Railway Recruitment 2022 : ರೈಲ್ವೆ ಇಲಾಖೆಯಲ್ಲಿ ದ್ವಿತೀಯ PUC ಆದವರಿಗೆ ಭರ್ಜರಿ ಉದ್ಯೋಗಾವಕಾಶ!

ಜುಲೈ 8 ರಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕ 28 ಜುಲೈ 2022 ಎಂದು ಕೊನೆಯ ದಿನವಾಗಿದೆ.

Written by - Zee Kannada News Desk | Last Updated : Jul 11, 2022, 10:14 PM IST
  • ರೈಲ್ವೆ ಇಲಾಖೆಯಲ್ಲಿ ಉದ್ಯೋಗ
  • ವೆಸ್ಟ್ ಸೆಂಟ್ರಲ್ ರೈಲ್ವೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ
  • ವೆಸ್ಟ್ ಸೆಂಟ್ರಲ್ ರೈಲ್ವೆಯು ಒಟ್ಟು 121 ಹುದ್ದೆಗಳಿಗೆ ನೇಮಕಾತಿ
Railway Recruitment 2022 : ರೈಲ್ವೆ ಇಲಾಖೆಯಲ್ಲಿ ದ್ವಿತೀಯ PUC ಆದವರಿಗೆ ಭರ್ಜರಿ ಉದ್ಯೋಗಾವಕಾಶ! title=

Railway Recruitment 2022 : ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಸುದ್ದಿ ಇದಾಗಿದೆ. ವೆಸ್ಟ್ ಸೆಂಟ್ರಲ್ ರೈಲ್ವೆ ವಿವಿಧ ಹುದ್ದೆಗಳ ನೇಮಕಾತಿಗೆ  ಅರ್ಜಿಗಳನ್ನು ಆಹ್ವಾನಿಸಿದೆ. ಜುಲೈ 8 ರಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕ 28 ಜುಲೈ 2022 ಎಂದು ಕೊನೆಯ ದಿನವಾಗಿದೆ.

ಒಟ್ಟು ಹುದ್ದೆಗಳ

 ವೆಸ್ಟ್ ಸೆಂಟ್ರಲ್ ರೈಲ್ವೆಯು ಒಟ್ಟು 121 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಇವುಗಳಲ್ಲಿ ಸ್ಟೇಷನ್ ಮಾಸ್ಟರ್, ಸ್ಟೇಷನ್ ಕಮರ್ಷಿಯಲ್ ಕಮ್ ಟಿಕೆಟ್ ಮತ್ತು ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳು ಸೇರಿವೆ. NTPC ಗ್ರಾಜುಯೇಟ್ ಹುದ್ದೆಗಳಿಗೆ ಒಟ್ಟು 55 ಹುದ್ದೆಗಳು ಮತ್ತು NTPC 12 ನೇ ಪಾಸ್ ಆದವರಿಗೆ 66 ಖಾಲಿ ಹುದ್ದೆಗಳು ಲಭ್ಯವಿವೆ.

ಇದನ್ನೂ ಓದಿ : AAI Recruitment 2022 : AAI ನಲ್ಲಿ ವಿವಿಧಗಳ ಹುದ್ದೆಗಳಿಗೆ ಅರ್ಜಿ : ಸಂಪೂರ್ಣ ಮಾಹಿತಿಗೆ ಇಲ್ಲಿ ಪರಿಶೀಲಿಸಿ

ಹುದ್ದೆಯ ವಿವರಗಳು

ಸ್ಟೇಷನ್ ಮಾಸ್ಟರ್ -8 ಹುದ್ದೆಗಳು 
ಸೀನಿಯರ್ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ - 38 ಹುದ್ದೆಗಳು
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ - 9 ಹುದ್ದೆಗಳು
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ - 30 ಹುದ್ದೆಗಳು
ಕ್ಲರ್ಕ್ ಕಮ್ ಟೈಪಿಸ್ಟ್ - 8 ಹುದ್ದೆಗಳು
ಟಿಪಿ- 2 ಹುದ್ದೆಗಳಿವೆ.

ಶೈಕ್ಷಣಿಕ ಅರ್ಹತೆ: 

ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು 12 ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಯನ್ನು ಪಡೆದಿರಬೇಕು. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ನೋಡಬಹುದು.

ವಯೋಮಿತಿ: 

ವಿವಿಧ ಹುದ್ದೆಗಳಿಗೆ ಬೇರೆಬೇರೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ರೈಲ್ವೆ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಸಾಮಾನ್ಯ ವರ್ಗಕ್ಕೆ 18 ರಿಂದ 42 ವರ್ಷಗಳು, ಒಬಿಸಿ ವರ್ಗಕ್ಕೆ 18 ರಿಂದ 45 ವರ್ಷಗಳು ಮತ್ತು ಎಸ್‌ಸಿ/ಎಸ್‌ಟಿ ವರ್ಗಕ್ಕೆ 18 ರಿಂದ 47 ವರ್ಷಗಳು ಎಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ : Indian Oil Recruitment 2022 : ಇಂಡಿಯನ್ ಆಯಿಲ್ ನಲ್ಲಿ 39 ಖಾಲಿ ಹುದ್ದೆಗಳಿಗೆ ಅರ್ಜಿ, ಇಲ್ಲಿ ಪರಿಶೀಲಿಸಿ!

ಸಂಬಳ ಎಷ್ಟು? 

ಸ್ಟೇಷನ್ ಮಾಸ್ಟರ್ - 35400 ರೂ.
ಸೀನಿಯರ್ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ - 29200 ರೂ.
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ - 29200 ರೂ.
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ - 21700 ರೂ.
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ - 19900 ರೂ.
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ - 19900 ರೂ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ wcr.indianrailways.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News