SBI Recruitment: ಸ್ಟೇಟ್ ಬ್ಯಾಂಕ್‌ನಲ್ಲಿ ಸರ್ಕಾರಿ ಕೆಲಸ, ಇಂದೇ ಅರ್ಜಿ ಸಲ್ಲಿಸಿರಿ

ಆಸಕ್ತ ಅಭ್ಯರ್ಥಿಗಳು 12 ಜೂನ್ 2022ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದ ನಂತರ ಅಭ್ಯರ್ಥಿಗಳು ಅರ್ಜಿ ನಮೂನೆಯ ಪ್ರಿಂಟ್‍ಔಟ್ ತೆಗೆದುಕೊಳ್ಳಬಹುದು.

Written by - Puttaraj K Alur | Last Updated : Jun 4, 2022, 01:10 PM IST
  • ವಿವಿಧ ಹುದ್ದೆಗಳ ನೇಮಕಾತಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಧಿಸೂಚನೆ
  • ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 32 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
  • ಅಗತ್ಯ ವಿದ್ಯಾರ್ಹತೆ & ಅನುಭವ ಹೊಂದಿರುವ ಅಭ್ಯರ್ಥಿಗಳು ಜೂನ್ 12 ರವರೆಗೆ ಅರ್ಜಿ ಸಲ್ಲಿಸಬಹುದು
SBI Recruitment: ಸ್ಟೇಟ್ ಬ್ಯಾಂಕ್‌ನಲ್ಲಿ ಸರ್ಕಾರಿ ಕೆಲಸ, ಇಂದೇ ಅರ್ಜಿ ಸಲ್ಲಿಸಿರಿ title=
ಒಟ್ಟು 32 ಹುದ್ದೆಗಳಿಗೆ ನೇಮಕಾತಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 32 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಗತ್ಯ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳು 12 ಜೂನ್ 2022ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಎಜಿಎಂ, ಡೆಪ್ಯುಟಿ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳ ಒಟ್ಟು 32 ಹುದ್ದೆಗಳಿವೆ. ಅಭ್ಯರ್ಥಿಗಳ ಆಯ್ಕೆಯು ಶಾರ್ಟ್‌ಲಿಸ್ಟ್ ಮತ್ತು ಸಂದರ್ಶನದ ಆಧಾರದ ಮೇಲೆ ಇರುತ್ತದೆ. ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ಅನುಭವ, ಆಯ್ಕೆ ಮಾನದಂಡ ಮತ್ತು ಇತರ ವಿವರಗಳನ್ನು ಇಲ್ಲಿ ಪರಿಶೀಲಿಸಿರಿ.

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ವಿವಿಧ ಇಲಾಖೆಗಳಲ್ಲಿ 4 ಎಜಿಎಂ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 2 ಮ್ಯಾನೇಜರ್ ಹುದ್ದೆ, 6 ಡೆಪ್ಯುಟಿ ಮ್ಯಾನೇಜರ್ (ನೆಟ್ ವರ್ಕ್ ಇಂಜಿನಿಯರ್), 6 ಡೆಪ್ಯುಟಿ ಮ್ಯಾನೇಜರ್ (ಸೈಟ್ ಇಂಜಿನಿಯರ್ ಕಮಾಂಡ್ ಸೆಂಟರ್) ಮತ್ತು 5 ಡೆಪ್ಯುಟಿ ಮ್ಯಾನೇಜರ್ (ಸಂಖ್ಯಾಶಾಸ್ತ್ರಜ್ಞ) ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು sbi.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: PM Shri schools : ಮೋದಿ ಸರ್ಕಾರ ಪ್ರಾರಂಭಿಸಲಿದೆ ಅತ್ಯಾಧುನಿಕ 'ಪಿಎಂ ಶ್ರೀ' ಶಾಲೆಗಳು!

ವಯೋಮಿತಿ ಬಗ್ಗೆ ಹೇಳುವುದಾದರೆ, ಎಜಿಎಂ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯೋಮಿತಿಯನ್ನು 45 ವರ್ಷ, ಅದೇ ರೀತಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ  38 ವರ್ಷ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು 35 ವರ್ಷಕ್ಕೆ ನಿಗದಿಪಡಿಸಲಾಗಿದೆ.

ಯಾವ ಹುದ್ದೆಗೆ ಅರ್ಹತೆ ಏನು?

AGM (IT-Tech ಕಾರ್ಯಾಚರಣೆಗಳು) ಅಭ್ಯರ್ಥಿಯು BE/B.Tech ಮತ್ತು ಅದರ ಸಮಾನ ಪದವಿ ಹೊಂದಿರುವವರಾಗಿರಬೇಕು ಮತ್ತು ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.

ಡೆಪ್ಯುಟಿ ಮ್ಯಾನೇಜರ್ (ಸಂಖ್ಯಾಶಾಸ್ತ್ರಜ್ಞ) ಅಭ್ಯರ್ಥಿಯು 60% ಅಂಕಗಳೊಂದಿಗೆ Statistics/ Applied Statistics/ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದಿರಬೇಕು.

ಡೆಪ್ಯುಟಿ ಮ್ಯಾನೇಜರ್ (ಸೈಟ್ ಇಂಜಿನಿಯರ್ ಕಮಾಂಡ್ ಸೆಂಟರ್) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ BE/B.Tech ಅಥವಾ ಅದಕ್ಕೆ ಸಮಾನವಾದ ಪದವಿಯನ್ನು ಹೊಂದಿರಬೇಕು.

ಡೆಪ್ಯುಟಿ ಮ್ಯಾನೇಜರ್ (ನೆಟ್‌ವರ್ಕ್ ಇಂಜಿನಿಯರ್) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು BE/B.Tech ಅಥವಾ ಅದಕ್ಕೆ ಸಮಾನವಾದ ಪದವಿಯನ್ನು ಸಂಬಂಧಿತ ವಿಷಯದಲ್ಲಿ ಹೊಂದಿರಬೇಕು.

ಮ್ಯಾನೇಜರ್ (IT ಸೆಕ್ಯುರಿಟಿ ಎಕ್ಸ್‌ಪರ್ಟ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ BE / B.Tech ಅಥವಾ ಅದರ ಸಮಾನ ಪದವಿಯನ್ನು ಹೊಂದಿರಬೇಕು. ಅದೇ ರೀತಿ ಅಭ್ಯರ್ಥಿಯು ಕನಿಷ್ಠ ಶೇ.60ರಷ್ಟು ಅಂಕಗಳನ್ನು ಹೊಂದಿರಬೇಕು.

ಇದನ್ನೂ ಓದಿFCI Recruitment 2022 : FCI ನಲ್ಲಿ 4700 ಹುದ್ದೆಗಳಿಗೆ ಅರ್ಜಿ, ತಿಂಗಳಿಗೆ ₹64,000 ವರೆಗೆ ಸಂಬಳ!

ಅರ್ಜಿ ಸಲ್ಲಿಸಲು ಕೊನೆ ದಿನಾಂಕ?

ಆಸಕ್ತ ಅಭ್ಯರ್ಥಿಗಳು 12 ಜೂನ್ 2022ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದ ನಂತರ ಅಭ್ಯರ್ಥಿಗಳು ಅರ್ಜಿ ನಮೂನೆಯ ಪ್ರಿಂಟ್‍ಔಟ್ ತೆಗೆದುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News