Jobs 2022: 10ನೇ ತರಗತಿ ಪಾಸ್ ಆದವರಿಗೆ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಾವಕಾಶ

PSPCL Recruitment 2022: ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸ್‌ಪಿಸಿಎಲ್) 1690 ಅಸಿಸ್ಟೆಂಟ್ ಲೈನ್‌ಮ್ಯಾನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

Written by - Yashaswini V | Last Updated : Jul 18, 2022, 09:56 AM IST
  • ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಜುಲೈ 31, 2022 ರಿಂದ ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ
  • 10ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು
  • ಅರ್ಜಿ ಸಲ್ಲಿಸುವಾಗ, ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು.
Jobs 2022: 10ನೇ  ತರಗತಿ ಪಾಸ್ ಆದವರಿಗೆ ವಿದ್ಯುತ್ ಇಲಾಖೆಯಲ್ಲಿ ಉದ್ಯೋಗಾವಕಾಶ  title=
PSPCL Recruitment 2022

ಪಿಎಸ್‌ಪಿಸಿಎಲ್ ನೇಮಕಾತಿ 2022: ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉದ್ಯೋಗ ಮಾಡಲು ಬಯಸುವ ಯುವಕರಿಗೆ ಗುಡ್ ನ್ಯೂಸ್ ಇದೆ. ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಸ್‌ಪಿಸಿಎಲ್) 1690 ಅಸಿಸ್ಟೆಂಟ್ ಲೈನ್‌ಮ್ಯಾನ್ ಹುದ್ದೆಗಳಿಗೆ ಅರ್ಜಿಗಳನ್ನು  ಆಹ್ವಾನಿಸಿದೆ.  ಸಲ್ಲಿಸುವ ಮೊದಲು ಅರ್ಜಿದಾರರು ಅಧಿಸೂಚನೆಯನ್ನು ಓದುವುದು ಅವಶ್ಯಕ.

ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಜುಲೈ 31, 2022 ರಿಂದ ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಅಭ್ಯರ್ಥಿಗಳು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್, pspcl.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ, ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. 

ಇದನ್ನೂ ಓದಿ- Indian Oil Recruitment 2022 : ಇಂಡಿಯನ್ ಆಯಿಲ್ ನಲ್ಲಿ 39 ಖಾಲಿ ಹುದ್ದೆಗಳಿಗೆ ಅರ್ಜಿ, ಇಲ್ಲಿ ಪರಿಶೀಲಿಸಿ!

10ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು:
10 ನೇ ತರಗತಿ ಪಾಸ್ ಆದವರು, ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ / ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆಯ ಆಧಾರದ ಮೇಲೆ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕವಾಗಿ ಅಭ್ಯರ್ಥಿಗಳು  944 ರೂಪಾಯಿಗಳನ್ನು ವಿಧಿಸಲಾಗುತ್ತದೆ. ಆದರೆ SC ಮತ್ತು PWD ಅಭ್ಯರ್ಥಿಗಳು ರೂ 590 ಪಾವತಿಸಬೇಕಾಗುತ್ತದೆ.

ಯಾವ ತರಗತಿಗಳಿಗೆ ಎಷ್ಟು ಖಾಲಿ ಹುದ್ದೆಗಳಿವೆ:
ಒಟ್ಟು ಖಾಲಿ ಇರುವ ಹುದ್ದೆಗಳು- 1690 
ಈ ಪಟ್ಟಿಯಲ್ಲಿ ಸಾಮಾನ್ಯ - 661, EWS - 167, SC MZB - 171, SC MZB - XSM - ಸ್ವಯಂ / ವಿಭಾಗ - 34, SC MZB - SP - 8, SC OT - 167, SC OT XSM ಸ್ವಯಂ / ವಿಭಾಗ - 34, SC OT SP-9, BC- 168, XSM- 118, PWD- 68, SP- 34, FF-17 ಅನ್ನು ಒಳಗೊಂಡಿದೆ. 

ಇದನ್ನೂ ಓದಿ- SECL Recruitment 2022 : SECL ನಲ್ಲಿ 133 ಮೈನ್ ಸರ್ವೇಯರ್ ಹುದ್ದೆಗಳಿಗೆ ಅರ್ಜಿ : ಜುಲೈ 21 ಕೊನೆ ದಿನ!

ಈ ಕೆಲಸವನ್ನು ಪಡೆಯಲು, ಅಭ್ಯರ್ಥಿಗಳು ಮೊದಲು PSPCL ನ ಅಧಿಕೃತ ವೆಬ್‌ಸೈಟ್ http://www.pspcl.in ಗೆ ಹೋಗಬೇಕು. ಇದರ ನಂತರ, 'ಕೆರಿಯರ್ಸ್ ವಿಭಾಗಕ್ಕೆ' ಹೋಗಿ ನಂತರ, ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ವಿವರಗಳನ್ನು ನಮೂದಿಸಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಅದನ್ನು ಸಲ್ಲಿಸಿದ ನಂತರ, ನೀವು ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News