಿಮಳೆಗೈದ ಬೀದಿ ನಾಯಿಗಳು, ವಿಡಿಯೋ ನೋಡಿ
ಇಲ್ಲಿ ವಿವರಗಳನ್ನು ಪರಿಶೀಲಿಸಿ
ಡಿಸೆಂಬರ್ 2021 ಮತ್ತು ಜೂನ್ 2022 ರ UGC NET ಪರೀಕ್ಷೆಗಾಗಿ NTA ಸೈಕಲ್‌ಗಳನ್ನು ವಿಲೀನಗೊಳಿಸಿದೆ. ಮೊದಲ ಹಂತವನ್ನು ಜುಲೈ 08, 09, 11 ಮತ್ತು 12 ರಂದು ನಡೆಸಲಾಗಿದೆ ಮತ್ತು ಜುಲೈ 7 ರಂದು ಪ್ರವೇಶ ಪತ್ರಗಳನ್ನು ವಿತರಿಸಲಾಗಿದೆ. ಈಗ ಮುಂದಿನ ಹಂತದ ಪರೀಕ್ಷೆಯನ್ನು ಆಗಸ್ಟ್ 12, 13 ಮತ್ತು 14 ರಂದು ನಡೆಸಲು ನಿರ್ಧರಿಸಲಾಗಿತ್ತು, ಆದರೆ ಈಗ ಈ ಪರೀಕ್ಷೆಯನ್ನು ಮುಂದೂಡಲಾಗಿದೆ ಮತ್ತು ಈ ಪರೀಕ್ಷೆಯನ್ನು ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 30 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ಅಭ್ಯರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಾಗಿ NTA ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.